ಪರಮ್​​ಬೀರ್ ಸಿಂಗ್​​ ವಿರುದ್ಧದ ಪ್ರಕರಣಗಳ ತನಿಖೆ ಸಿಬಿಐಗೆ ವರ್ಗಾಯಿಸಿದ ಸುಪ್ರೀಂಕೋರ್ಟ್

ಇದು ಮಹಾರಾಷ್ಟ್ರದ ಪೊಲೀಸರನ್ನು ಪ್ರತಿಬಿಂಬಿಸುವುದಿಲ್ಲ, ಅವರನ್ನು ಗೌರವಿಸುತ್ತೇವೆ. ಅಧಿಕಾರದಲ್ಲಿರುವ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಆತನ ಕೆಳಗಿನ ವ್ಯಕ್ತಿಗಳು ಹೊರಗೆ ಬಂದು ಎಫ್‌ಐಆರ್ ದಾಖಲಿಸುತ್ತಾರೆ ಎಂಬ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ...

ಪರಮ್​​ಬೀರ್ ಸಿಂಗ್​​ ವಿರುದ್ಧದ ಪ್ರಕರಣಗಳ ತನಿಖೆ ಸಿಬಿಐಗೆ ವರ್ಗಾಯಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Mar 24, 2022 | 6:47 PM

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್​​ಬೀರ್ ಸಿಂಗ್ (Param Bir Singh) ವಿರುದ್ಧದ ಪ್ರಕರಣಗಳ ತನಿಖೆಯನ್ನು ಸುಪ್ರೀಂಕೋರ್ಟ್ (Supreme Court) ಗುರುವಾರ ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಿದೆ. “ನಾವು ಪರಮ್ ಬೀರ್ ಸಿಂಗ್ ವಿಷಿಲ್ ಬ್ಲೋವರ್ ಅಥವಾ ಇದರಲ್ಲಿ ಭಾಗಿಯಾಗಿರುವ ಯಾರೂ ಮುಗ್ಧರು ಎಂದು ನಾವು ಹೇಳುತ್ತಿಲ್ಲ. ಈ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಾದ ಗೊಂದಲದ ಸನ್ನಿವೇಶವು ವಿಚಾರಣೆಗೆ ಅರ್ಹವಾಗಿದೆ  ಎಂದು ಸುಪ್ರೀಂಕೋರ್ಟ್ ಹೇಳಿದೆ.  ರಾಜ್ಯ ಸರ್ಕಾರವು ಮುಂಬೈನ ಮಾಜಿ ಉನ್ನತ ಪೋಲೀಸ್ ಅಮಾನತುಗೊಳಿಸಿದ ವಿಷಯದಲ್ಲಿ ಮಧ್ಯಪ್ರವೇಶಿಸಲು ಕೋರ್ಟ್ ನಿರಾಕರಿಸಿತು. ಇದು ಮಹಾರಾಷ್ಟ್ರದ ಪೊಲೀಸರನ್ನು ಪ್ರತಿಬಿಂಬಿಸುವುದಿಲ್ಲ, ಅವರನ್ನು ಗೌರವಿಸುತ್ತೇವೆ. ಅಧಿಕಾರದಲ್ಲಿರುವ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಆತನ ಕೆಳಗಿನ ವ್ಯಕ್ತಿಗಳು ಹೊರಗೆ ಬಂದು ಎಫ್‌ಐಆರ್ ದಾಖಲಿಸುತ್ತಾರೆ ಎಂಬ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಪೊಲೀಸರ ಹೊರಗಿನ ಏಜೆನ್ಸಿಯಿಂದ ತನಿಖೆಯ ಅಗತ್ಯವಿರುವ ಕೆಲವು ಅಂತರ್-ಸಂಯೋಜಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನಾವು ನಂಬುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.  ಮುಂಬೈನ ಮಾಜಿ ಹಿರಿಯ ಪೋಲೀಸ್ ಪರಮ್​​ಬೀರ್ ಸಿಂಗ್ ವಿರುದ್ಧದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುವುದನ್ನು ಮಹಾರಾಷ್ಟ್ರ ಬಯಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಪರವಾಗಿ ಡೇರಿಯಸ್ ಖಂಬಾಟಾ ವಾದಿಸಿದ್ದರು. ಯಾವುದೇ ತನಿಖೆಗೆ ರಾಜ್ಯದ ಒಪ್ಪಿಗೆ ಅಗತ್ಯ. ಸಿಬಿಐ ತನಿಖೆಗೆ ನಾವು ಒಪ್ಪುವುದಿಲ್ಲ. ಏಕೆಂದರೆ ಅದು ಪೊಲೀಸರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ.

ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬುದನ್ನು ನ್ಯಾಯಾಲಯದ ಮುಂದೆ ಇಟ್ಟಿರುವ ಯಾವುದೇ ಸತ್ಯಗಳು ಸಾಬೀತುಪಡಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಕೇವಲ ಆಧಾರ ರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

“ಅದು ಸರಿಯಲ್ಲ,” ಎಂದು ಹೇಳಿದ ಸುಪ್ರೀಂಕೋರ್ಟ್ “ಕೆಲವೊಮ್ಮೆ ರಾಜ್ಯಗಳು ಸ್ವತಃ ಸಿಬಿಐಗೆ ವಿಷಯಗಳನ್ನು ಕಳುಹಿಸುತ್ತವೆ. ಇದು ಆತ್ಮಸ್ಥೈರ್ಯ ಕುಗ್ಗಿಸುವಂತಿದ್ದರೆ ಸಿಬಿಐಗೆ ಯಾವುದೇ ಪ್ರಕರಣಗಳು ಇರುತ್ತಿರಲಿಲ್ಲ. ಇದು ಬೇಡಿಕೆಗಳ ಅದೇ ಪ್ರಶ್ನೆಗೆ ಸಂಬಂಧಿಸಿದೆ ಎಂದಿದೆ.

ನ್ಯಾಯಾಲಯವು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು, ಅದು “ರಾಜ್ಯ ಪೋಲೀಸರು ತನಿಖೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಾಥಮಿಕ ದೃಷ್ಟಿಕೋನವನ್ನು ರೂಪಿಸಬೇಕು” ಎಂದು ಖಂಬಾಟಾ ವಾದಿಸಿದರು. “ನಾನು ರಾಜ್ಯ ಪೊಲೀಸರನ್ನು ದೂಷಿಸುತ್ತಿಲ್ಲ. ಸಮಸ್ಯೆ ತನಿಖೆಯ ಹಂತದಲ್ಲಿಲ್ಲ. ಸಮಸ್ಯೆ ಬೇರೆ ಹಂತದಲ್ಲಿದೆ’ ಎಂದು ನ್ಯಾಯಾಲಯ ಹೇಳಿದೆ. “ಪರಮ್ ಬೀರ್ ಸಿಂಗ್ ನಡತೆ ಅನುಮಾನಾಸ್ಪದವಾಗಿದೆ. ಅವರು ಯಾರೆಂದು ನೋಡಿ,” ಎಂದು ಖಂಬಾಟಾ ಹೇಳಿದರು. ಇದಕ್ಕೆ ಅಡ್ಡಿಪಡಿಸಿದ ನ್ಯಾಯಾಲಯ “ಅವರು ನಿಮ್ಮ ಪೊಲೀಸ್ ಕಮಿಷನರ್ ಎಂದಿದೆ.

“ಅವರ ನಡತೆಯನ್ನು ನೋಡಿ. ಅವರನ್ನು ಡೈರೆಕ್ಟರ್ ಜನರಲ್ ಆಗಿ ಪೋಸ್ಟ್ ಮಾಡಲಾಗಿದೆ. ಅವರು ತಮ್ಮ ಹುದ್ದೆಯನ್ನು ನಿರ್ವಹಿಸುವ ಬದಲು ಪರಾರಿಯಾಗಿದ್ದಾರೆ. ಅವರು ತನಿಖೆಗೆ ಸಹಕರಿಸುವವರೆಗೂ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಲಯ ಹೇಳಿದ ನಂತರ ಅವರು ತನಿಖೆಗೆ ಸಹಕರಿಸಿದರು ಎಂದು ಖಂಬಾಟಾ ಹೇಳಿದರು.

ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಎಸ್‌ಕೆ ಕೌಲ್, “ಸಿಬಿಐಗೆ ವರ್ಗಾವಣೆ ಮಾಡುವ ಪ್ರತಿಯೊಂದು ವಿಷಯಕ್ಕೂ ನಾನು ಪರವಾಗಿಲ್ಲ. ಅವರಿಗೇಕೆ ಅನವಶ್ಯಕವಾಗಿ ಹೊರೆಯಾಗಬೇಕು? ಆದರೆ ನಾನು ಕೇಳುತ್ತಿದ್ದೇನೆ, ಏನಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚು ಅನುಮಾನಾಸ್ಪದವಾದುದೇನು? ಪೊಲೀಸರು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳು ಪರಸ್ಪರ ಆರೋಪ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಎರಡು ಪ್ರಮುಖ ವ್ಯಕ್ತಿಗಳು ಮತ್ತು ಇಲಾಖೆಗಳಿದ್ದು ತನಿಖೆಯಾಗಬೇಕಿದೆ. ನೀವು ಅವರನ್ನು ಮುಂಬೈನ ಪೊಲೀಸ್ ಕಮಿಷನರ್ ಮಾಡಿದ್ದೀರಿ.

ಪರಮ್ ಬೀರ್ ಸಿಂಗ್ ಪರ ವಾದ ಮಂಡಿಸಿದ ವಕೀಲ ಪುನೀತ್ ಬಾಲಿ, ಮಹಾರಾಷ್ಟ್ರ ಸರ್ಕಾರದ ವಾದವನ್ನು ತಳ್ಳಿಹಾಕಿ, “ನಾನು ಎಂದಿಗೂ ನ್ಯಾಯಾಲಯದಿಂದ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ. ನಾನು ಘಟನೆಗಳ ವಿವರವಾದ ಅನುಕ್ರಮವನ್ನು ನೀಡಿದ್ದೇನೆ. ನನ್ನನ್ನು ಡಿಸೆಂಬರ್ 2020 ರಲ್ಲಿ ಅಮಾನತುಗೊಳಿಸಲಾಯಿತು.

ಎಲ್ಲಾ ಎಫ್‌ಐಆರ್‌ಗಳು ಜೂನ್ ಮತ್ತು ಜುಲೈನಲ್ಲಿ ಹೈಕೋರ್ಟ್‌ನಲ್ಲಿ ವಾದದ ಹಂತದಲ್ಲಿವೆ. ಗೃಹ ಸಚಿವರು ಮತ್ತು ಅಧಿಕಾರದಲ್ಲಿರುವ ಪಕ್ಷದ ಮುಖ್ಯಸ್ಥರು ‘ನಾನು ಈ ಅಧಿಕಾರಿಯನ್ನು ಸರಿಪಡಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಯಾವುದೇ ಪ್ರಕರಣವನ್ನು ನಾನು ನೋಡಿಲ್ಲ.

ನನ್ನ ಅಮಾನತನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆ. ಆದರೆ ಇದು ಸೇವೆಯ ವಿಷಯ ಎಂದು ಅವರು ಹೇಳಿದರು. ನಂತರ ಎಫ್‌ಐಆರ್ ದಾಖಲಿಸಿ ಇದೊಂದು ಕ್ರಿಮಿನಲ್ ಕೇಸ್ ಎಂದು ಹೇಳಿದ್ದರು. ಈ ನಡುವೆ ನನ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಕೆಲವು ಜವಾಬ್ದಾರಿಯುತ ಸಂಸ್ಥೆಗಳು ನನ್ನ ವಿರುದ್ಧ ಏನಾದರೂ ಕಂಡುಬಂದರೆ, ನನ್ನನ್ನು ಗಲ್ಲಿಗೇರಿಸಿ, ನನ್ನನ್ನು ತರಾಟೆಗೆ ತೆಗೆದುಕೊಳ್ಳಿ. ಆದರೆ ದಯವಿಟ್ಟು ನನ್ನನ್ನು ರಾಜ್ಯದ ಕರುಣೆಗೆ ಬಿಡಬೇಡಿ” ಎಂದು ಬಾಲಿ ಮನವಿ ಮಾಡಿದರು.

ಮುಕೇಶ್ ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸದ ಹೊರಗೆ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆಯಾದ ನಂತರ ಪರಮ್ ಬೀರ್ ಸಿಂಗ್ ಅವರನ್ನು ಮಾರ್ಚ್ 2021 ರಲ್ಲಿ ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವಜಾಗೊಳಿಸಲಾಯಿತು. ಅವರನ್ನು ಪದಚ್ಯುತಗೊಳಿಸಿದ ನಂತರ, ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಅಂದಿನ ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969 ರ ಅಡಿಯಲ್ಲಿ ಸಿಂಗ್ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸುವ ಮೂಲಕ ರಾಜ್ಯವು ಪ್ರತೀಕಾರ ತೀರಿಸಿಕೊಂಡಿತು. ಪರಮ್ ಬೀರ್ ಸಿಂಗ್ ಅವರ ವಕೀಲರು ಮುಂಬೈನ ಮಾಜಿ ಹಿರಿಯ ಪೊಲೀಸ್ ಅಧಿಕಾರಿಗೆ ರಕ್ಷಣೆ ಕೋರಿದ್ದು, ಅವರು ನ್ಯಾಯಾಲಯಕ್ಕೆ ಬಂದು ಮಾಜಿ ರಾಜ್ಯ ಸಚಿವರ ವಿರುದ್ಧ ಭ್ರಷ್ಟಾಚಾರದ ವಿಷಯ ಸಿಂಗ್ ಎತ್ತುವ ಧೈರ್ಯವನ್ನು ತೋರಿಸಿದ್ದಾರೆ ಎಂದು ಹೇಳಿದರು. ಸಿಂಗ್ ಅವರು ತಮ್ಮ ವಿರುದ್ಧದ ಎಲ್ಲಾ ತನಿಖೆಗಳನ್ನು ಕೇಂದ್ರೀಯ ಸಂಸ್ಥೆಯಾದ ಸಿಬಿಐಗೆ ಒಪ್ಪಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬಿರ್ಭೂಮ್‌ನಲ್ಲಿ ಮೃತಪಟ್ಟವರ ಕುಟುಂಬ ಭೇಟಿ ಮಾಡಿದ ಮಮತಾ ಬ್ಯಾನರ್ಜಿ; ₹5 ಲಕ್ಷ ಪರಿಹಾರ ಘೋಷಣೆ

Published On - 5:44 pm, Thu, 24 March 22