AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೊಮೋಷನ್ ಬೇಕಿದ್ರೆ ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ, ತಮಿಳುನಾಡು ಸರ್ಕಾರ ಮಹತ್ವದ ಆದೇಶ, ಅಕ್ಟೋಬರ್ 31 ಕಡೆ ದಿನ

ತಮಿಳುನಾಡು ಸರ್ಕಾರವು ಸರ್ಕಾರಿ ನೌಕರರ ಬಡ್ತಿಗಾಗಿ ಆಸ್ತಿ ವಿವರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರ ನಿಯಂತ್ರಿಸಲು ಈ ಮಹತ್ವದ ಆದೇಶ ಹೊರಡಿಸಿದೆ. ನೌಕರರು ಅಕ್ಟೋಬರ್ 31 ರೊಳಗೆ ತಮ್ಮ ಚರ-ಸ್ಥಿರ ಆಸ್ತಿ, ಸಾಲದ ಮಾಹಿತಿಗಳನ್ನು IFHRMS ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಮಾಹಿತಿ ನೀಡದವರಿಗೆ ಬಡ್ತಿ ದೊರೆಯುವುದಿಲ್ಲ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

ಪ್ರೊಮೋಷನ್ ಬೇಕಿದ್ರೆ ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ, ತಮಿಳುನಾಡು ಸರ್ಕಾರ ಮಹತ್ವದ ಆದೇಶ, ಅಕ್ಟೋಬರ್ 31 ಕಡೆ ದಿನ
ವಿಜಯ್ Image Credit source: PTI
ನಯನಾ ರಾಜೀವ್
|

Updated on: Oct 09, 2026 | 10:56 AM

Share

ಚೆನ್ನೈ, ಅಕ್ಟೋಬರ್ 09: ತಮಿಳುನಾಡು ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಬಡ್ತಿ ಪಡೆಯಬೇಕಾದರೆ ತಮ್ಮ ಸಮಗ್ರ ಆಸ್ತಿ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನೌಕರರು ತಮ್ಮ ಚರ-ಸ್ಥಿರ ಆಸ್ತಿ, ಉಳಿತಾಯ ಹಾಗೂ ಸಾಲದ ಮಾಹಿತಿಯನ್ನು ಅಕ್ಟೋಬರ್ 31 ರೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಕಟ್ಟುನಿಟ್ಟಿನ ಗಡುವು ನೀಡಲಾಗಿದೆ.

ಬಡ್ತಿಗೆ ಆಸ್ತಿ ವಿವರವೇ ಮಾನದಂಡ

ನಿಗದಿತ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸುವ ನೌಕರರ ಹೆಸರುಗಳನ್ನು ಮಾತ್ರ ಮುಂದಿನ ಬಡ್ತಿ ಪರಿಗಣನಾ ಪಟ್ಟಿಗೆ ಸೇರಿಸಲಾಗುತ್ತದೆ. ಮಾಹಿತಿ ನೀಡದವರಿಗೆ ಬಡ್ತಿ ಭಾಗ್ಯ ಇರುವುದಿಲ್ಲ. ಕೇವಲ ಸ್ವಂತ ಹೆಸರಿನಲ್ಲಿರುವ ಆಸ್ತಿ ಮಾತ್ರವಲ್ಲದೆ, ಬೇರೆಯವರ ಹೆಸರಿನಲ್ಲಿ (ಬೆನಾಮಿ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ) ಖರೀದಿಸಿರುವ ಆಸ್ತಿ ವಿವರಗಳನ್ನೂ ನಮೂದಿಸಬೇಕು. ಜೊತೆಗೆ ಆ ವ್ಯಕ್ತಿಯೊಂದಿಗಿನ ಸಂಬಂಧವನ್ನೂ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯ.

ನಿಯಮ ಉಲ್ಲಂಘನೆ ಎಂದು ಪರಿಗಣನೆ:

ಅಕ್ಟೋಬರ್ 31 ರೊಳಗೆ ಮಾಹಿತಿ ನೀಡಲು ವಿಫಲರಾಗುವ ನೌಕರರನ್ನು ‘ಸರ್ಕಾರಿ ನೌಕರರ ನಡವಳಿಕೆ ನಿಯಮಾವಳಿ’ಯನ್ನು ಉಲ್ಲಂಘಿಸಿದವರು ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನೌಕರರು ಸರ್ಕಾರದ ಅಧಿಕೃತ ಪೋರ್ಟಲ್ ಆದ IFHRMS (Integrated Financial and Human Resources Management System – ಸಮಗ್ರ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ವೆಬ್‌ಸೈಟ್‌ಗೆ ಲಾಗಿನ್ ಆಗಿ ಈ ವಿವರಗಳನ್ನು ಸಲ್ಲಿಸಬೇಕು.

ಮತ್ತಷ್ಟು ಓದಿ: ಮಗನ ಚಿತ್ರದ ಪೋಸ್ಟರ್ ಎತ್ತಿಹಿಡಿದ ತಮಿಳುನಾಡು ಸಿಎಂ ವಿಜಯ್; ‘ಸಿಗ್ಮಾ’ ಚಿತ್ರಕ್ಕೆ ಸಿಕ್ಕಿತು ತಂದೆಯ ಬೆಂಬಲ

ಸಲ್ಲಿಸಬೇಕಾದ ವಿವರಗಳು:

ಸ್ಥಿರ ಆಸ್ತಿಗಳು (ಸೈಟು, ಮನೆ, ಕೃಷಿ ಜಮೀನು ಇತ್ಯಾದಿ)

ಚರ ಆಸ್ತಿಗಳು (ಚಿನ್ನ, ವಾಹನಗಳು ಇತ್ಯಾದಿ)

ಬ್ಯಾಂಕ್ ಉಳಿತಾಯ ಮತ್ತು ಠೇವಣಿಗಳು

ನೌಕರರು ಹೊಂದಿರುವ ಸಾಲಗಳು ಮತ್ತು ಹೊಣೆಗಾರಿಕೆಗಳು

ಆಡಳಿತ ಸುಧಾರಣೆ

ಮುಖ್ಯ ಕಾರ್ಯದರ್ಶಿ ಸಾಯಿಕುಮಾರ್ ಹೊರಡಿಸಿರುವ ಈ ಸುತ್ತೋಲೆಯು ನೌಕರರ ಆದಾಯ ಮೀರಿ ಆಸ್ತಿ ಗಳಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಗಳಿಗೆ ವಾರ್ಷಿಕ ಆಸ್ತಿ ವಿವರ ಸಲ್ಲಿಕೆ ಕಡ್ಡಾಯವಾಗಿರುವಂತೆಯೇ, ಈಗ ರಾಜ್ಯ ಮಟ್ಟದ ಎಲ್ಲಾ ನೌಕರರಿಗೂ ಇದನ್ನು ಬಡ್ತಿಯೊಂದಿಗೆ ನೇರವಾಗಿ ಲಿಂಕ್ ಮಾಡಲಾಗಿದೆ. IFHRMS ವ್ಯವಸ್ಥೆಯ ಮೂಲಕ ಆಸ್ತಿ ವಿವರಗಳು ವೇತನ, ಪಿಂಚಣಿ ಮತ್ತು ಸೇವಾ ದಾಖಲೆಗಳ ಜೊತೆ ಡಿಜಿಟಲ್ ರೂಪದಲ್ಲಿ ಜೋಡಣೆಯಾಗುವುದರಿಂದ ಸುಳ್ಳು ಮಾಹಿತಿ ನೀಡುವುದು ಅಥವಾ ಆಸ್ತಿ ಮುಚ್ಚಿಡುವುದು ಕಷ್ಟಕರವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More