ಐವರು ವಿದ್ಯಾರ್ಥಿಗಳನ್ನೊಳಗೊಂಡ ಭಾರತದ ‘ಸಾಫ್ ವಾಟರ್ ’ ಟೀಮಿಗೆ ಐಬಿಎಮ್ನ ಪ್ರತಿಷ್ಠಿತ ಕೋಡ್ ಗ್ಲೋಬಲ್ ಚಾಲೆಂಜ್ ಪ್ರಶಸ್ತಿ
‘ಸಾಫ್ ವಾಟರ್’ ತಂಡವು ತನ್ನ ಯೋಜನೆಯನ್ನು ಲಾಂಚ್ ಮಾಡಲು ಇನ್ನು ಮುಂದೆ ಐಬಿಎಮ್, ವಿಶ್ವಸಂಸ್ಥೆ, ಡೇವಿಡ್‌ಕ್ಲಾರ್ಕ್‌ಕಾಸ್, ಲಿನಕ್ಸ್ ಫೌಂಡೇಶನ್ ಮತ್ತು ಕಾಲ್ ಫಾರ್ ಕೋಡ್ ಚಳುವಳಿಯ ಇತರ ಪಾಲುದಾರರಿಂದ ಬೆಂಬಲ ಪಡೆಯುತ್ತದೆ.
ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂಥ ವಿಷಯ. ಫ್ಲೇಮ್ (ಎಫ್ ಎಲ್ ಎ ಎಮ್ ಇ) ಯುನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಅಂಡರ್ ಗ್ರ್ಯಾಜುಯೇಟ್ ವಿದ್ಯಾರ್ಥಿಯಾಗಿರುವ ಮಣಿಕಂಠ ಚವ್ವಕುಳ ಅವರೊಂದಿಗೆ, ಐಐಟಿ ಮದ್ರಾಸ್ನ ಹೃಷಿಕೇಶ್ ಭಂಡಾರಿ, ಇದೇ ಕಾಲೇಜಿನ ಸತ್ಯ ಪ್ರಕಾಶ್, ಸಂಕೇತ್ ಮರಾಠೆ ಮತ್ತು ಜೇ ಅಹೆರ್ಕರ್ ಅವರನ್ನೊಳಗೊಂಡ ‘ಸಾಫ್ ವಾಟರ್’ ತಂಡಕ್ಕೆ ಪ್ರತಿಷ್ಠಿತ ಕೋಡ್ ಗ್ಲೋಬಲ್ ಚಾಲೆಂಜ್ ಪ್ರಶಸ್ತಿ ಸಿಕ್ಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೇರಿದಂತೆ ಸುಸ್ಥಿರತೆ, ವ್ಯಾಪಾರ ಮತ್ತು ತಂತ್ರಜ್ಞಾನದ ಕ್ಷೇತ್ರಗಳ ಕೆಲ ಪ್ರಮುಖ ನಾಯಕರನ್ನೊಳಗೊಂಡ ಸಮಿತಿಯೊಂದು ಟೀಮ್ ‘ಸಾಫ್ ವಾಟರ್’ಗೆ 200,000 ಯುಎಸ್ ಡಾಲರ್ಗಳ ಬಹುಮಾನವನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಭಾರತದ ಮೊದಲ ತಂಡ ಇದಾಗಿದೆ.
ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಖ್ಯಾತ ಲೇಖಕರೂ ಅಗಿರುವ ಅಮಿತಾಬ್ ಕಾಂತ್ ಅವರು, ‘ಸಾಫ್ ವಾಟರ್’ ತಂಡವನ್ನು ಅಭಿನಂದಿಸಿದ್ದು ಸುಮಾರು 180 ದೇಶಗಳ 5,00,000 ತಂಡಗಳ ಪೈಕಿ ಈ ತಂಡ ಪ್ರಶಸ್ತಿಗೆ ಭಾಜನವಾಗಿ, 200,000 ಯುಎಸ್ ಡಾಲರ್ಗಳ ಬಹುಮಾನ ಗಳಿಸಿರುವುದು ಭಾರತೀಯರಿಗೆ ನಿಜಕ್ಕೂ ಬಹಳ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Team "Saaf Water", a brainchild of 5 alumni of Atal Tinkering Labs of @NITIAayog’s @AIMtoInnovate have won IBM’s Call for Code award of USD 200K. From 500,000 teams from across 180 countries, they were chosen as winners of the grand award. A truly proud moment for India! (1/2) pic.twitter.com/hCz7acsm9q
— Amitabh Kant (@amitabhk87) November 29, 2021
ಕಾಲ್ ಫಾರ್ ಕೋಡ್ ಎನ್ನುವುದು ಡೆವಲಪರ್‌ಗಳಿಗೆ ತಮ್ಮ ಕೌಶಲ್ಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಿಶ್ವದೆಲ್ಲೆಡೆ ಪಾಸಿಟಿವ್ ಮತ್ತು ಶಾಶ್ವತವಾದ ಬದಲಾವಣೆ ತರುವ ದಿಶೆಯಲ್ಲಿ ಅವಕಾಶವನ್ನು ಒದಗಿಸುವ ಒಂದು ವೇದಿಕೆಯಾಗಿದೆ. ಅತ್ಯುತ್ತಮ ಅಂತ ಪರಿಗಣಿಸಬಹುದಾದ ಸಲ್ಯೂಶನ್ಗಳನ್ನು ಐಬಿಎಮ್ ಮತ್ತು ಲಿನಕ್ಸ್ ಪ್ರತಿಷ್ಠಾನಗಳಂಥ ಪಾಲುದಾರರ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿ ಅವುಗಳನ್ನು ಪೋಷಿಸಲಾಗುತ್ತದೆ ಮತ್ತು ಸಮರ್ಥನೀಯ ಮುಕ್ತ ಮೂಲ ಯೋಜನೆಗಳಾಗಿ ನಿಯೋಜಿಸಲಾಗುತ್ತದೆ.
‘ಸಾಫ್ ವಾಟರ್’ ತಂಡವು ತನ್ನ ಯೋಜನೆಯನ್ನು ಲಾಂಚ್ ಮಾಡಲು ಇನ್ನು ಮುಂದೆ ಐಬಿಎಮ್, ವಿಶ್ವಸಂಸ್ಥೆ, ಡೇವಿಡ್‌ಕ್ಲಾರ್ಕ್‌ಕಾಸ್, ಲಿನಕ್ಸ್ ಫೌಂಡೇಶನ್ ಮತ್ತು ಕಾಲ್ ಫಾರ್ ಕೋಡ್ ಚಳುವಳಿಯ ಇತರ ಪಾಲುದಾರರಿಂದ ಬೆಂಬಲ ಪಡೆಯುತ್ತದೆ.
‘ಸಾಫ್ ವಾಟರ್’ ಯೋಜನೆಯು ವೈ-ಫೈ ಮತ್ತು ಸೆಲ್ಯುಲಾರ್-ಬೆಂಬಲಿತ ಸಾಧನವಾಗಿದ್ದು, ಇದನ್ನು ಬೇರೆ ಬೇರೆ ಬಗೆಯ ಪಂಪ್‌ಗಳಲ್ಲಿ ಅಳವಡಿಸಬಹುದಾಗಿದೆ, ಇದು ಕರಗಿದ ಒಟ್ಟು ಘನವಸ್ತುಗಳು, ಪ್ರಕ್ಷುಬ್ಧತೆ, ಪಿಎಚ್, ವಿದ್ಯುತ್ ವಾಹಕತೆ ಮತ್ತು ತಾಪಮಾನದಂತಹ ಮಾಹಿತಿಯನ್ನು ಸಂಗ್ರಹಿಸುವ ಸೆನ್ಸರ್ಗಳನ್ನು ತಯಾರು ಮಾಡುತ್ತದೆ. ಸದರಿ ಸಾಧನವು ತಾನು ಸಂಗ್ರಹಿಸುವ ಡೇಟಾವನ್ನು ಅದನ್ನು ವಿಶ್ಲೇಷಿಸುವ ಕ್ಲೌಡ್‌ನಲ್ಲಿರುವ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡುತ್ತದೆ.
ನೀರಿನಲ್ಲಿ ಕಲ್ಮಷ ಕಂಡುಬಂದಾಗ, ಪಂಪ್‌ನ ಎಲ್ಇಡಿ ಎಚ್ಚರಿಕೆ ದೀಪಗಳು ಹೊತ್ತಿಕೊಳ್ಳುತ್ತವೆ ಮತ್ತು ಬಳಕೆದಾರರಿಗೆ ಟೆಕ್ಸ್ಟ್ ಸಂದೇಶ ರವಾನೆಯಾಗುತ್ತದೆ.
ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆಯುವ ಮಸೂದೆ ಮಂಡನೆಗೆ ಅಡ್ಡಿ: ವಿರೋಧ ಪಕ್ಷಗಳ ಉದ್ದೇಶ ಪ್ರಶ್ನಿಸಿದ ಸಚಿವ ಪ್ರಲ್ಹಾದ್ ಜೋಶಿ
Published On - 12:50 am, Tue, 30 November 21