ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್, ಫಾರಂ ಭರ್ತಿ ಬೇಕಿಲ್ಲ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಘೋಷಣೆ

Telecom Reforms: ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆ ಸರಳೀಕರಣ ಮಾಡಲಿದ್ದೇವೆ. ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಬದಲಾದಾಗ ಕೆವೈಸಿ ಹೆಚ್ಚುವರಿ ದಾಖಲೆ ಬೇಕಿಲ್ಲ ಎಂದು ಅವರು ತಿಳಿಸಿದರು.

ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್, ಫಾರಂ ಭರ್ತಿ ಬೇಕಿಲ್ಲ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಘೋಷಣೆ
ಅಶ್ವಿನಿ ವೈಷ್ಣವ್
Follow us
TV9 Web
| Updated By: guruganesh bhat

Updated on:Sep 15, 2021 | 4:33 PM

ದೆಹಲಿ: ಹೊಸ ಸಿಮ್ ಕಾರ್ಡ್ ಪಡೆಯಲು ಯಾವುದೇ ಫಾರಂ ಭರ್ತಿ ಮಾಡುವ ಅಗತ್ಯವಿಲ್ಲ. ಹೊಸ ಸಿಮ್ ಕಾರ್ಡ್ ಕೊಳ್ಳುವ ಪ್ರಕ್ರಿಯೆ ಇನ್ನುಮುಂದೆ ಸಂಪೂರ್ಣ ಡಿಜಿಟಲೈಸ್ ಆಗಿರುತ್ತದೆ ಎಂದು (ಸೆಪ್ಟೆಂಬರ್ 15) ನಡೆದ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈಕುರಿತು ಕೇಂದ್ರದ ಟೆಲಿಕಾಂ ಖಾತೆ ಸಚಿವ ಅಶ್ವಿನ್ ವೈಷ್ಣವ್ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದರು.ಮೊಬೈಲ್ ಸಿಮ್ ಕಾರ್ಡ್ ದಾಖಲೆಗಳು, ಕೆವೈಸಿ ಎಲ್ಲವೂ ಡಿಜಿಟಲೈಜ್ ಆಗಿರಲಿದೆ. ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆ ಸರಳೀಕರಣ ಮಾಡಲಿದ್ದೇವೆ. ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಬದಲಾದಾಗ ಕೆವೈಸಿ ಹೆಚ್ಚುವರಿ ದಾಖಲೆ ಬೇಕಿಲ್ಲ. 4G, 5G ಟೆಕ್ನಾಲಜಿಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕ್ಯಾಬಿನೆಟ್ ಸಭೆಯ ತೀರ್ಮಾನಗಳ ವಿವರ ನಾನ್ ಟೆಲಿಕಾಂ ಆದಾಯವನ್ನು ಎಜಿಆರ್ನಿಂದ ಹೊರಗಿಡಲಾಗುತ್ತದೆ. ನಾನ್ ಟೆಲಿಕಾಂ ಆದಾಯವು ಇನ್ನೂ ಮುಂದೆ ಎಜಿಆರ್ ಭಾಗವಾಗಿರುವುದಿಲ್ಲ. 20 ವರ್ಷದ ಬಳಿಕ ಸ್ಪೆಕ್ಟ್ರಮ್ ಅನ್ನು ಸರೆಂಡರ್ ಮಾಡಬಹುದು. ಸ್ಪೆಕ್ಟ್ರಮ್ ಕ್ಷೇತ್ರದಲ್ಲಿ ಶೇಕಡಾ 100ರಷ್ಟು ವಿದೇಶಿ‌ ನೇರ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ.

ಟೆಲಿಕಾಂ ಕಂಪನಿಗಳ ಎಜಿಆರ್ ಬಾಕಿ ಹಣದ ಪಾವತಿಗೆ ನಾಲ್ಕು ವರ್ಷಗಳ ಮಾರಾಟೋರಿಯಂಗೆ ಒಪ್ಪಿಗೆ ನೀಡಿದೆ. ಆದರೆ ಮಾರಾಟೋರಿಯಂನ‌ 4 ವರ್ಷದ ಅವಧಿಯ ಬಡ್ಡಿಯನ್ನು ಪಾವತಿಸಬೇಕು ಎಂದು ತಿಳಿಸಿರುವ ಅವರ ಘೋಷಣೆಯಿಂದ ಕೇಂದ್ರ ಸರ್ಕಾರ ವೋಡಾಪೋನ್ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್ ನೀಡಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಹೆಚ್ಚಿನ ಕಂಪನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಇರಬೇಕು ಎನ್ನುವುದು ಸರ್ಕಾರದ ಬಯಕೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧೆ ಇರಬೇಕು. ಗ್ರಾಹಕರಿಗೆ ಕಂಪನಿ ಸೇವೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಬೇಕು. ಮಾರಾಟೋರಿಯಂ ಅವಧಿಯಲ್ಲಿ ಮೊತ್ತದ ಬಡ್ಡಿ ಪಾವತಿಸುವುದರಿಂದ ಸರ್ಕಾರದ ಆದಾಯಕ್ಕೆ ರಕ್ಷಣೆ ಸಿಗಲಿದೆ. ಮಾರಾಟೋರಿಯಂ ಸೌಲಭ್ಯ ಇಡೀ ಟೆಲಿಕಾಂ ಕ್ಷೇತ್ರಕ್ಕೆ ಅನ್ವಯವಾಗಲಿದೆ.

ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಘೋಷಣೆ ಮಾಡಲಾಗಿದೆ. 5 ವರ್ಷಗಳ ಕಾಲ ಪಿಎಲ್ಐ ಸ್ಕೀಮ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚುವರಿ 7.6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಪಿಎಲ್ಐ ಸ್ಕೀಮ್ ನಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ 42,500 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆಯಿದೆ. ಡ್ರೋನ್ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಣೆಯ ಗುರಿಯಿದೆ. ಡ್ರೋನ್ ಉತ್ಪಾದನೆಗೆ ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಜಾರಿಗೊಳಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅನುರಾಗ್ ಠಾಕೂರ್ ತಿಳಿಸಿದರು.

ಇದನ್ನೂ ಓದಿ: 

ಜಿಯೋಗೆ ಕ್ರಾಂತಿಕಾರಿ 5 ವರ್ಷ: ಅಗ್ಗವಾಗಿಸಿದ ಮೊಬೈಲ್​ ಸೇವೆ, ಟೆಲಿಕಾಂ ಗ್ರಾಹಕರಿಗೆ ಹರ್ಷವೋ ಹರ್ಷ- ಭವಿಷ್ಯ ಇನ್ನೂ ಆಶಾದಾಯಕ

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ

(Telecom Reforms Minister Ashwini Vaishnav announce 100 percent FDI in telecom sim card buying process is fully digitalized in future)

Published On - 4:18 pm, Wed, 15 September 21

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್