Delhi Bus: ಬಸ್ಸಿನಲ್ಲಿ ಹುಡುಗಿಯ ಮುಂದೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ, ಸಿಕ್ಕಿಬಿದ್ದಾಗ ಆತ ಮಾಡಿದ್ದೇನು
ಬಸ್‌ನಲ್ಲಿ ವ್ಯಕ್ತಿಯೊಬ್ಬ ಹುಡುಗಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ದೆಹಲಿ: ಬಸ್‌ನಲ್ಲಿ ವ್ಯಕ್ತಿಯೊಬ್ಬ ಹುಡುಗಿಯ ಮುಂದೆ ಹಸ್ತಮೈಥುನ (masturbated) ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ (Delhi) ರೋಹಿಣಿ ಪ್ರದೇಶದಲ್ಲಿ ನಡೆದಿದೆ ಎಂದು ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸಿಬ್ಬಂದಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿ ಆರೋಪಿಸಿದ್ದಾರೆ. ಆದರೆ ಆತನ ಮೇಲೆ ಯಾವುದೇ ದೂರು ದಾಖಲಾಗದ ಕಾರಣ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ವೈರಲ್ ವೀಡಿಯೊ ಪ್ರಕಾರ, ಆರೋಪಿ ಮಂಗಳವಾರ ಡಿಟಿಸಿ ಬಸ್‌ನಲ್ಲಿ ಹುಡುಗಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ತಕ್ಷಣ ಆಕೆ ಕೂಗಿಕೊಂಡಿದ್ದಾಳೆ, ಬಸ್‌ನಲ್ಲಿ ನಿಯೋಜಿಸಿದ ಮಾರ್ಷಲ್ ಸಂದೀಪ್ ಚಕಾರ ಆತನನ್ನು ಹಿಡಿದಿದ್ದಾರೆ. ಸಿಕ್ಕಿಬಿದ್ದ ನಂತರ ಆರೋಪಿ ಅಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಬಿಹಾರದ ನಿವಾಸಿಯಾಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಇನ್ನೂ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಯುವತಿ ಮೇಲೆ ಅತ್ಯಾಚಾರವಾಗಿಲ್ಲ, ಮೆದುಳು ನಾಪತ್ತೆ: ಮರಣೋತ್ತರ ಪರೀಕ್ಷೆ ವರದಿಯ ಸ್ಪೋಟಕ ಮಾಹಿತಿ ಬಹಿರಂಗ
ಬುಧವಾರ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಠಾಣೆಯ ಉತ್ತರ ರೋಹಿಣಿ ಸಬ್‌ಇನ್ಸ್‌ಪೆಕ್ಟರ್ ಸುಮನ್ ನೇತೃತ್ವದಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಹುಡುಗಿ ತನ್ನ ಹೇಳಿಕೆಯನ್ನು ದಾಖಲಿಸಲು ಅಥವಾ ಈ ಸಂಬಂಧ ಯಾವುದೇ ದೂರು ನೀಡಲು ಸಂಪರ್ಕಿಸಿದರೂ ಆಕೆ ನಿರಾಕರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Thu, 5 January 23