AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆ ಮೇಲೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಾಟ್ನಾದ ಜನ ಸಂದಣಿಯ ಪ್ರದೇಶದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಬಬ್ಲು ಕುಮಾರ್ ರಜೆಯ ಮೇಲೆ ಮನೆಗೆ ಬಂದಿದ್ದರು.

ರಜೆ ಮೇಲೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು
TV9 Web
| Edited By: |

Updated on: Aug 18, 2022 | 6:21 PM

Share

ಪಾಟ್ನಾ: ಇಂದು ಬೆಳಗ್ಗೆ ಪಾಟ್ನಾದ ಜನ ಸಂದಣಿಯ ಪ್ರದೇಶದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಬಬ್ಲು ಕುಮಾರ್ ರಜೆಯ ಮೇಲೆ ಮನೆಗೆ ಬಂದಿದ್ದರು.

ಯೋಧ ತನ್ನ ಸಹೋದರನೊಂದಿಗೆ ಪಟ್ಲಿಪುತ್ರ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬೈಕ್​ನಲ್ಲಿ ಬಂದು ವಿಳಾಸ ಕೇಳುವಂತೆ ನಟಿಸಿದ್ದಾರೆ. ಬೈಕ್ ನಿಲ್ಲಿಸಿದಾಗ ತಲೆಗೆ ಗುಂಡು ಹಾರಿಸಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಯೋಧನನ್ನು ಕುಮಾರ್ ಎಂದು ಗುರುತಿಸಲಾಗಿದೆ, ಆತನ ಸಹೋದರನ ಮೇಲೂ ಗುಂಡು ಹಾರಿಸಲು ಪ್ರಯತ್ನಿಸಿದರು ಆದರೆ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.