AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಕದಿಯಲು ಹೋಗಿ ಪ್ರಯಾಣಿಕರ ಕೈಗೆ ಸಿಕ್ಕಿ ಕಿಟಕಿ ಹಿಡಿದು ನೇತಾಡಿದ ಕಳ್ಳ

ಬಿಹಾರದ ಭಾಗಲ್ಪುರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಕದಿಯಲು ಯತ್ನಿಸಿದ ಕಳ್ಳ ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದ. ಕಿಟಕಿಯಿಂದ ನೇತಾಡುತ್ತಾ ಸಾಗಿದ ಆತನನ್ನು ನಂತರ ಆರ್.ಪಿ.ಎಫ್ ವಶಕ್ಕೆ ಪಡೆದರು. ಇಂತಹ ಘಟನೆಗಳು ಹೆಚ್ಚುತ್ತಿದ್ದು, ರೈಲು ನಿಲ್ದಾಣಗಳಲ್ಲಿ ಮೊಬೈಲ್ ಬಳಸುವಾಗ ಜಾಗರೂಕರಾಗಿರುವಂತೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.

ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಕದಿಯಲು ಹೋಗಿ ಪ್ರಯಾಣಿಕರ ಕೈಗೆ ಸಿಕ್ಕಿ ಕಿಟಕಿ ಹಿಡಿದು ನೇತಾಡಿದ ಕಳ್ಳ
ಕಳ್ಳ
ನಯನಾ ರಾಜೀವ್
|

Updated on: Oct 13, 2026 | 3:25 PM

Share

ಭಾಗಲ್ಪುರ, ಅಕ್ಟೋಬರ್ 13: ಚಲಿಸುತ್ತಿದ್ದ ರೈಲಿನಲ್ಲಿ ಕಿಟಕಿಯಿಂದ ಕೈಹಾಕಿ ಪ್ರಯಾಣಿಕರ ಮೊಬೈಲ್ ಕದಿಯಲು ಹೋಗಿ ಕಳ್ಳ ಜನರ ಕೈಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ಬಿಹಾರದ ಭಾಗಲ್ಪುರದ ಜಿಲ್ಲೆಯ ಶಿವನಾರಾಯಣಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಕಿಟಕಿಯ ಬಳಿ ಕುಳಿತಿದ್ದ ಪ್ರಯಾಣಿಕನಿಂದ ಫೋನ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ, ಎಚ್ಚೆತ್ತ ಪ್ರಯಾಣಿಕರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಆತ ಚಲಿಸುವ ರೈಲಿನ ಹೊರಗಡೆಯೇ ನೇತಾಡುತ್ತಾ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೈಲು ನಿಧಾನವಾಗಿ ನಿಲ್ದಾಣ ಬಿಟ್ಟು ಚಲಿಸಲು ಪ್ರಾರಂಭಿಸಿದಾಗ, ಕಿಟಕಿ ಹೊರಗಡೆಯಿಂದ ಯುವಕನೊಬ್ಬ ಪ್ರಯಾಣಿಕನ ಕೈಯಲ್ಲಿದ್ದ ಸ್ಮಾರ್ಟ್‌ಫೋನ್‌ ಕದಿಯಲು ಕೈಹಾಕಿದ್ದಾನೆ. ಆದರೆ ಪ್ರಯಾಣಿಕ ಹಾಗೂ ಪಕ್ಕದಲ್ಲಿದ್ದವರು ತಕ್ಷಣವೇ ಪ್ರತಿಕ್ರಿಯಿಸಿ ಆತನ ಮಣಿಕಟ್ಟನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆ ಆತನಿಗೆ ಕೆಳಗೆ ಇಳಿಯಲು ಅಥವಾ ಕೈ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಿಟಕಿಯ ಸರಳುಗಳಿಗೆ ತೂಗಾಡುತ್ತಾ, ಪ್ಲಾಟ್‌ಫಾರ್ಮ್‌ನಲ್ಲಿ ಓಡಲಾಗದೆ, ತನ್ನನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಲ್ಲಿ ಜೋರಾಗಿ ಅಂಗಲಾಚಿದ್ದಾನೆ.

ವಿಡಿಯೋ

ಪ್ಲಾಟ್‌ಫಾರ್ಮ್ ತುದಿಯಲ್ಲಿ ಪಲ್ಟಿ: ರೈಲು ಪ್ಲಾಟ್‌ಫಾರ್ಮ್‌ನ ಅಂಚಿಗೆ ತಲುಪುತ್ತಿದ್ದಂತೆ ಆತನ ಹಿಡಿತ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಹಾಗೂ ಜಿಆರ್‌ಪಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರ ಮತ್ತು ಬಂಗಾಳ ಗಡಿಭಾಗದ ನಿಲ್ದಾಣಗಳಲ್ಲಿ ರೈಲು ನಿಧಾನವಾಗುವ ಸ್ಥಳಗಳಲ್ಲಿ ಹಳಿಗಳ ಪಕ್ಕ ನಿಂತು ಕಿಟಕಿ ಪಕ್ಕ ಕುಳಿತಿರುವ ಪ್ರಯಾಣಿಕರ ಮೊಬೈಲ್ ಮತ್ತು ಬ್ಯಾಗ್‌ಗಳನ್ನು ಕಸಿಯುವ ಸಂಘಟಿತ ಗ್ಯಾಂಗ್‌ಗಳು ಸಕ್ರಿಯವಾಗಿವೆ.

ಮತ್ತಷ್ಟು ಓದಿ: Video: ಎರಡೂವರೆ ವರ್ಷಗಳ ಬಳಿಕ ಅಮೆರಿಕದಿಂದ ಮಗಳ ಆಗಮನ, ಕಣ್ಣೀರಿಟ್ಟ ಹೆತ್ತವರು

ಈ ಹಿಂದೆಯೂ ಬೇಗುಸರಾಯ್ ಮತ್ತು ಸುಲ್ತಾನ್‌ಗಂಜ್ ಮಾರ್ಗಗಳಲ್ಲಿ ಇದೇ ರೀತಿ ಮೊಬೈಲ್ ಕಳ್ಳರನ್ನು ಪ್ರಯಾಣಿಕರು ಕಿಟಕಿಯಲ್ಲೇ 10–15 ಕಿ.ಮೀ ದೂರದವರೆಗೆ ನೇತಾಡಿಸಿಕೊಂಡು ಮುಂದಿನ ನಿಲ್ದಾಣಕ್ಕೆ ತಂದು ಪೊಲೀಸರಿಗೆ ಒಪ್ಪಿಸಿದ ಘಟನೆಗಳು ನಡೆದು ವೈರಲ್ ಆಗಿದ್ದವು. ರೈಲು ನಿಲ್ದಾಣಗಳನ್ನು ಪ್ರವೇಶಿಸುವಾಗ ಅಥವಾ ಹೊರಡುವಾಗ ಕಿಟಕಿಯ ಬದಿಯಲ್ಲಿ ಕುಳಿತು ಮೊಬೈಲ್ ಬಳಸದಂತೆ ಹಾಗೂ ಜಾಗರೂಕರಾಗಿರುವಂತೆ ರೈಲ್ವೆ ರಕ್ಷಣಾ ಪಡೆ ಪ್ರಯಾಣಿಕರಿಗೆ ಮನವಿ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್