ತೂಕದ ಕುರಿತು ಅಪಹಾಸ್ಯ, 20 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಸ್ನೇಹಿತರಿಗೆ ಗುಂಡು ಹಾರಿಸಿದ ವ್ಯಕ್ತಿ

ಬೊಜ್ಜು ಕುರಿತು ಅಪಹಾಸ್ಯ ಮಾಡಿದ ಸ್ನೇಹಿತರನ್ನು ವ್ಯಕ್ತಿಯೊಬ್ಬ 20 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಗುಂಡು(Firing) ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ತೂಕವನ್ನು ನೋಡಿ ಗೇಲಿ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರನ್ನು 20 ಕಿಲೋಮೀಟರ್ ದೂರ ಬೆನ್ನಟ್ಟಿ ಹೋಗಿ ಗುಂಡು ಹಾರಿಸಿದ್ದಾನೆ. ಮೇ 2 ರ ಸಂಜೆ ತರ್ಕುಲಾ ದೇವಿ ದೇವಸ್ಥಾನದಲ್ಲಿ ನಡೆದ ಪಾರ್ಟಿಯ ಸಂದರ್ಭದಲ್ಲಿ ಈ ಜಗಳ ನಡೆದಿತ್ತು. ಆರೋಪಿ ಅರ್ಜುನ್ ಚೌಹಾಣ್ ತನ್ನ ಚಿಕ್ಕಪ್ಪನೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ.

ತೂಕದ ಕುರಿತು ಅಪಹಾಸ್ಯ, 20 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಸ್ನೇಹಿತರಿಗೆ ಗುಂಡು ಹಾರಿಸಿದ ವ್ಯಕ್ತಿ
ಗುಂಡು

Updated on: May 11, 2025 | 11:01 AM

ಗೋರಖ್​ಪುರ, ಮೇ 11: ಬೊಜ್ಜು ಕುರಿತು ಅಪಹಾಸ್ಯ ಮಾಡಿದ ಸ್ನೇಹಿತರನ್ನು ವ್ಯಕ್ತಿಯೊಬ್ಬ 20 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಗುಂಡು(Firing) ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ತೂಕವನ್ನು ನೋಡಿ ಗೇಲಿ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರನ್ನು 20 ಕಿಲೋಮೀಟರ್ ದೂರ ಬೆನ್ನಟ್ಟಿ ಹೋಗಿ ಗುಂಡು ಹಾರಿಸಿದ್ದಾನೆ.

ಮೇ 2 ರ ಸಂಜೆ ತರ್ಕುಲಾ ದೇವಿ ದೇವಸ್ಥಾನದಲ್ಲಿ ನಡೆದ ಪಾರ್ಟಿಯ ಸಂದರ್ಭದಲ್ಲಿ ಈ ಜಗಳ ನಡೆದಿತ್ತು. ಆರೋಪಿ ಅರ್ಜುನ್ ಚೌಹಾಣ್ ತನ್ನ ಚಿಕ್ಕಪ್ಪನೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ, ಅಲ್ಲಿ ಸಂತ್ರಸ್ತರಾದ ಅನಿಲ್ ಮತ್ತು ಶುಭಂ ಕೂಡ ಹಾಜರಿದ್ದರು. ಅರ್ಜುನ್ ಪ್ರಕಾರ, ಕಾರ್ಯಕ್ರಮದ ಸಮಯದಲ್ಲಿ ಅನಿಲ್ ಮತ್ತು ಶುಭಂ ಎಲ್ಲರ ಮುಂದೆ ಅವನ ತೂಕವನ್ನು ಗೇಲಿ ಮಾಡಿದರು.

ಊಟದ ಸಮಯದಲ್ಲಿ, ಅವರು ನನ್ನ ತೂಕದ ಬಗ್ಗೆ ಗೇಲಿ ಮಾಡಿದರು, ಅದಕ್ಕೆ ನಾನು ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಸ್ಥಳದಲ್ಲಿದ್ದ ಇತರ ಜನರು ನಗಲು ಪ್ರಾರಂಭಿಸಿದರು ಎಂದು ಅರ್ಜುನ್ ಪೊಲೀಸರಿಗೆ ತಿಳಿಸಿದರು. ಜನರು ಪರಿಸ್ಥಿತಿಯನ್ನು ಶಾಂತಗೊಳಿಸಿದರು ಆದರೆ ನಾನು ಇಬ್ಬರನ್ನೂ ಮುಗಿಸಲು ನಿರ್ಧರಿಸಿದೆ ಎಂದು ಆರೋಪಿ ಹೇಳಿದ್ದಾನೆ.

ಇದನ್ನೂ ಓದಿ
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಸಾವು
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಪತಿ ದುರಂತ ಸಾವು

ಅವಮಾನಕ್ಕೊಳಗಾಗಿ, ಅರ್ಜುನ್ ತನ್ನ ಸ್ನೇಹಿತ ಆಸಿಫ್‌ಗೆ ಘಟನೆಯ ಬಗ್ಗೆ ಹೇಳಿದ್ದಾನೆ ಮತ್ತು ಅವರು ಇಬ್ಬರೂ ಸೇರಿ ಸೇಡು ತೀರಿಸಿಕೊಳ್ಳಲು ಯೋಜನೆಯನ್ನು ರೂಪಿಸಿದರು. ಅನಿಲ್ ಮತ್ತು ಶುಭಂ ಮಂಜಾರಿಯಾ ಕಡೆಗೆ ಪ್ರಯಾಣಿಸುತ್ತಿದ್ದರು ಆಗ ಅವರ ಹಿಂಬಾಲಿಸಿ ಆರೋಪಿಗಳು ಕೂಡ ಹೋಗಿದ್ದಾರೆ.

ಮತ್ತಷ್ಟು ಓದಿ: ಕೊಡಗು: ಕಾಫಿ ತೋಟದಲ್ಲಿ ಗುಂಡಿಕ್ಕಿ ವ್ಯಕ್ತಿಯ ಕೊಲೆ

ನಾವು ಅವರ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದೆವು ಆದರೆ ಅವರು ಮುಂದೆ ಹೋದರು. ನಾವು ಅವರನ್ನು ವೇಗವಾಗಿ ಬೆನ್ನಟ್ಟಲು ನಿರ್ಧರಿಸಿದೆವು. ಟೆಂಡುವಾ ಟೋಲ್ ಪ್ಲಾಜಾ ಬಳಿ ನಾವು ಕಾರನ್ನು ಹಿಂದಿಕ್ಕುವವರೆಗೂ ಸುಮಾರು 20 ಕಿಲೋಮೀಟರ್‌ಗಳವರೆಗೆ ಅವರನ್ನು ಬೆನ್ನಟ್ಟಿದ್ದೆವು ಎಂದು ಅವರು ಹೇಳಿದರು.

ನಂತರ ನಾವು ಅವರಿಬ್ಬರನ್ನೂ ಅವರ ವಾಹನದಿಂದ ಕೆಳಗಿಳಿಸಿ ಅವರ ಮೇಲೆ ಗುಂಡು ಹಾರಿಸಿದೆವು ಎಂದು ಒಪ್ಪಿಕೊಂಡಿದ್ದಾನೆ. ಸಮೀಪದಲ್ಲಿದ್ದ ಜನರು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು, ನಂತರ ಅವರನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ಆರೋಪಿ ಅರ್ಜುನ್ ಚೌಹಾಣ್ ನನ್ನು ಬಂಧಿಸಲಾಗಿದೆ. ತಾವೇ ಗುಂಡು ಹಾರಿಸುವುದನ್ನು ಯೋಜಿಸಿ ನಡೆಸಿರುವುದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಬಲಿಪಶುಗಳು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us