AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡ್ ದುರಂತ: 215 ಮೃತದೇಹ ಪತ್ತೆ, 206 ಮಂದಿ ನಾಪತ್ತೆ; ಮೃತರಲ್ಲಿ 30 ಮಕ್ಕಳು

ಒಟ್ಟು 215 ಮೃತದೇಹಗಳು ಪತ್ತೆಯಾಗಿವೆ. 87 ಮಹಿಳೆಯರು ಮತ್ತು 98 ಪುರುಷರು ಇದ್ದಾರೆ. ದುರಂತದಲ್ಲಿ 30 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 148 ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.  206 ಮಂದಿ ನಾಪತ್ತೆಯಾಗಿದ್ದಾರೆ. 81 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಜನರನ್ನು ಬಿಡುಗಡೆ ಮಾಡಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ವಯನಾಡಿನಲ್ಲಿ 93 ಶಿಬಿರಗಳಲ್ಲಿ 10,042 ಜನರಿದ್ದಾರೆ ಎಂದು ಕೇರಳ ಸಿಎಂ ಹೇಳಿದ್ದಾರೆ.

ವಯನಾಡ್ ದುರಂತ: 215 ಮೃತದೇಹ ಪತ್ತೆ, 206 ಮಂದಿ ನಾಪತ್ತೆ; ಮೃತರಲ್ಲಿ 30 ಮಕ್ಕಳು
ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ
ರಶ್ಮಿ ಕಲ್ಲಕಟ್ಟ
|

Updated on: Aug 03, 2024 | 1:24 PM

Share

ತಿರುವನಂತಪುರಂ ಆಗಸ್ಟ್ 03: ವಯನಾಡಿನ (Wayanad landslide) ಮುಂಡಕೈ ಮತ್ತು ಚೂರಲ್​​​ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ. ಚಾಲಿಯಾರ್ ನದಿಯಿಂದ (Chaliyar River)ದೇಹದ ಭಾಗಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ, ರಕ್ಷಣಾ ಕಾರ್ಯಕರ್ತರು ಭರವಸೆ ಕಳೆದುಕೊಳ್ಳದೆ ಜೀವ ಉಳಿಸಲು ಯತ್ನಿಸುತ್ತಿದ್ದಾರೆ ಎಂದು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೇಳಿದ್ದಾರೆ.

ದುರಂತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಮೊದಲ ಹಂತದಲ್ಲಿ ಹಲವೆಡೆ ಸಿಲುಕಿರುವವರನ್ನು ಪತ್ತೆ ಹಚ್ಚಿ ರಕ್ಷಿಸುವ ಪ್ರಯತ್ನ ನಡೆದಿದೆ. ಜೀವದ ಕುರುಹುಗಳಾದರೂ ಇದ್ದರೆ, ರಕ್ಷಣಾ ಕಾರ್ಯಕರ್ತರು ಅವರನ್ನು ಹುಡುಕಿ, ಕಾಪಾಡಲು ಪ್ರಯತ್ನಿಸಿದರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ನಿಲಂಬೂರ್ ಪ್ರದೇಶದಲ್ಲಿ ಪತ್ತೆಯಾದ ಮೃತ ದೇಹಗಳು ಮತ್ತು ದೇಹದ ಭಾಗಗಳನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ.

ಒಟ್ಟು 215 ಮೃತದೇಹಗಳು ಪತ್ತೆಯಾಗಿವೆ. 87 ಮಹಿಳೆಯರು ಮತ್ತು 98 ಪುರುಷರು ಇದ್ದಾರೆ. ದುರಂತದಲ್ಲಿ 30 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 148 ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.  206 ಮಂದಿ ನಾಪತ್ತೆಯಾಗಿದ್ದಾರೆ. 81 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಜನರನ್ನು ಬಿಡುಗಡೆ ಮಾಡಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ವಯನಾಡಿನಲ್ಲಿ 93 ಶಿಬಿರಗಳಲ್ಲಿ 10,042 ಜನರಿದ್ದಾರೆ. ಚೂರಲ್​​ಮಲದಲ್ಲಿ 10 ಶಿಬಿರಗಳಲ್ಲಿ 1707 ಜನರು ಆಶ್ರಯ ಪಡೆದಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಸಾಮೂಹಿಕ ಅಂತ್ಯಕ್ರಿಯೆ

ಶನಿವಾರ ಬೆಳಗ್ಗೆ 11 ಗಂಟೆಯ ನಂತರ ಇಲ್ಲಿ ಸ್ವಲ್ಪಮಟ್ಟಿಗೆ ತುಂತುರು ಮಳೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಮುಟ್ಟಿಲ್ ಪಂಚಾಯತ್‌ನಲ್ಲಿರುವ ಸಾರ್ವಜನಿಕ ಸ್ಮಶಾನಕ್ಕಿರುವ ಕಿರಿದಾದ ಮಾರ್ಗವು ಕಲ್ವರ್ಟ್ ಬಳಿ ಮುಖ್ಯ ರಸ್ತೆಯಿಂದ ದೂರವಿದೆ. ಇದು ಮಳೆಯಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲೊಂದು ಕಾಫಿತೋಟ,ಸಣ್ಣದೊಂದು ದೇವಸ್ಥಾನ ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಸ್ಮಶಾನವಿದೆ. ಅಲ್ಲಿ ಸುಮಾರು 100 ಪುರುಷರು ಶವ ಹೂಳಲು ಗುಂಡಿ ಅಗೆಯುತ್ತಿದ್ದಾರೆ.

ಮಂಗಳವಾರದ (ಜುಲೈ 30) ಭೂಕುಸಿತದಲ್ಲಿ ಚೂರಲ್‌ಮಲ, ಮುಂಡಕೈ, ಅಟ್ಟಮಲ ಮತ್ತು ಇತರ ಪ್ರದೇಶಗಳ ನೆರೆಹೊರೆಗಳಲ್ಲಿ ಕಂಡುಬಂದ ದೇಹದ ಭಾಗಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ಇಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಶವಾಗಾರಗಳು ಮತ್ತು ಆಸ್ಪತ್ರೆಗಳಲ್ಲಿ ಅಂತಹ ಅವಶೇಷಗಳ ರಾಶಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗುರುತಿಸಲಾಗದಷ್ಟು ವಿರೂಪಗೊಂಡ ದೇಹದ ಭಾಗಗಳನ್ನು ಗೌರವಯುತವಾಗಿ ವಿಲೇವಾರಿ ಮಾಡುವ ನಿರ್ಧಾರವನ್ನು ಅವರು ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.

ಜಂಟಿ ನಿರ್ದೇಶಕರು ಗುರುವಾರ ತಡರಾತ್ರಿ ಆನ್‌ಲೈನ್ ಸಭೆ ಕರೆದಿದ್ದಾರೆ ಎಂದು ಮುಟ್ಟಿಲ್ ಪಂಚಾಯಿತಿ ಉಪಾಧ್ಯಕ್ಷ ಅಶರಫ್ ಮತ್ತು ಸ್ಥಳೀಯ ಪಾಲಿಕೆ ಅಧ್ಯಕ್ಷೆ ಶ್ರೀದೇವಿ ಬಾಬು ತಿಳಿಸಿದ್ದಾರೆ.

“ಚಾಲಿಯಾರ್ ನದಿಯಿಂದ 73 ದೇಹದ ಭಾಗಗಳನ್ನು ಪಡೆಯಲಾಗಿದೆ. ಇವು ಭೂಕುಸಿತದ ಸ್ಥಳಗಳಿಂದ ಕೊಚ್ಚಿಹೋಗಿದ್ದಾಗಿರಬಹುದು. ಆದ್ದರಿಂದ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಮುಖ್ಯವಾಗಿತ್ತು. ಪ್ರತಿ ಸ್ಥಳೀಯ ಸಂಸ್ಥೆಗಳು ಆಯಾ ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿ ತೋಡಲು ಸೂಚಿಸಲಾಗಿದೆ. ನಮಗೆ 20 ಸಮಾಧಿಗಳನ್ನು ಅಗೆಯಲು ಹೇಳಲಾಯಿತು, ಆದರೆ ಹೆಚ್ಚಿನ ದೇಹಗಳನ್ನು ಇರಿಸಲು ನಮಗೆ ಸಾಕಷ್ಟು ಸ್ಥಳವಿದೆ ಎಂದು ನಾವು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಅಶರಫ್ ಹೇಳಿದರು.

ಶವಪರೀಕ್ಷೆಯ ಸಮಯದಲ್ಲಿ ದೇಹದ ಎಲ್ಲಾ ಭಾಗಗಳಿಂದ ಡಿಎನ್‌ಎ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಭವಿಷ್ಯದಲ್ಲಿ ಕುಟುಂಬಗಳು ಮಾಲೀಕತ್ವವನ್ನು ಪಡೆದರೆ ಪ್ರತಿಯೊಂದು ಅವಶೇಷಗಳ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಆಯಾ ಸಮಾಧಿಗಳ ಪಕ್ಕದಲ್ಲಿ ಸಂಗ್ರಹಿಸಲಾಗುವುದು ಎಂದು ಅವರು ವಿವರಿಸಿದರು.  ಅವಶೇಷಗಳ ನಿರ್ವಹಣೆಯಲ್ಲಿ ಸುರಕ್ಷತಾ ಕ್ರಮಗಳು ಸೇರಿದಂತೆ ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ವಯನಾಡ್ ಸಂತ್ರಸ್ತರ ಕಹಾನಿ: ನಮಗೇನೂ ಮಾಡಬೇಡಪ್ಪ ಎಂದೆ; ಆ ರಾತ್ರಿಯಿಡೀ ಬೆಟ್ಟದಲ್ಲಿ ನಮಗೆ ಕಾವಲಾಗಿ ನಿಂತಿತ್ತು ಕಾಡಾನೆ

“ನಮಗೆ, ಇವರು ಮನುಷ್ಯರು, ಜಾತಿ ಮತ್ತು ಧರ್ಮದ ಹಂಗು ಇಲ್ಲ. ಅವರು ನಮ್ಮ ಜನರು ನಾವು ಅವರಿಗೆ ಗೌರವವನ್ನು ನೀಡಬೇಕು. ಇದೊಂದು ಊಹೆಗೂ ನಿಲುಕದ ದುರಂತ,” ಎಂದು ಆಶರಫ್ ಹೇಳಿದ್ದಾರೆ.

ಸಾಮಾನ್ಯವಾಗಿ, ನಾವು ಸಾಮಾನ್ಯ ದಿನಗಳಲ್ಲಿ 2-3 ಶವಸಂಸ್ಕಾರ ಮಾಡುತ್ತೇವೆ. ಬುಧವಾರ, ನಾವು 21 ಶವಸಂಸ್ಕಾರಗಳನ್ನು ಮಾಡಿದ್ದೇವೆ, ಅವುಗಳಲ್ಲಿ ಎಂಟು ಏಕಕಾಲದಲ್ಲಿ ಮಾಡಲಾಯಿತು. 24×7 ಸಿದ್ಧವಾಗಿರುವ ಸ್ವಯಂಸೇವಕರ ನೆರವಿನಿಂದ ಎಷ್ಟು ಶವಸಂಸ್ಕಾರ ಮಾಡಬಹುದೋ ಅಷ್ಟು ಶವಸಂಸ್ಕಾರ ಮಾಡಬಹುದೆಂದು ಅಧಿಕಾರಿಗಳಿಗೆ ಮಾತು ಕೊಟ್ಟಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಅವಶೇಷಗಳನ್ನು ನಿಭಾಯಿಸುತ್ತೇವೆ ಎಂದು ಅಂತ್ಯಸಂಸ್ಕಾರ ನಡೆಸುವ ಸ್ವಯಂ ಸೇವಕರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ