AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾಳದ ರಥಯಾತ್ರೆಯಲ್ಲಿ ದುರಂತ: ವಿದ್ಯುತ್ ತಂತಿಗೆ ತಗುಲಿದ ರಥ, 15 ಭಕ್ತರಿಗೆ ವಿದ್ಯುತ್ ಆಘಾತ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಜಗನ್ನಾಥ ರಥಯಾತ್ರೆಯ ವೇಳೆ ಭೀಕರ ದುರಂತ ಸಂಭವಿಸಿದೆ. ರಥವು 11,000 ವೋಲ್ಟ್ ವಿದ್ಯುತ್ ತಂತಿಗೆ ತಗುಲಿ 15 ಭಕ್ತರಿಗೆ ವಿದ್ಯುತ್ ಆಘಾತವಾಗಿದೆ, ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ರಥಯಾತ್ರೆ ಸುರಕ್ಷತೆ ಮತ್ತು ವಿದ್ಯುತ್ ತಂತಿಗಳ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಇಂತಹ ದುರಂತಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ.

ಬಂಗಾಳದ ರಥಯಾತ್ರೆಯಲ್ಲಿ ದುರಂತ: ವಿದ್ಯುತ್ ತಂತಿಗೆ ತಗುಲಿದ ರಥ, 15 ಭಕ್ತರಿಗೆ ವಿದ್ಯುತ್ ಆಘಾತ, ಹಲವರ ಸ್ಥಿತಿ ಗಂಭೀರ
ಆಸ್ಪತ್ರೆ
ನಯನಾ ರಾಜೀವ್
|

Updated on: Jul 17, 2026 | 8:16 AM

Share

ನಂದಿಗ್ರಾಮ, ಜುಲೈ 17: ದೇಶಾದ್ಯಂತ ಜಗನ್ನಾಥ ರಥಯಾತ್ರೆ(Jagannath Rath Yatra) ಆಚರಿಸಲಾಗುತ್ತಿದೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಗುರುವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ರಥಯಾತ್ರೆ ಮೆರವಣಿಗೆ ಸಾಗುತ್ತಿದ್ದಾಗ ಭಾರಿ ಗಾತ್ರದ ರಥದ ಮೇಲ್ಭಾಗವು ರಸ್ತೆಯ ಮೇಲಿದ್ದ 11,000 ವೋಲ್ಟ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ರಥದ ಹಗ್ಗ ಎಳೆಯುತ್ತಿದ್ದ ಕನಿಷ್ಠ 15 ಭಕ್ತರು ತೀವ್ರವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ನಂದಿಗ್ರಾಮದ ತೆಖಲಿ ರಥಯಾತ್ರೆ ಉತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಅಪಘಾತ ಸಂಭವಿಸಿದೆ.

ಗಾಯಗೊಂಡವರ ಪೈಕಿ 10 ಕ್ಕೂ ಹೆಚ್ಚು ಭಕ್ತರನ್ನು ತಕ್ಷಣವೇ ನಂದಿಗ್ರಾಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಸ್ಕಾನ್ ರಥಯಾತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ದುರಂತದ ನಡುವೆಯೂ ರಾಜ್ಯದಾದ್ಯಂತ ಭಾರಿ ಮಳೆಯ ನಡುವೆಯೇ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ರಥಯಾತ್ರೆಗಳು ಜರುಗಿದವು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಾಂಪ್ರದಾಯಿಕ ಹಳದಿ ಕುರ್ತಾ ಮತ್ತು ಬಿಳಿ ಧೋತಿ ಧರಿಸಿ, ದಕ್ಷಿಣ ಕೋಲ್ಕತ್ತಾದ ಆಲ್ಬರ್ಟ್ ರಸ್ತೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಇಸ್ಕಾನ್ ರಥಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ದೇವರ ರಥದ ಹಗ್ಗವನ್ನು ಎಳೆದು ಹಬ್ಬ ಉದ್ಘಾಟಿಸಿದ ಸಿಎಂ ಸುವೇಂದು ಅಧಿಕಾರಿ, ಐತಿಹಾಸಿಕ ಕೋಲ್ಕತ್ತಾ ಇಸ್ಕಾನ್ ರಥಯಾತ್ರೆಗೆ ಈ ವರ್ಷ 71 ವರ್ಷ ತುಂಬಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ವರ್ಷ ಇದರಲ್ಲಿ ಭಾಗವಹಿಸುವುದು ಇಲ್ಲಿನ ಸುದೀರ್ಘ ಸಂಪ್ರದಾಯ. ಈ ಬಾರಿ ರಾಧಾಮಾಧವ್ ಜಿ ಅವರ ‘ಮಂಗಲ ಆರತಿ’ ನೆರವೇರಿಸುವ ಭಾಗ್ಯ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಜಗತ್ತಿನಲ್ಲಿ ಕೆಟ್ಟದ್ದರ ಮೇಲೆ ಒಳ್ಳೆಯದು ಸದಾ ಜಯಗಳಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಮತ್ತಷ್ಟು ಓದಿ: ಆಷಾಢ ಮಾಸ ಅಶುಭವೆಂದಾದರೆ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ನಡೆಯುವುದೇಕೆ? ಇಲ್ಲಿದೆ ಅಸಲಿ ರಹಸ್ಯ

ಬಂಗಾಳದ ಹೂಗ್ಲಿ ಜಿಲ್ಲೆಯ ‘ಮಹೇಶ್’ ನಲ್ಲಿ ದೇಶದ ಅತ್ಯಂತ ಹಳೆಯ ರಥಯಾತ್ರೆಗಳಲ್ಲಿ ಒಂದಾದ ಉತ್ಸವ ಜರುಗಿತು. ಇಲ್ಲಿನ ಲಕ್ಷಾಂತರ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಹಾಗೆಯೇ, ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಪುರ್ಬಾ ಮೇದಿನಿಪುರ ಜಿಲ್ಲೆಯ ದಿಘಾದಲ್ಲಿ ನಿರ್ಮಿಸಿರುವ ಸುಂದರ ‘ಜಗನ್ನಾಥ ಸಾಂಸ್ಕೃತಿಕ ಕೇಂದ್ರ’ದಲ್ಲೂ ದೇವತೆಗಳ ದರ್ಶನಕ್ಕಾಗಿ ಬೆಳಗಿನಿಂದಲೇ ನೂರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ನಾಡಿಯಾ, ಬಂಕುರಾ, ಪುರುಲಿಯಾ ಮತ್ತು ಉತ್ತರ ಬಂಗಾಳದ ಸಿಲಿಗುರಿಯಲ್ಲೂ ಇಸ್ಕಾನ್ ವತಿಯಿಂದ ಭವ್ಯ ಮೆರವಣಿಗೆಗಳು ನಡೆದವು.

ರಥಯಾತ್ರೆಯ ದಿನವೇ ಆರಂಭವಾಗುವ ‘ದುರ್ಗಾ ಪೂಜೆ’ ಸಿದ್ಧತೆ ಪಶ್ಚಿಮ ಬಂಗಾಳದ ಸಂಸ್ಕೃತಿಯಲ್ಲಿ ಜಗನ್ನಾಥ ರಥಯಾತ್ರೆಯ ದಿನಕ್ಕೆ ಮತ್ತೊಂದು ಐತಿಹಾಸಿಕ ಮಹತ್ವವಿದೆ. ಬಂಗಾಳದ ಅತಿ ದೊಡ್ಡ ಹಬ್ಬವಾದ ‘ದುರ್ಗಾ ಪೂಜೆ’ಯ ಭವ್ಯ ಪೆಂಡಾಲ್‌ಗಳ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡುವ ‘ಖುತಿ ಪೂಜೆ’ಯನ್ನು ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ಸಮುದಾಯ ಪೂಜಾ ಆಯೋಜಕರು ಇದೇ ರಥಯಾತ್ರೆಯ ಶುಭ ದಿನದಂದೇ ನೆರವೇರಿಸುತ್ತಾರೆ. ಅಂದರೆ, ರಥಯಾತ್ರೆ ಮುಗಿಯುತ್ತಿದ್ದಂತೆ ಬಂಗಾಳದಲ್ಲಿ ದುರ್ಗಾ ಪೂಜೆಯ ಕೌಂಟ್‌ಡೌನ್ ಆರಂಭವಾಗುತ್ತದೆ.

ರಥಗಳ ಎತ್ತರದ ಮೇಲಿನ  ಆತಂಕ: ಪ್ರತಿ ವರ್ಷ ರಥಯಾತ್ರೆಗಳ ಸಂದರ್ಭದಲ್ಲಿ ಇಂತಹ ವಿದ್ಯುತ್ ಅವಘಡಗಳು ದೇಶದ ವಿವಿಧೆಡೆ ಮರುಕಳಿಸುತ್ತಲೇ ಇವೆ. ರಥಗಳ ಮೇಲ್ಭಾಗದ ಅಲಂಕಾರಿಕ ಗೋಪುರಗಳು ಅತಿ ಹೆಚ್ಚು ಎತ್ತರವಿರುವುದರಿಂದ, ರಸ್ತೆ ಬದಿಯ ವಿದ್ಯುತ್ ತಂತಿಗಳನ್ನು ಮುಂಚಿತವಾಗಿ ಡಿಸ್‌ಕನೆಕ್ಟ್ ಮಾಡದ ಅಥವಾ ರಥದ ಎತ್ತರವನ್ನು ಮಿತಿಗೊಳಿಸದ ಆಡಳಿತ ಮಂಡಳಿಗಳ ನಿರ್ಲಕ್ಷ್ಯವೇ ಇಂತಹ ಘೋರ ಅಪಘಾತಗಳಿಗೆ ಮುಖ್ಯ ಕಾರಣವಾಗುತ್ತಿದ್ದು, ಈ ಕುರಿತು ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪುರಿಯ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ