ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ಲಿಪ್​​ಸ್ಟಿಕ್ ಹಚ್ಚಿದ ಮಹಿಳೆಯರು ಮುಂದೆ ಬರುತ್ತಾರೆ: ಆರ್​​​ಜೆಡಿ ನಾಯಕ

ಈ ಹೇಳಿಕೆ ನೀಡಿದ ನಂತರ ಅವರ ತಮ್ಮ ಪಕ್ಷವು "ಮೊದಲಿನಿಂದಲೂ" ಮಸೂದೆಯನ್ನು ಬೆಂಬಲಿಸುತ್ತಿದೆ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅವರು ತಮ್ಮ ಪ್ರೇಕ್ಷಕರಿಗೆ ಅರ್ಥವಾಗುವಂತೆ 'ಗ್ರಾಮ್ಯ ಭಾಷೆಯಲ್ಲಿ' ಮಾತನಾಡುತ್ತಿದ್ದರು. ಆರ್​​ಜೆಡಿ ಪ್ರಸ್ತುತ ರೂಪದಲ್ಲಿ ಮಸೂದೆಯ ಪ್ರಬಲ ಟೀಕಾಕಾರರು ಆಗಿದ್ದು ಒಬಿಸಿ ಮಹಿಳೆಯರನ್ನು ಸೇರಿಸಲು ಕೋಟಾದೊಳಗೆ ಕೋಟಾವನ್ನು ಒತ್ತಾಯಿಸುತ್ತದೆ.

ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ಲಿಪ್​​ಸ್ಟಿಕ್ ಹಚ್ಚಿದ ಮಹಿಳೆಯರು ಮುಂದೆ ಬರುತ್ತಾರೆ: ಆರ್​​​ಜೆಡಿ ನಾಯಕ
ಅಬ್ದುಲ್ ಬಾರಿ ಸಿದ್ದಿಕಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 30, 2023 | 4:12 PM

ದೆಹಲಿ ಸೆಪ್ಟೆಂಬರ್ 30: ಸಂಸತ್​​ನ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯ (women’s reservation bill) ಹೆಸರಿನಲ್ಲಿ ಲಿಪ್‌ಸ್ಟಿಕ್ ಮತ್ತು ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಕೊಂಡ ಮಹಿಳೆಯರು ಮುಂದೆ ಬರುತ್ತಾರೆ ಎಂದ ಆರ್‌ಜೆಡಿ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ (Abdul Bari Siddiqui )ಹೇಳಿಕೆ ವಿವಾದವಾಗಿದೆ. ಈ ತಿಂಗಳ ಆರಂಭದಲ್ಲಿ ಬಿಹಾರದ ಮುಜಾಫರ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದಿಕಿ ಆ ರೀತಿ ಹೇಳಿದ್ದರು.

ಈ ಹೇಳಿಕೆ ನೀಡಿದ ನಂತರ ಅವರ ತಮ್ಮ ಪಕ್ಷವು “ಮೊದಲಿನಿಂದಲೂ” ಮಸೂದೆಯನ್ನು ಬೆಂಬಲಿಸುತ್ತಿದೆ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅವರು ತಮ್ಮ ಪ್ರೇಕ್ಷಕರಿಗೆ ಅರ್ಥವಾಗುವಂತೆ ‘ಗ್ರಾಮ್ಯ ಭಾಷೆಯಲ್ಲಿ’ ಮಾತನಾಡುತ್ತಿದ್ದರು. ಆರ್​​ಜೆಡಿ ಪ್ರಸ್ತುತ ರೂಪದಲ್ಲಿ ಮಸೂದೆಯ ಪ್ರಬಲ ಟೀಕಾಕಾರರು ಆಗಿದ್ದು ಒಬಿಸಿ ಮಹಿಳೆಯರನ್ನು ಸೇರಿಸಲು ಕೋಟಾದೊಳಗೆ ಕೋಟಾವನ್ನು ಒತ್ತಾಯಿಸುತ್ತದೆ. ಆರ್‌ಜೆಡಿ ರ‍್ಯಾಲಿಯಲ್ಲಿ ಬಹಳಷ್ಟು ಮಹಿಳೆಯರು ಗ್ರಾಮದವರಾಗಿದ್ದರು. ಹೊಸ ಕಾನೂನಿನ ಪ್ರಯೋಜನಗಳನ್ನು ತಮ್ಮ ಪ್ರೇಕ್ಷಕರಿಗೆ ಅರ್ಥಮಾಡಿಕೊಳ್ಳಲು ತಾನು “ವಿಶಿಷ್ಟ ಗ್ರಾಮ ಭಾಷೆಯನ್ನು” ಬಳಸಿರುವುದಾಗಿ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ.

ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕೌಶಲ್ ಕಿಶೋರ್ ಈ ಹೇಳಿಕೆಯನ್ನು ಆರ್‌ಜೆಡಿ ನಾಯಕನ ಸಂಕುಚಿತ ಮನಸ್ಥ್ತಿತಿಯ ಸಂಕೇತ ಎಂದು ಹೇಳಿದ್ದಾರೆ.

ಇದು ಅವರ ಸಂಕುಚಿತ  ಮನಸ್ಥಿತಿಯ ಸಂಕೇತ. ಚುನಾಯಿತರಾಗಿ ಸಂಸತ್​​ಗೆ ಬರುವ ಮಹಿಳೆಯರು ಸಂವಿಧಾನ ಮತ್ತು ಕಾನೂನುಗಳನ್ನು ಓದಿ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾರಿಗೆ ಹೇಗೆ ಎರಡು ಚಕ್ರಗಳಿವೆಯೋ ಅದೇ ರೀತಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿಯ ಕಾನೂನುಗಳನ್ನು ರಚಿಸುವ ಮೂಲಕ ಈ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ಸಹಾಯ ಮಾಡುತ್ತಾರೆ ಎಂದು ಅವರು ಹೇಳಿದರು.

ಸಿದ್ದಿಕಿ ಅವರ ಹೇಳಿಕೆಯನ್ನು ಇಂಡಿಯಾ ಬ್ಲಾಕ್ ಮಿತ್ರಪಕ್ಷವಾದ ಜೆಎಂಎಂ ಟೀಕಿಸಿದೆ. ಇಂತಹ ಹೇಳಿಕೆಗಳು ಮಹಿಳೆಯರಿಗೆ ನೋವುಂಟು ಮಾಡುತ್ತವೆ ಎಂದು ಪಕ್ಷದ ರಾಜ್ಯಸಭಾ ಸಂಸದ ಮಹುವಾ ಮಜಿ ಹೇಳಿದ್ದಾರೆ.

“ನಾವು ಇಂದು 21 ನೇ ಶತಮಾನದಲ್ಲಿದ್ದೇವೆ, ಮಹಿಳೆಯರಿಗೆ ನೋವುಂಟು ಮಾಡುವ ಇಂತಹ ಹೇಳಿಕೆಗಳನ್ನು ತಪ್ಪಿಸಬೇಕು. ಹಿಂದುಳಿದ ವರ್ಗಗಳ ಮಹಿಳೆಯರು ಮುಂದೆ ಬರಬೇಕೆಂದು ನಾವು ಬಯಸುತ್ತೇವೆ. ನಾವು ಮಹಿಳೆಯರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮಹಿಳೆಯರ ಮೀಸಲಾತಿ ಮಸೂದೆ ಬಗ್ಗೆಯೂ ಮಾತನಾಡುತ್ತಿದ್ದೇವೆ” ಎಂದು ಅವರು ಹೇಳಿದರು.

ಅದರೊಳಗೆ ಒಬಿಸಿ ಕೋಟಾ ಇಲ್ಲದ ಮಹಿಳಾ ಕೋಟಾ ಮಸೂದೆಗೆ ಆರ್‌ಜೆಡಿಯ ಆಕ್ಷೇಪ ಹೊಸದೇನಲ್ಲ. ಆರ್‌ಜೆಡಿ ಮುಖಂಡರು, ಸಮಾಜವಾದಿ ಪಕ್ಷದ ಸಂಸದರು ಮತ್ತು ಒಮ್ಮೆ ಜೆಡಿಯು ನೇತೃತ್ವ ವಹಿಸಿದ್ದ ಶರದ್ ಯಾದವ್, ಈ ಹಿಂದೆ ಹಲವು ಸಂದರ್ಭಗಳಲ್ಲಿ ಸದನದ ಬಾವಿಗೆ ನುಗ್ಗಿ, ಮಸೂದೆಯ ಪ್ರತಿಯನ್ನು ಕಸಿದುಕೊಳ್ಳಲು ಯತ್ನಿಸಿ ಮಸೂದೆ ಅಂಗೀಕಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು.

ಮಸೂದೆಯ ಸಂದರ್ಭದಲ್ಲಿ ಇಂತಹ ಟೀಕೆಗಳು ಹೊಸದೇನಲ್ಲ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ತಂದೆ ಮತ್ತು ಪಕ್ಷದ ಮುಖ್ಯಸ್ಥರಾಗಿದ್ದ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರು ಮೀಸಲಾತಿಯು ಶ್ರೀಮಂತ ಮಹಿಳೆಯರಿಗೆ ಮಾತ್ರ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬ ಅವರ ಹೇಳಿಕೆಗಾಗಿ ಕನಿಷ್ಠ ಎರಡು ಬಾರಿ ವಿವಾದಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Womens Reservation Bill: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

2012 ರಲ್ಲಿ ಮೀಸಲಾತಿ ರ ಬೇಡಿಕೆಯ ಬಗ್ಗೆ ಕೇಳಿದಾಗ, ಅವರು “…ಬಡೇ ಘರ್ ಕಿ ಲಡ್ಕಿಯಾ ಔರ್ ಮಹಿಳಾಯೇನ್ ಕೋ ಫಾಯ್ದಾ ಮಿಲೇಗಾ… ಹುಮಾರಿ ಗಾಂವ್ ಕಿ ಗರೀಬ್ ಮಹಿಲಾವೋಂ ಕೋ ನಹಿಂ… ಆಕರ್ಷಕ್ ನಹೀ ಹೋತಿ…ಬಾಸ್ ಇತ್ನಾ ಕಹುಂಗಾ… ಜ್ಞಾದಾ ನಹೀ… (ಈಗಿನ ರೂಪದಲ್ಲಿರುವ ಮಹಿಳಾ ಮೀಸಲಾತಿ ಮಸೂದೆಯು ಶ್ರೀಮಂತ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ… ನಮ್ಮ ಬಡ ಮತ್ತು ಗ್ರಾಮೀಣ ಮಹಿಳೆಯರು ಆಕರ್ಷಕವಾಗಿಲ್ಲ…ನಾನು ಹೇಳುವುದಿಷ್ಟೇ) ಎಂದಿದ್ದರು.

ಎರಡು ವರ್ಷಗಳ ಹಿಂದೆ, ಮಾರ್ಚ್ 2010 ರಲ್ಲಿ ಅಂಗೀಕಾರಕ್ಕಾಗಿ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿದಾಗ, “ಮಹಿಳಾ ಮೀಸಲಾತಿ ಮಸೂದೆಯು ಪ್ರಸ್ತುತ ಸ್ವರೂಪದಲ್ಲಿ ಅಂಗೀಕರಿಸಲ್ಪಟ್ಟರೆ, ಸಂಸತ್ತಿನಲ್ಲಿ ಯುವಕರನ್ನು ಶಿಳ್ಳೆ ಹೊಡೆಯಲು ಪ್ರಚೋದಿಸುತ್ತದೆ” ಎಂದು ಅವರು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್