ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣಾ ಸಿದ್ಧತೆ: ಅಪಾಯ ತಗ್ಗಿಸಿ, ಮುಂದೊತ್ತಿ ಬರುವ ಭಾರತೀಯ ವಾಯುಪಡೆ

ಎಲ್ಲಾ ರೀತಿಯ ಕಾರ್ಯಾಚರಣೆಗಳಲ್ಲೂ ಭಾರತೀಯ ವಾಯುಪಡೆಯ ಪಾತ್ರ ಅತ್ಯಂತ ವಿಶಿಷ್ಟವಾಗಿದೆ. ಅದು ಕೇವಲ ಭಾರತೀಯ ವಾಯುಪಡೆಯ ವ್ಯಾಪ್ತಿ, ಚಲನಶೀಲತೆ ಹಾಗೂ ಹೊಂದಿಕೊಳ್ಳುವಿಕೆಯಿಂದ ಮಾತ್ರವೇ ಆಗಿರಲಿಲ್ಲ.

ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣಾ ಸಿದ್ಧತೆ: ಅಪಾಯ ತಗ್ಗಿಸಿ, ಮುಂದೊತ್ತಿ ಬರುವ ಭಾರತೀಯ ವಾಯುಪಡೆ
ಆಪರೇಷನ್ ಕಾವೇರಿ ಮೂಲಕ ಭಾರತಕ್ಕೆ ಬಂದ ಭಾರತೀಯರು
Follow us
ಅಕ್ಷಯ್​ ಪಲ್ಲಮಜಲು​​
|

Updated on: May 01, 2023 | 7:58 PM

ಎಲ್ಲಾ ರೀತಿಯ ಕಾರ್ಯಾಚರಣೆಗಳಲ್ಲೂ ಭಾರತೀಯ ವಾಯುಪಡೆಯ ಪಾತ್ರ ಅತ್ಯಂತ ವಿಶಿಷ್ಟವಾಗಿದೆ. ಅದು ಕೇವಲ ಭಾರತೀಯ ವಾಯುಪಡೆಯ ವ್ಯಾಪ್ತಿ, ಚಲನಶೀಲತೆ ಹಾಗೂ ಹೊಂದಿಕೊಳ್ಳುವಿಕೆಯಿಂದ ಮಾತ್ರವೇ ಆಗಿರಲಿಲ್ಲ. ಅದರೊಡನೆ ಭಾರತೀಯ ವಾಯುಪಡೆಯ ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸುವ ಸಾಮರ್ಥ್ಯ ಮತ್ತು ವಾಯುಪಡೆಯ ಸಿಬ್ಬಂಧಿಗಳ ಅತ್ಯಂತ ಸ್ಥಿರವಾದ ಬದ್ಧತೆಯೂ ಕಾರಣವಾಗಿದೆ.

ಭಾರತೀಯ ವಾಯುಪಡೆಯ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣಾ ಸಿದ್ಧತೆ

1. ಎಪ್ರಿಲ್ 27, 2023: ಯುದ್ಧಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ಟ 128 ಭಾರತೀಯ ಪ್ರಜೆಗಳು ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣಕ್ಕೆ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಆಗಮಿಸಿದ್ದರು. ಅವರನ್ನು ಭಾರತೀಯ ವಾಯುಪಡೆಯ ಸಿ-130ಜೆ ವಿಮಾನ ಕರೆತಂದಿತು. ಭಾರತೀಯ ವಾಯುಪಡೆಯ ಸಿಬ್ಬಂದಿ ರಾತ್ರಿ ನೋಟದ ಕನ್ನಡಕಗಳನ್ನು ಹಾಕಿಕೊಂಡು, ಅರ್ದಂಬರ್ದ ವ್ಯವಸ್ಥೆ ಹೊಂದಿರುವ, ಬೆಳಕಿಲ್ಲದ, ಸುಡಾನಿನ ವಾದಿ ಸಯ್ಯಿದ್ನಾ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿ, ಅಲ್ಲಿಂದ ಮುಂದೆ ಹೋಗಿ, ಸುರಕ್ಷಿತ ತಾಣಗಳನ್ನು ತಲುಪಲು ಯಾವುದೇ ಅವಕಾಶ ಹೊಂದಿರದ ಭಾರತೀಯರನ್ನು ರಕ್ಷಿಸಿದ್ದರು.

2. ಫೆಬ್ರವರಿ 7, 2023: ಭಾರತೀಯ ವಾಯುಪಡೆಯ ಎರಡು ಸಿ-17 ಗ್ಲೋಬ್ ಮಾಸ್ಟರ್ ವಿಮಾನಗಳು ಭೂಕಂಪ ಪೀಡಿತ ಟರ್ಕಿಯಲ್ಲಿ ಬಂದಿಳಿದವು. ಈ ವಿಮಾನಗಳಲ್ಲಿ ಭಾರತೀಯ ಸೇನೆ ಅಗತ್ಯ ವಸ್ತುಗಳು, ವೈದ್ಯಕೀಯ ಸಿಬ್ಬಂದಿಗಳನ್ನು ಕರೆತಂದು, ಅಲ್ಲಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿತ್ತು. ಟರ್ಕಿಯಲ್ಲಿ ನಡೆದ ಭೀಕರ ಭೂಕಂಪದಲ್ಲಿ 4,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಭಾರತದ ಸಹಾಯ ಅತ್ಯಂತ ಪ್ರಮುಖವಾಗಿತ್ತು.

3. ಮಾರ್ಚ್ 10, 2020: ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಸಾಗಾಣಿಕಾ ವಿಮಾನ ಇರಾನಿನಲ್ಲಿ ಬಾಕಿಯಾಗಿದ್ದ 58 ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿತ್ತು.

4. ಫೆಬ್ರವರಿ 27, 2020: ಭಾರತೀಯ ವಾಯುಪಡೆಯ 42 ಸಾಗಾಣಿಕಾ ವಿಮಾನಗಳನ್ನು ಕೋವಿಡ್ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಇದನ್ನೂ ಓದಿ:Operation Kaveri: ಸುಡಾನ್​​ನಿಂದ ಇಲ್ಲಿಯವರೆಗೆ ವಾಯುಪಡೆ ಕರೆತಂದಿದ್ದು 1,400 ಭಾರತೀಯರನ್ನು

ಎಲ್ಲಾ ರೀತಿಯ ಕಾರ್ಯಾಚರಣೆಗಳಲ್ಲೂ ಭಾರತೀಯ ವಾಯುಪಡೆಯ ಪಾತ್ರ ಅತ್ಯಂತ ವಿಶಿಷ್ಟವಾಗಿದೆ. ಅದು ಕೇವಲ ಭಾರತೀಯ ವಾಯುಪಡೆಯ ವ್ಯಾಪ್ತಿ, ಚಲನಶೀಲತೆ ಹಾಗೂ ಹೊಂದಿಕೊಳ್ಳುವಿಕೆಯಿಂದ ಮಾತ್ರವೇ ಆಗಿರಲಿಲ್ಲ. ಅದರೊಡನೆ ಭಾರತೀಯ ವಾಯುಪಡೆಯ ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸುವ ಸಾಮರ್ಥ್ಯ ಮತ್ತು ವಾಯುಪಡೆಯ ಸಿಬ್ಬಂಧಿಗಳ ಅತ್ಯಂತ ಸ್ಥಿರವಾದ ಬದ್ಧತೆಯೂ ಕಾರಣವಾಗಿದೆ.

ಭಾರತೀಯ ಸೇನಾಪಡೆಗಳ ಪ್ರಾಥಮಿಕ ಪಾತ್ರವೆಂದರೆ, ಬಾಹ್ಯ ಅಪಾಯಗಳಿಂದ ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವುದು. ಅದರೊಡನೆ, ಸೇನಾಪಡೆಗಳು ಅಗತ್ಯ ಎದುರಾದಾಗ ಮಾನವೀಯ ಪರಿಹಾರ ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕಾರ್ಯಾಚರಣೆಗಳನ್ನು ನಡೆಸುತ್ತವೆ.

ಭಾರತೀಯ ವಾಯುಪಡೆ ತುರ್ತು ಪ್ರತಿಕ್ರಿಯೆ ತಂಡಗಳನ್ನು ತನ್ನ ಪ್ರಮುಖ ಸಾಗಾಣಿಕಾ ನೆಲೆಗಳಾದ ಪಾಲಮ್ ಹಿಂಡನ್, ಬೆಂಗಳೂರು, ಚಂಡೀಗಢ ಹಾಗೂ ಗುವಾಹಟಿಗಳಲ್ಲಿ ಹೊಂದಿದೆ. ಅದರೊಡನೆ, ಅನುಕೂಲತೆಗೆ ತಕ್ಕಂತೆ ಲಭ್ಯವಿರುವ ರಾಪಿಡ್ ಏರೋ ಮೆಡಿಕಲ್ ಟೀಮ್ಸ್ (ಆರ್‌ಎಎಂಟಿ) ಕಾರ್ಯಾಚರಿಸುತ್ತಿವೆ. ಎಲ್ಲ ಭಾರತೀಯ ವಾಯುಪಡೆ ನೆಲೆಗಳು ಸ್ಥಳೀಯ ಭಾರತೀಯ ಸೇನಾ ತಂಡಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಬಟಾಲಿಯನ್‌ಗಳೊಡನೆ ಕಾರ್ಯಾಚರಿಸುತ್ತವೆ. ಅವುಗಳಲ್ಲಿ ಪ್ಯಾರಾಮಿಲಿಟರಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.

ಏನಾದರೂ ಅಪಾಯದ ಪರಿಸ್ಥಿತಿ ಎದುರಾದರೆ, ಎನ್‌ಡಿಆರ್‌ಎಫ್ ಹಾಗೂ ಭಾರತೀಯ ಸೇನಾ ಸಿಬ್ಬಂದಿಗಳನ್ನು ತಕ್ಷಣವೇ ಭಾರತೀಯ ವಾಯುಪಡೆಯ ದೊಡ್ಡ ಸಾಗಾಣಿಕಾ ವಿಮಾನಗಳಲ್ಲಿ ಅಗತ್ಯ ಉಪಕರಣಗಳು ಮತ್ತು ಪರಿಹಾರ ಸಾಮಗ್ರಿಗಳೊಡನೆ ಕಳುಹಿಸಿಕೊಡಲಾಗುತ್ತದೆ. ಈ ವಿಮಾನಗಳು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಜನರನ್ನೂ ಸ್ಥಳಾಂತರ ನಡೆಸಬಲ್ಲವು. ಕ್ಷಿಪ್ರ ವಾಯುಯಾನ ಸಿದ್ಧತೆ ಮತ್ತು ಪ್ರತಿಕ್ರಿಯೆಗಳು ಭಾರತೀಯ ವಾಯುಪಡೆ ಹಲವು ಕ್ಲಿಷ್ಟಕರ ಪರಿಸ್ಥಿತಿಗಳನ್ನು ಸುಲಭವಾಗಿ ಎದುರಿಸುವಂತೆ ಮಾಡುತ್ತದೆ. ಭಾರತೀಯ ವಾಯುಪಡೆಯ ಬಹುರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆಗಳೊಡನೆ, ಇತರ ಹಲವು ವಿದೇಶಗಳೂ ಸಹ ಭಾರತೀಯ ವಾಯುಪಡೆಯ ಎಚ್ಎಡಿಆರ್ ಸಾಮರ್ಥ್ಯ ಹಾಗೂ ಯುದ್ಧ ರಹಿತ ಸ್ಥಳಾಂತರ (ನಾನ್ ಕಾಂಬ್ಯಾಟೆಂಟ್ ಇವಾಕ್ಯುವೇಶನ್ – ಎನ್‌ಸಿಇ) ಕಾರ್ಯಾಚರಣೆಗಳನ್ನು ಬಳಸಿಕೊಂಡಿವೆ.

ಭಾರತೀಯ ವಾಯುಪಡೆಯ ಪ್ರಮುಖ ಎಚ್ಎಡಿಆರ್ ಹಾಗೂ ಎನ್‌ಸಿಇ ಕಾರ್ಯಾಚರಣೆಗಳು

1990ರಲ್ಲಿ ಏರ್ ಇಂಡಿಯಾ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ 59 ದಿನಗಳ ಕಾಲ 488 ಹಾರಾಟ ನಡೆಸಿ, ಇರಾಕ್, ಕುವೈತ್ ಮತ್ತು ಜೋರ್ಡಾನ್‌ಗಳಲ್ಲಿದ್ದ 1,11,711 ಭಾರತೀಯರನ್ನು ಸುರಕ್ಷಿತವಾಗಿ ಕರೆತಂದವು‌. ಈ ರಕ್ಷಣಾ ಕಾರ್ಯಾಚರಣೆ ಇಂದಿಗೂ ಒಂದು ವಿಶ್ವದಾಖಲೆಯಾಗಿದೆ.

ಇದೇ ರೀತಿಯ ಕಾರ್ಯಾಚರಣೆಗಳನ್ನು 2006ರಲ್ಲಿ ಲೆಬನಾನ್ (ಆಪರೇಶನ್ ಸುಕೂನ್) ಹಾಗೂ 2011ರಲ್ಲಿ ಲಿಬಿಯಾಗಳಲ್ಲಿ ನಡೆಸಲಾಯಿತು.

ಸೆಪ್ಟೆಂಬರ್ 2014ರಲ್ಲಿ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದ ಮಾಲ್ಡೀವ್ಸ್‌ಗೆ ಸಹಾಯ ಮಾಡಲು ‘ಆಪರೇಶನ್ ನೀರ್’ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಭಾರತೀಯ ವಾಯುಪಡೆಯ ಮೂರು ಸಿ-17 ವಿಮಾನಗಳು ಮತ್ತು ಮೂರು ಐಎಲ್-76 ವಿಮಾನಗಳು ಎರಡು ದಿನಗಳ ಕಾಲ ಮಾಲೆಗೆ ಹಾರಾಟ ನಡೆಸಿ, 374 ಟನ್ ಕುಡಿಯುವ ನೀರನ್ನು ಪೂರೈಸಿದವು.

2015ರಲ್ಲಿ ಯೆಮೆನ್‌ನಲ್ಲಿ ಅಂತರ್ಯುದ್ಧ ಆರಂಭವಾದಾಗ ಭಾರತೀಯ ವಾಯುಪಡೆ ‘ಆಪರೇಶನ್ ರಾಹತ್’ ಹೆಸರಿನ ಕಾರ್ಯಾಚರಣೆ ನಡೆಸಿ, ಮೂರು ಸಿ-17 ವಿಮಾನಗಳ ಮೂಲಕ ಜಿಬೌತಿಯಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತಂದಿತು. 11 ಬಾರಿ ಹಾರಾಟ ನಡೆಸಿದ ವಾಯುಪಡೆ, 2,096 ಭಾರತೀಯರನ್ನು ಯುದ್ಧ ಪೀಡಿತ ಪ್ರದೇಶಗಳಿಂದ ಕರೆತಂದಿತು.

2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಭಾರತೀಯ ವಾಯುಪಡೆ 2,223 ಸಾರ್ಟಿ ನಡೆಸಿ, 11,200 ಜನರನ್ನು ರಕ್ಷಿಸಿತು. ಭಾರತೀಯ ವಾಯುಪಡೆ ಎಲ್ಲರಿಗಿಂತಲೂ ಮೊದಲು ಭೂಕಂಪ ಪೀಡಿತ ಹಿಮಾಲಯದ ರಾಷ್ಟ್ರಕ್ಕೆ ತ್ವರಿತ ಪ್ರತಿಕ್ರಿಯಾ ತಂಡದೊಡನೆ (ಕ್ಯುಆರ್‌ಟಿ) ಧಾವಿಸಿತು. ಭಾರತದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಇಡೀ ಜಗತ್ತೇ ಕೊಂಡಾಡಿ, ಇದನ್ನು ಅತ್ಯಂತ ಸುಸಜ್ಜಿತ ಮತ್ತು ವಿಪತ್ತು ನಿರ್ವಹಣಾ ಸಾಮರ್ಥ್ಯ ಎಂದು ಶ್ಲಾಘಿಸಿತು.

ಪ್ರತಿಕ್ರಿಯೆ ಮತ್ತು ಸಾಮರ್ಥ್ಯದ ವಿಚಾರದಲ್ಲಿ ಭಾರತ 1984ರ ಭೋಪಾಲ್ ಅನಿಲ ದುರಂತ, 1990ರ ಒರಿಸ್ಸಾ ಸೈಕ್ಲೋನ್, 2001ರ ಗುಜರಾತ್ ಭೂಕಂಪ, 2004 ಡಿಸೆಂಬರ್ ಸುನಾಮಿ, 2011ರ ಸಿಕ್ಕಿಂ ಭೂಕಂಪದ ಸಂದರ್ಭದಲ್ಲಿ ಅಪಾರ ಪ್ರಗತಿ ತೋರಿಸಿದೆ. 2013ರಲ್ಲಿ ಉತ್ತರಾಖಂಡದ ವಿನಾಶಕಾರಿ ಪ್ರವಾಹ ಮತ್ತು ಒರಿಸ್ಸಾದ 5ನೇ ವರ್ಗದ ಪ್ರಚಂಡ ಚಂಡಮಾರುತ ಫೈಲಿನ್ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಕೈಗೊಂಡ ರಕ್ಷಣಾ ಕಾರ್ಯಾಚರಣೆಗಳನ್ನು ಜಗತ್ತೇ ಶ್ಲಾಘಿಸಿದೆ. 2013ರ ಉತ್ತರಾಖಂಡ ಪ್ರವಾಹದ ವೇಳೆ ಭಾರತೀಯ ವಾಯುಪಡೆ 23,892 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, 798 ಟನ್ ಪರಿಹಾರ ಸಾಮಗ್ರಿಗಳನ್ನು ಪೂರೈಸಿ, 65 ದಿನಗಳಲ್ಲಿ 3,536 ಕಾರ್ಯಾಚರಣಾ ಹಾರಾಟ ನಡೆಸಿತು. ಆದರೆ ದುರದೃಷ್ಟವಶಾತ್ ಒಂದು ಹೆಲಿಕಾಪ್ಟರ್ ಮತ್ತು ಅದರಲ್ಲಿದ್ದ ಸಿಬ್ಬಂದಿಗಳನ್ನು ಭಾರತೀಯ ವಾಯುಪಡೆ ಕಳೆದುಕೊಂಡಿತು.

2013 ಜನವರಿಯಲ್ಲಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿರುವ, ಜಮ್ಮು ಕಾಶ್ಮೀರದ ಹಿಮಾಚ್ಛಾದಿತ ಬನಿಹಾಲ್ ಪ್ರಾಂತ್ಯದಲ್ಲಿ ವಿದ್ಯುತ್ ಲೈನ್‌ಗಳನ್ನು ದುರಸ್ತಿಗೊಳಿಸಲು ನೆರವಾದವು.

ಆಗಸ್ಟ್ 2018ರಲ್ಲಿ, ಭಾರತೀಯ ವಾಯುಪಡೆ 24 ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು, ‘ಆಪರೇಶನ್ ಕರುಣಾ’ ಕಾರ್ಯಾಚರಣೆಯಲ್ಲಿ 288 ಸಾರ್ಟಿ ನಡೆಸಿ, ಕೇರಳದಲ್ಲಿ ಪ್ರವಾಹ ಪೀಡಿತರಾಗಿದ್ದ 1,000 ಜನರನ್ನು ರಕ್ಷಿಸಿತು.

ಕೋವಿಡ್ ಪರಿಹಾರ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆ 42 ಸಾಗಾಣಿಕಾ ವಿಮಾನಗಳನ್ನು ಬಳಸಿಕೊಂಡಿತು. ಇದರಲ್ಲಿ 12 ಬೃಹತ್ ಸಾಗಾಣಿಕಾ ವಿಮಾನಗಳು, 30 ಮಧ್ಯಮ ಸಾಗಾಣಿಕಾ ವಿಮಾನಗಳು ಸೇರಿದ್ದವು. ಇವುಗಳನ್ನು ಸಹಾಯ ಒದಗಿಸಲು, ವಿದೇಶಗಳಿಂದ ಕಾರ್ಮಿಕರು ಮತ್ತು ವಸ್ತುಗಳನ್ನು ತರಲು ಬಳಸಲಾಯಿತು. ಈ ವಿಮಾನಗಳು ಔದ್ಯಮಿಕ ನಗರಗಳಿಗೆ ಖಾಲಿ ಆಮ್ಲಜನಕ ಕಂಟೇನರ್‌ಗಳನ್ನು ಒಯ್ದು, ಅವುಗಳನ್ನು ತುಂಬಿಸಿ, ಅಗತ್ಯವಿರುವ ಪ್ರದೇಶಗಳಿಗೆ ಪೂರೈಸಿದವು.

ಭಾರತೀಯ ವಾಯುಪಡೆಯ ಇತರ ಎಚ್ಎಡಿಆರ್ ಕಾರ್ಯಾಚರಣೆಗಳಲ್ಲಿ ಹಿಮದಲ್ಲಿ ಸಿಲುಕಿದ್ದ ನಾಗರಿಕರನ್ನು ಏರ್ ಲಿಫ್ಟ್ ಮಾಡುವುದು, ಕಾಡ್ಗಿಚ್ಚು ಮತ್ತು ಬೆಂಕಿ ಆಕಸ್ಮಿಕ ಸಂಭವಿಸಿದಾಗ ಬಾಂಬಿ ಬಕೆಟ್ ಹೆಲಿಕಾಪ್ಟರ್ ಬಳಸಿ ಅದನ್ನು ಶಮನಗೊಳಿಸುವುದು, ಕೇಬಲ್ ಕಾರ್‌ಗಳಲ್ಲಿ ಸಿಲುಕಿಕೊಂಡ ನಾಗರಿಕರನ್ನು ರಕ್ಷಿಸುವುದು, ಪ್ರವಾಹ ಪರಿಸ್ಥಿತಿಗಳಲ್ಲಿ ಸಹಾಯ ಕೈಗೊಳ್ಳುವುದು ಸೇರಿವೆ.

ಸೆಪ್ಟೆಂಬರ್ 2022ರಲ್ಲಿ, ಒಂದು ಚಿನೂಕ್ ಹೆಲಿಕಾಪ್ಟರ್ ಮತ್ತು ಎರಡು ಎಂಐ-17 ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು, ಚೀತಾಗಳನ್ನು ನಮೀಬಿಯಾದಿಂದ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಯಿತು.

2022ರಲ್ಲಿ ಭಾರತೀಯ ವಾಯುಪಡೆ ವಿವಿಧ ಸರ್ಕಾರಿ ಸಂಸ್ಥೆಗಳಿಗಾಗಿ 220 ಹಾರಾಟ ನಡೆಸಿ, ಸ್ಥಳಾಂತರ ಕಾರ್ಯಾಚರಣೆ ಕೈಗೊಂಡಿತು.

ದುರಂತದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ನೆಲೆಗಳ ರಕ್ಷಣೆ

2001ರಲ್ಲಿ ಗುಜರಾತಿನ ಭುಜ್‌ನಲ್ಲಿ ಭಾರೀ ಭೂಕಂಪ ಸಂಭವಿಸಿತು. ಆಗ ಭುಜ್ ವಾಯುನೆಲೆಯ ರನ್‌ವೇ ಸಂಪೂರ್ಣ ಹಾಳಾಗಿತ್ತು. ಭಾರತೀಯ ವಾಯುಪಡೆಯ ಪೈಲಟ್‌ಗಳು ವಿಮಾನಗಳನ್ನು ಪೂರ್ಣವಾಗಿ ನೆಲಕ್ಕಿಳಿಸದೆ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಕೇವಲ 48 ಗಂಟೆಗಳೊಳಗೆ ಸಂಪೂರ್ಣ ರನ್‌ವೇಯನ್ನು ಮರಳಿ ಸಿದ್ಧಗೊಳಿಸಲಾಯಿತು. ವಾಯುಪಡೆ ಕೈಗೊಂಡ ಪರಿಹಾರ ಕಾರ್ಯಗಳನ್ನು ಇಡೀ ದೇಶವೇ ಶ್ಲಾಘಿಸಿತು.

ಅದೇ ರೀತಿಯಲ್ಲಿ, 2004ರ ಸುನಾಮಿಯ ಸಂದರ್ಭದಲ್ಲಿ, ಭಾರತೀಯ ವಾಯುಪಡೆ 116 ಸಿಬ್ಬಂದಿಗಳನ್ನು, ಕುಟುಂಬಸ್ತರನ್ನು, ಭಾರತದ ದಕ್ಷಿಣದ ತುತ್ತ ತುದಿಯ ಕಾರ್ ನಿಕೋಬಾರ್ ದ್ವೀಪದಲ್ಲಿದ್ದ ಬಹುತೇಕ ಸಂಪೂರ್ಣ ವಾಯುನೆಲೆಯನ್ನು ಕಳೆದುಕೊಂಡಿತು. ಭಾರತೀಯ ನೌಕಾಪಡೆಯ ಸಹಾಯದೊಂದಿಗೆ ಆ ವಾಯುನೆಲೆಯನ್ನು ಕ್ಷಿಪ್ರವಾಗಿ ದುರಸ್ತಿಗೊಳಿಸಿ, ಕಾರ್ಯಾಚರಣೆಗೆ ಸಿದ್ಧಗೊಳಿಸಲಾಯಿತು.

ಸನ್ನದ್ಧತೆ, ಪ್ರತಿಕ್ರಿಯೆ, ಸ್ಥಿತಿಸ್ಥಾಪಕತ್ವ ಮತ್ತು ಚೇತರಿಕೆ

ಮೊದಲನೆಯ ಹಂತದಲ್ಲಿ, ಯಾವ ಪ್ರದೇಶದಲ್ಲಿ ಸಮಸ್ಯೆ ತಲೆದೋರಿದೆ ಎಂದು ಗಮನಿಸಿ, ಸಮಸ್ಯೆಯ ತೀವ್ರತೆ ಎಷ್ಟು ಎಂದು ಅಂದಾಜಿಸಿ, ಅದಕ್ಕೆ ಸೂಕ್ತವಾದ ಪರಿಹಾರ ಕ್ರಮವನ್ನು ಆಲೋಚಿಸುವುದು. ಏರೋಮೆಟ್ರಿ ಅಥವಾ ವೈಮಾನಿಕ ಸಮೀಕ್ಷೆ ಇದಕ್ಕಿರುವ ಅತ್ಯಂತ ವೇಗವಾದ, ಅತ್ಯುತ್ತಮವಾದ ಕ್ರಮವಾಗಿದೆ. ವಿಚಕ್ಷಣಾ ಕ್ಯಾಮರಾಗಳನ್ನು ಹೊಂದಿರುವ ವಿಮಾನಗಳು, ವಿಚಕ್ಷಣಾ ಉಪಕರಣಗಳನ್ನು ಹೊಂದಿರುವ ಹೆಲಿಕಾಪ್ಟರ್‌ಗಳು, ಹಾಗೂ ಹಗಲು ರಾತ್ರಿ ಕಾರ್ಯಾಚರಣೆ ನಡೆಸಬಲ್ಲ ಯುಎವಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಅವುಗಳು ಮಾಹಿತಿ ವಿನಿಮಯ ಮಾಡುವ ಮೂಲಕ, ರೇಡಿಯೋ ಕಮಾಂಡ್ ಮೂಲಕ ಶೀಘ್ರವಾಗಿ ಸಂವಹನ ನಡೆಸುತ್ತವೆ.

ಎರಡನೆಯ ಹಂತದಲ್ಲಿ, ತಕ್ಷಣದ ಪರಿಹಾರ ಕಾರ್ಯಕ್ಕಾಗಿ ಸಂಬಂಧಿಸಿದ ವ್ಯಕ್ತಿಗಳನ್ನು ಮತ್ತು ಉಪಕರಣಗಳನ್ನು ಸಾಗಿಸುವುದು. ದೂರದ ಪ್ರದೇಶಗಳಿಂದ ಮತ್ತು ವಿದೇಶಗಳಿಂದ ಭಾರದ ಉಪಕರಣಗಳನ್ನು ಬೃಹತ್ ಸಾಗಾಣಿಕಾ ವಿಮಾನಗಳ ಮೂಲಕ ಘಟನೆ ನಡೆದ ಪ್ರದೇಶದ ಸನಿಹದಲ್ಲಿರುವ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ವಾಯು ಸಾಗಾಣಿಕೆಗೆ ದೊಡ್ಡದಾದ ಅಥವಾ ಮಧ್ಯಮ ಗಾತ್ರದ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ.

ಮೂರನೆಯ ಹಂತದಲ್ಲಿ, ಅವಶೇಷಗಳನ್ನು ಸರಿಸಲು, ದಾರಿ ಮಾಡಿಕೊಂಡು, ಗಾಯಾಳುಗಳನ್ನು ಹುಡುಕಲು ಉಪಕರಣಗಳ ಅಗತ್ಯವಿರುತ್ತದೆ. ಅದರೊಡನೆ, ಬಚಾವಾದವರಿಗೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರು, ಆಹಾರ, ಟೆಂಟ್ ಮತ್ತು ಕಂಬಳಿ, ತುರ್ತು ಬೆಳಕಿನ ದೀಪಗಳು, ಸಂವಹನ ಉಪಕರಣಗಳು ಹಾಗೂ ಮೊಬೈಲ್ ಫೋನ್ ಚಾರ್ಜರ್‌ಗಳು ಅಗತ್ಯವಿರುತ್ತವೆ.

ಒಂದು ಬಾರಿ ಮಾನವರ ಜೀವಕ್ಕೆ ಬಂದೆರಗಿದ ಅಪಾಯಕರ ಪರಿಸ್ಥಿತಿ ಕಳೆದ ಬಳಿಕ, ಚೇತರಿಕೆಯ ಹಂತ ಆರಂಭವಾಗುತ್ತದೆ. ಇಲ್ಲಿ ಹೆಲಿಕಾಪ್ಟರ್ ಅಥವಾ ವಿಮಾನಗಳ ಮೂಲಕ ಅವಶ್ಯಕ ವಸ್ತುಗಳನ್ನು ಪೂರೈಸಲಾಗುತ್ತದೆ. ಅದರೊಡನೆ, ವೈದ್ಯಕೀಯ ಮತ್ತು ಆಹಾರ ಪೂರೈಕೆ ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾರ್ಗದ ಕಾರ್ಯಾಚರಣೆಗಳು ಹೆಚ್ಚು ವೇಗವೂ, ಸುಲಭವೂ, ವೈಜ್ಞಾನಿಕವೂ ಆಗಿರುತ್ತವೆ.

ಮುಂದಿರುವ ಸವಾಲುಗಳು:

ಸೇನಾಪಡೆಗಳ ಮೇಲಿನ ಅಪಾರವಾದ ಅವಲಂಬನೆ ಮಿತಿಮೀರಿ ಹೆಚ್ಚಾದಂತೆ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಜವಾಬ್ದಾರಿ, ಆಸಕ್ತಿ ಅತ್ಯಂತ ಕಡಿಮೆಯಾಗುತ್ತದೆ. ಮಾನವ ನಿರ್ಮಿತ ಅಥವಾ ನೈಸರ್ಗಿಕ ದುರಂತದ ಸಂದರ್ಭದಲ್ಲಿ ವಾಯುಮಾರ್ಗ ಅತ್ಯಂತ ವೇಗದ ಮಾರ್ಗವಾಗಿದೆ. ಡ್ರೋನ್ ಹಾಗೂ ರೋಬೋಟ್‌ಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ವಿಪತ್ತು ಪರಿಹಾರದಲ್ಲಿ ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ನೈಜ ಸಮಯದ ಕಾರ್ಯಾಚರಣೆಗಳಲ್ಲಿ ಮತ್ತು ಎಚ್ಎಡಿಆರ್ ಕಾರ್ಯಾಚರಣೆಗಳಲ್ಲಿ ಉದ್ದೇಶಿತ ಯಶಸ್ಸು ಸಾಧಿಸಲು ಅಂತಾರಾಷ್ಟ್ರೀಯ ಮಟ್ಟದ ನಿಯಮಿತ ತರಬೇತಿ ಮತ್ತು ರಕ್ಷಣಾ ಸಹಕಾರ ಅತ್ಯಂತ ಅವಶ್ಯಕವಾಗಿದೆ.

girish linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು