ಭಾರತೀಯ ಮಿಲಿಟರಿಯಲ್ಲಿ ನೂತನ ಶಕೆ ಆರಂಭಿಸಲಿದೆ ಜಿಇ 414 – ಐಎನ್ಎಸ್6 ತಂತ್ರಜ್ಞಾನ ವರ್ಗಾವಣೆ!

ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಜಿಇ ವಿನ್ಯಾಸಗೊಳಿಸಿರುವ 414 ಇಂಜಿನ್‌ಗಳನ್ನು ಮಿಲಿಟರಿ ವಿಮಾನಗಳ ನಿರ್ಮಾಣಕ್ಕೆ ಬಳಸುವ ಯೋಜನೆಯನ್ನು ಹೊಂದಿದೆ. ನವದೆಹಲಿಯೂ ಭಾರತಕ್ಕೆ ಇಂಜಿನ್ ನಿರ್ಮಾಣ ತಂತ್ರಜ್ಞಾನ ಹೊಂದಲು ಬಯಸುತ್ತಿದೆ.

ಭಾರತೀಯ ಮಿಲಿಟರಿಯಲ್ಲಿ ನೂತನ ಶಕೆ ಆರಂಭಿಸಲಿದೆ ಜಿಇ 414 - ಐಎನ್ಎಸ್6 ತಂತ್ರಜ್ಞಾನ ವರ್ಗಾವಣೆ!
ಭಾರತೀಯ ಮಿಲಿಟರಿಯಲ್ಲಿ ನೂತನ ಶಕೆ ಆರಂಭಿಸಲಿದೆ ಜಿಇ 414 - ಐಎನ್ಎಸ್6 ತಂತ್ರಜ್ಞಾನ ವರ್ಗಾವಣೆ!
Follow us
TV9 Web
| Updated By: Ganapathi Sharma

Updated on:Jun 20, 2023 | 9:07 PM

ಅಮೆರಿಕಾದ ಅಧಿಕಾರಿಗಳು ಜನರಲ್ ಇಲೆಕ್ಟ್ರಿಕ್ (ಜಿಇ) ಸಂಸ್ಥೆಗೆ ಭಾರತೀಯ ಸೇನೆಗೆ ಅಗತ್ಯವಿರುವ ಯುದ್ಧ ವಿಮಾನಗಳ ಇಂಜಿನ್‌ಗಳನ್ನು ನಿರ್ಮಿಸಲು ಅನುಮತಿ ಸೂಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಜೂನ್ 22, 2023ರಂದು ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯ ವೇಳೆ, ಅಮೆರಿಕಾ ಅಧ್ಯಕ್ಷರಾದ ಜೋ ಬಿಡನ್ ಅವರು ಎರಡು ರಾಷ್ಟ್ರಗಳ ನಡುವಿನ ಈ ಒಪ್ಪಂದವನ್ನು ಘೋಷಿಸುವ ನಿರೀಕ್ಷೆಗಳಿವೆ. ಈ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಅಮೆರಿಕಾದ ಸಂಸತ್ತಾದ ಕಾಂಗ್ರೆಸ್ಸಿನ ಹಸಿರು ನಿಶಾನೆ ಪಡೆಯುವುದೊಂದೇ ಬಾಕಿಯಿದೆ.

ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಜಿಇ ವಿನ್ಯಾಸಗೊಳಿಸಿರುವ 414 ಇಂಜಿನ್‌ಗಳನ್ನು ಮಿಲಿಟರಿ ವಿಮಾನಗಳ ನಿರ್ಮಾಣಕ್ಕೆ ಬಳಸುವ ಯೋಜನೆಯನ್ನು ಹೊಂದಿದೆ. ನವದೆಹಲಿಯೂ ಭಾರತಕ್ಕೆ ಇಂಜಿನ್ ನಿರ್ಮಾಣ ತಂತ್ರಜ್ಞಾನ ಹೊಂದಲು ಬಯಸುತ್ತಿದೆ.

ಮೇ 18ರಂದು ಪೆಂಟಗಾನ್ ಅಧಿಕಾರಿಗಳು ಭಾರತ ಮತ್ತು ಅಮೆರಿಕಾಗಳ ನಡುವೆ ಯುದ್ಧ ವಿಮಾನಗಳ ಇಂಜಿನ್, ದೀರ್ಘ ವ್ಯಾಪ್ತಿಯ ಫಿರಂಗಿಗಳು, ಹಾಗೂ ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್‌ಗಳ ನಿರ್ಮಾಣ ಒಪ್ಪಂದ ಕೈಗೊಳ್ಳುವ ಮೂಲಕ ಭಾರತ ಮತ್ತು ಅಮೆರಿಕಾಗಳ ಉದ್ಯಮಗಳ ಸಂಬಂಧವನ್ನು ಉತ್ತಮಪಡಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾದ ಉಪ ರಕ್ಷಣಾ ಕಾರ್ಯದರ್ಶಿ ಕ್ಯಾಥಲೀನ್ ಹಿಕ್ಸ್ ಹಾಗೂ ಭಾರತದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅದೇ ದಿನ ಪೆಂಟಗನ್ ನಲ್ಲಿ ಸಭೆ ನಡೆಸಿದ್ದರು. ಅವರು ರಕ್ಷಣಾ ಸಹಭಾಗಿತ್ವವನ್ನು ಗಟ್ಟಿಗೊಳಿಸುವ ಮಹತ್ವ ಮತ್ತು ರಕ್ಷಣಾ ಉದ್ಯಮದಲ್ಲಿ ಸಹಕಾರ ನೀಡುವ ಕುರಿತು ಚರ್ಚೆ ನಡೆಸಿದ್ದರು ಎನ್ನಲಾಗಿದೆ.

1986ರಲ್ಲಿ ಭಾರತ ಸ್ಥಳೀಯವಾಗಿ ನಿರ್ಮಿಸಿದ ಇಂಜಿನ್ ಹೊಂದಿರುವ ತನ್ನದೇ ಆದ ವಿಮಾನವನ್ನು ತಯಾರಿಸುವ ಪ್ರಯತ್ನಗಳನ್ನು ಆರಂಭಿಸಿತು. ಆದರೆ ಅಂತಿಮವಾಗಿ ‘ಕಾವೇರಿ’ ಇಂಜಿನ್ ನಿಗದಿತ ಮಾನದಂಡಗಳನ್ನು ಮುಟ್ಟುವಲ್ಲಿ ವಿಫಲವಾದ ಕಾರಣ ಈ ಯೋಜನೆ ಅಂತಿಮವಾಗಿ ವಿಫಲವಾಯಿತು. ಈ ಯೋಜನೆಯಡಿ ಒಂಬತ್ತು ವಿಮಾ‌ನ ಮಾದರಿಗಳನ್ನು ಅಭಿವೃದ್ಧಿ ಪಡಿಸಲಾಯಿತು, ಸಾಕಷ್ಟು ಸಂಪನ್ಮೂಲಗಳನ್ನು ವೆಚ್ಚ ಮಾಡಲಾಯಿತು. ಆದರೆ ಅಂತಿಮವಾಗಿ ಅವೆಲ್ಲವೂ ವ್ಯರ್ಥವಾದವು. ಇದಾದ ಬಳಿಕ, ಭಾರತೀಯ ವಾಯುಪಡೆ ಅಧಿಕೃತವಾಗಿ ಆಯ್ಕೆ ಮಾಡಿಕೊಂಡ ದೇಶೀಯ ನಿರ್ಮಾಣದ ತೇಜಸ್ ಯುದ್ಧ ವಿಮಾನದಲ್ಲಿ ಆಮದು ಮಾಡಿಕೊಂಡ ಜಿಇ ಎಫ್ 404 ಇಂಜಿನನ್ನು ಅಳವಡಿಸಲಾಯಿತು.

ಇದೆಲ್ಲದರ ಹೊರತಾಗಿಯೂ, ತೇಜಸ್ ಎಂಕೆ 2, ಟ್ವಿನ್ ಡೆಕ್ ಬೇಸ್ಡ್ ಫೈಟರ್ (ಟಿಇಡಿಬಿಇಎಫ್) ಹಾಗೂ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ವಿಮಾನಗಳಿಗೆ ಹೆಚ್ಚಿ‌ನ ಒತ್ತಡದ ಅಗತ್ಯವಿದ್ದು, ಜಿಇ-414 ಇಂಜಿನ್ ಇದನ್ನು ಪೂರೈಸಲು ಸಾಧ್ಯವಿಲ್ಲ. ಜಿಇ ಪ್ರಸ್ತುತ ನೂತನ ಕೋರ್, ಅಭಿವೃದ್ಧಿ ಹೊಂದಿದ ಫ್ಯಾನ್ ಹಾಗೂ ಕಂಪ್ರೆಸರ್ ಹೊಂದಿರುವ ಎಫ್414 ಇಪಿಇ ಏರ್‌ಕ್ರಾಫ್ಟ್ ಇಂಜಿನ್ ಅನ್ನು ನಿರ್ಮಿಸುತ್ತಿದ್ದು, ಇದು 120 ಕೆಎನ್ ತನಕ, ಅಂದರೆ 20% ಅಧಿಕ ಒತ್ತಡವನ್ನು ಸೃಷ್ಟಿಸುತ್ತದೆ. ಈ ಇಂಜಿನನ್ನು ಎಎಂಸಿಎ ಯೋಜನೆಯಲ್ಲಿ ಅಳವಡಿಸಲು ಸೂಕ್ತವಾಗಿದೆ.

2010ರಲ್ಲಿ ಜಿಇಗೆ ಎಂಕೆ – 2 ಎಲ್‌ಸಿಎ ತೇಜಸ್ ವಿಮಾನಕ್ಕಾಗಿ 99 ಎಫ್414-ಐಎನ್ಎಸ್6 ಇಂಜಿನ್ ಪೂರೈಸಲು ಗುತ್ತಿಗೆ ನೀಡಲಾಯಿತು. ಇನ್ನೂ 40 ಹೆಚ್ಚುವರಿ ಇಂಜಿನ್‌ಗಳ ಪೂರೈಕೆಗೆ ಆದೇಶ ನೀಡುವ ಸಾಧ್ಯತೆಗಳಿವೆ. ಬಳಿಕ ಈ ಆವೃತ್ತಿಯನ್ನು ಮೀಡಿಯಂ ವೆಯ್ಟ್ ಫೈಟರ್ (ಎಂಡಬ್ಲ್ಯುಎಫ್) ವಿಮಾನವನ್ನಾಗಿ ಅಭಿವೃದ್ಧಿ ಪಡಿಸಲಾಯಿತು. ಇದು 17.5 ಟನ್‌ಗಳ ಗರಿಷ್ಠ ಹಾರಾಟ ತೂಕವನ್ನು ಹೊಂದಿದೆ. ಜಿಇ ಸಂಸ್ಥೆಯ ಪ್ರತಿನಿಧಿಗಳು ಸೂಕ್ತ ಮಾರ್ಪಾಡುಗಳ ಬಳಿಕ, ಹೆಚ್ಚುವರಿ 18ಕೆಎನ್ ವೆಟ್ ಥ್ರಸ್ಟ್ ಎಂಡಬ್ಲ್ಯುಎಫ್ ವಿಮಾನಕ್ಕೆ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ. ಆದ್ದರಿಂದ ಇದು ವಿಮಾನಕ್ಕೆ ಹೆಚ್ಚುವರಿ ಪೇಲೋಡ್ ಹೊಂದಲು ಸಾಧ್ಯವಾಗುತ್ತದೆ.

22,000 ಪೌಂಡ್ ವರ್ಗಕ್ಕೆ ಸೇರುವ ಎಫ್414-ಜಿಇ-400 ಇಂಜಿನ್ ಒಂದು ಜನರಲ್ ಇಲೆಕ್ಟ್ರಿಕ್ ಆಫ್ಟರ್‌ಬರ್ನಿಂಗ್ ಟರ್ಬೋಫ್ಯಾನ್ ಆಗಿದೆ. ಇದರಲ್ಲಿ ಮೂರು ಹಂತಗಳ ಫ್ಯಾನ್ ಹೊಂದಿರುವ ಆ್ಯಕ್ಸಿಯಲ್ ಕಂಪ್ರೆಸರ್, ಏಳು ಹೈ ಪ್ರೆಶರ್ ಕಂಪ್ರೆಸರ್ ಹಂತಗಳು, ಒಂದು ಹೈ ಪ್ರೆಶರ್ ಟರ್ಬೈನ್ ಹಂತ, ಹಾಗೂ ಒಂದು ಲೋ ಪ್ರೆಶರ್ ಟರ್ಬೈನ್ ಹಂತಗಳಿವೆ. ಇದು 2,445 ಕೆಜಿ ತೂಕವಿದ್ದು, 9 ಥ್ರಸ್ಟ್ ಟು ವೆಯ್ಟ್ ರೇಷಿಯೋ ಹೊಂದಿದೆ. ಎಫ್414-ಜಿಇ-400 ಆಧುನಿಕ ತಂತ್ರಜ್ಞಾನ ಮತ್ತು ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಫ್404 ಇಂಜಿನ್ನಿನ ಪರಿಷ್ಕೃತ ಆವೃತ್ತಿಯಾಗಿದೆ. ಈ ಕಾರಣದಿಂದ ಅಮೆರಿಕಾದ ನೌಕಾಪಡೆ ಈ ಇಂಜಿನ್ನನ್ನು ಪ್ರಸ್ತುತ ಜಗತ್ತಿನಲ್ಲಿ ಲಭ್ಯವಿರುವ ಅತ್ಯಾಧುನಿಕ ಇಂಜಿನ್ ಎಂದು ಪರಿಗಣಿಸುತ್ತದೆ. ಈ ಇಂಜಿನ್ ಒಂದು ನಂಬಿಕಾರ್ಹ, ನಿರ್ವಹಣೆಗೆ ಸುಲಭವಾದ ಇಂಜಿನ್ ಆಗಿದ್ದು, ಇದನ್ನು ಬೋಯಿಂಗ್ ಎಫ್/ಎ-18ಇ/ಎಫ್ ಸೂಪರ್ ಹಾರ್ನೆಟ್ ಹಾಗೂ ಇಎ-18ಜಿ ಗ್ರೌಲರ್ ವಿಮಾನಗಳಲ್ಲಿ ಬಳಸಲಾಗುತ್ತಿದ್ದು, ಎಫ್404 ಇಂಜಿನ್ನಿಗೆ ಹೋಲಿಸಿದರೆ 35% ಹೆಚ್ಚುವರಿ ಥ್ರಸ್ಟ್ ಹೊಂದಿದೆ. ಆ ಮೂಲಕ ವಿಮಾನದ ವ್ಯಾಪ್ತಿ, ಪೇಲೋಡ್, ಹಾಗೂ ಪಾರಾಗುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ಮುಂದಿನ ವರ್ಷದ ಆರಂಭದಲ್ಲಿ, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಜಿಇ-414 ಐಎನ್ಎಸ್6 ಇಂಜಿನ್ ಹೊಂದಿರುವ ಎಲ್‌ಸಿಎ ಮಾರ್ಕ್ 2 ವಿಮಾನವನ್ನು ಪ್ರದರ್ಶಿಸಲಿದೆ. ಈ ವಿಮಾನ 2024ರಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದ್ದು, ಅಗತ್ಯ ಬಿದ್ದರೆ ಜಿಇ-414ರ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.

ಇದನ್ನೂ ಓದಿ: ಹಾಸ್ಯ ಪಟು ಜಾಸೆಲಿನ್ ಚಿಯಾ ಅವರ ಎಂಎಚ್ 370 ಹಾಸ್ಯ: ಇಂಟರ್‌ಪೋಲ್ ಸಹಾಯ ಕೋರಿದ ಮಲೇಷ್ಯಾ ಪೊಲೀಸ್

ಎಫ್414 ವರ್ಗಕ್ಕೆ ಸೇರಿದ ಎಫ್414-ಜಿಇ-ಐಎನ್ಎಸ್6 ಇಂಜಿನ್ ಅತ್ಯಾಧುನಿಕ ಆವೃತ್ತಿಯಾಗಿದ್ದು, ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗಳ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾಗಿದೆ. ಈ ಆವೃತ್ತಿ ಫುಲ್ ಅಥಾರಿಟಿ ಡಿಜಿಟಲ್ ಇಲೆಕ್ಟ್ರಾನಿಕ್ ಕಂಟ್ರೋಲ್ (ಎಫ್ಎಡಿಇಸಿ) ಹಾಗೂ ಒಂಟಿ ಇಂಜಿನ್ ಕಾರ್ಯಾಚರಣೆಗಾಗಿ ಹೆಚ್ಚಿನ ಸುರಕ್ಷತಾ ಕ್ರಮಗಳು ಸೇರಿದಂತೆ ವಿವಿಧ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದರ 98ಕೆಎನ್ ವರ್ಗದ ವೆಟ್ ಥ್ರಸ್ಟ್ ಇಂಜಿನ್ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ಜಿಇ-414 ಇಂಜಿನ್ ಭಾರತದಲ್ಲಿ ನಿರ್ಮಾಣಗೊಳಿಸುವುದಾದರೆ, ಅದಕ್ಕಾಗಿ 70-100% ತಂತ್ರಜ್ಞಾನದ ವರ್ಗಾವಣೆ ನಡೆಯಬೇಕು. ಈ ತಂತ್ರಜ್ಞಾನ ವರ್ಗಾವಣೆ ನಡೆಯಲಿದ್ದು, ಜಿಇ ಇಲೆಕ್ಟ್ರಿಕ್ಸ್ ಬೌದ್ಧಿಕ ಆಸ್ತಿಯ ಹಕ್ಕನ್ನು ಹೊಂದಿರಲಿದೆ. ಇದರ ಪರಿಣಾಮವಾಗಿ, ಭಾರತ ಈ ಇಂಜಿನ್ ಹೊಂದಿರುವ, ತಾನು ದೇಶೀಯವಾಗಿ ನಿರ್ಮಿಸುವ ವಿಮಾನಗಳನ್ನು ಮಾರಾಟ ಮಾಡಲು ಅಮೆರಿಕಾದ ಅನುಮತಿ ಪಡೆಯಬೇಕಾಗುತ್ತದೆ.

ಬಿಡನ್ ಆಡಳಿತ ಈಗಾಗಲೇ ಜನರಲ್ ಎಲೆಕ್ಟ್ರಿಕ್ ಸಂಸ್ಥೆಗೆ ಟಿಒಟಿ ಉತ್ಪಾದನೆಗೆ ಹಸಿರು ನಿಶಾನೆ ನೀಡಿದೆ. ಆ ಮೂಲಕ ಅಮೆರಿಕಾ ಮತ್ತು ಭಾರತಗಳು ಜಂಟಿಯಾಗಿ 110 ಕೆಎನ್ ಥ್ರಸ್ಟ್‌ಗೂ ಹೆಚ್ಚಿನ ಆಧುನಿಕ ಇಂಜಿನ್‌ಗಳನ್ನು ಜಂಟಿಯಾಗಿ ವಿನ್ಯಾಸ, ಅಭಿವೃದ್ಧಿ ಹಾಗೂ ಉತ್ಪಾದನೆ ನಡೆಸಲು ಸಾಧ್ಯವಾಗುತ್ತದೆ.

ಚೀನಾ ಈಗಾಗಲೇ ತನ್ನ ಜೆ-20 ವಿಮಾನಗಳಿಗಾಗಿ ಇಂಜಿನ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಅದು ಬ್ಲೇಡ್‌ಗಳು ಹೆಚ್ಚಾಗಿ ಬಿಸಿ ಏರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದಿದೆ. ಆದರೆ ಭಾರತ ಇಂದಿಗೂ ಇಂಜಿನ್ ತಂತ್ರಜ್ಞಾನಕ್ಕಾಗಿ ಅಮೆರಿಕಾದ ಮೇಲೆ ಅವಲಂಬಿತವಾಗಿದೆ. ಡಬ್ಲ್ಯುಎಸ್-15 ಇಂಜಿನ್ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನವಾದ ಸಿಂಗಲ್ ಕ್ರಿಸ್ಟಲ್ ಟರ್ಬೈನ್ ಬ್ಲೇಡ್‌ಗಳನ್ನು ಹೊಂದಿದೆ. ಪಾಕಿಸ್ತಾನಿ ವಾಯುಪಡೆಯ ಜೆ-10ಸಿಇ ವಿಮಾನಗಳ ಚಿತ್ರಗಳು ಅವುಗಳಲ್ಲಿ ಚೀನಾ ನಿರ್ಮಿತ ಡಬ್ಲ್ಯುಎಸ್-10 ಇಂಜಿನ್ ಅಳವಡಿಸಿರುವುದನ್ನು ಸ್ಪಷ್ಟಪಡಿಸಿವೆ. ಆದರೆ ಜಿಇ-414 ಇಂಜಿನ್ ಮೂಲಕ ಭಾರತೀಯ ಯುದ್ಧ ವಿಮಾನಗಳು ಹೆಚ್ಚು ನಂಬಿಕಾರ್ಹ ಮತ್ತು ಇಂಧನ ದಕ್ಷತೆ ಹೊಂದಿರುವ ಇಂಜಿನ್‌ಗಳನ್ನು ಪಡೆಯುವಂತಾಗುತ್ತದೆ.

Girish Linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Tue, 20 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ