AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಡು ಭೂಮಿಯಲ್ಲಿ ಚಮತ್ಕಾರ: ಪಪ್ಪಾಯ ಕೃಷಿಯಲ್ಲಿ ಲಕ್ಷಾಂತರ ರೂ ಗಳಿಸುತ್ತಿರುವ ಬೀದರ್​ ರೈತ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಮಸಾನೆ ಎಂಬ ರೈತರೊಬ್ಬರು ತಮ್ಮ ಬರಡು ಭೂಮಿಯಲ್ಲಿ ಪಪ್ಪಾಯ ಕೃಷಿ ಮಾಡಿ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಆ ಮೂಲಕ ರೈತ ಮನಸ್ಸು ಮಾಡಿದರೆ ಬರಡು ಭೂಮಿಯಲ್ಲಿ ಕೂಡ ಚಿನ್ನ ತೆಗೆಯಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಸುರೇಶ ನಾಯಕ
| Edited By: |

Updated on: Oct 20, 2024 | 8:41 PM

Share
ಆ ರೈತ ಬರಡು ಭೂಮಿಯನ್ನೇ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಆ ಜಮೀನಿನಲ್ಲಿ ಪಪ್ಪಾಯಿ ಬೆಳೆಸಿ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ರೈತ ಮನಸ್ಸು ಮಾಡಿದರೆ ಏನುಬೇಕಾದರೂ ಜಮೀನಿನಲ್ಲಿ ಬೆಳೆದು ಕೈ ತುಂಬಾ ಹಣ ಗಳಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.

1 / 7
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ್ ಮಸಾನೆ ಬರಡು ಭೂಮಿಯಲ್ಲಿ ಉತ್ತಮ ಫಲ ತೆಗೆದಿದ್ದಾರೆ. ತಮ್ಮ 12 ಎಕರೆ ಜಮೀನಿನಲ್ಲಿ ಐದಾರು ಎಕರೆಯಷ್ಟು ಜಮೀನು ಪಕ್ಕಾ ಬರಡು ಭೂಮಿಯಾಗಿತ್ತು. ಈ ಜಮೀನಿನಲ್ಲಿ ಏನು ಬೆಳೆಯೋದಿಲ್ಲಾ ಎಂದು ಹತ್ತಾರು ವರ್ಷದಿಂದ ಆ ಜಮೀನಿನನ್ನ ಖಾಲಿ ಬಿಟ್ಟಿದ್ದರು. ಆದರೂ ಮಲ್ಲಿಕಾರ್ಜುನ್ ಮಸಾನೆ ಎಂಬ ರೈತ ಯಾಕೆ ಈ ಜಮೀನಿನಲ್ಲಿಯೂ ಕೃಷಿ ಮಾಡಬಹುದೆಂದು ಯೋಚನೆ ಮಾಡಿ ಅದೇ ಬರಡು ಭೂಮಿಯಲ್ಲಿ ಇದೀಗ ಪಪ್ಪಾಯ ಬೆಳೆದಿದ್ದಾರೆ.

2 / 7
ಕಲ್ಲುಗಳಿಂದ ತುಂಬಿದ್ದ ಜಮೀನನ್ನ ಸ್ವಚ್ಚ ಮಾಡಿ, ಜಮೀನು ಫಲವತ್ತತೆಯನ್ನ ಹೆಚ್ಚು ಮಾಡಲು ಅದಕ್ಕೆ ಬೇಕಾದ ಮೇಕೆ, ಆಕಳು, ಎಮ್ಮೇಯ ಗೊಬ್ಬರವನ್ನ ತಂದು ಹೊಲಕ್ಕೆ ಹಾಕಿದ್ದಾರೆ. ಆನಂತರ ಮೊದಲು ಕಬ್ಬನ್ನ ನಾಟಿ ಮಾಡಿದ್ದಾರೆ. ಕಬ್ಬು ಅಷ್ಟೊಂದು ಹೇಳಿಕೊಳ್ಳುವಷ್ಟು ಇಳುವರಿ ಬಾರದೆ ಇದ್ದಾಗ ಕಳೆದ ವರ್ಷ ಅದೆ ಹೊಲದಲ್ಲಿ 15 ನಂಬರ್​ನ ಪಪ್ಪಾಯಿಯನ್ನ ಹಾಕಿದ್ದು ಆ ಪಪ್ಪಾಯಿ ಕಳೆದ ಆರು ತಿಂಗಳಿಂದ ಕಾಯಿ ಬಿಡಲು ಆರಂಭಿಸಿದ್ದು, ಆರು ತಿಂಗಳಲ್ಲಿ ಮೂರು ಎಕರೆಯಷ್ಟು ಜಮೀನಿನಲ್ಲಿ ಸುಮಾರು 18 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.

3 / 7
ಬರಡು ಭೂಮಿ ಎಂದು ಹಾಗೆ ಆ ಹೊಲವನ್ನ ಬಿಟ್ಟಿದ್ದರೆ ನಾನು ಲಕ್ಷಾಧಿಪತಿಯಾಗುತ್ತಿರಲಿಲ್ಲ. ಹೀಗಾಗಿ ಬರಡು ಭೂಮಿ ಎಂದು ನಿರ್ಲಕ್ಷ್ಯ ಮಾಡದೆ ಅದೇ ಜಮೀನನ್ನ ಫಲವತ್ತಾದ ಜಮೀನಾಗಿ ಪರಿವರ್ತನೆ ಮಾಡಿ, ಕೃಷಿಯಲ್ಲಿ ಆದಾಯ ಗಳಿಸಿ ಎಂದು ರೈತ ಮಲ್ಲಿಕಾರ್ಜುನ್ ಹೇಳುಳುತ್ತಾರೆ.

4 / 7
ಇವರು ಪಪ್ಪಾಯಿ ಸಸಿಯನ್ನ ಮಹಾರಾಷ್ಟ್ರದಿಂದ 10 ರೂಪಾಯಿಗೆ ಒಂದರಂತೆ ಸುಮಾರಿ ಮೂರು ಸಾವಿರ ಸಸಿಗಳನ್ನ ತಂದು ನಾಟಿ ಮಾಡಿದ್ದಾರೆ. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಎಂಟು ಅಡಿಯಷ್ಟು ಮತ್ತು ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ಪಪ್ಪಾಯಿ ಸಸಿಗಳನ್ನ ನಾಟಿ ಮಾಡಿದ್ದಾರೆ. 

5 / 7
ನಾಟಿ ಮಾಡಿದ ಆರು ತಿಂಗಳಲ್ಲಿ ಪಪ್ಪಾಯಿ ಹಣ್ಣು ಕಟಾವಿಗೆ ಬಂದಿದ್ದು 6 ತಿಂಗಳ ಅವಧಿಯಲ್ಲಿ ಸುಮಾರು 18 ಲಕ್ಷ ರೂಪಾಯಿ ಪಪ್ಪಾಯಿ ಮಾರಾಟ ಮಾಡಿದ್ದಾರೆ. ಇನ್ನೂ ಇವರ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ದೆಹಲಿ, ಹೈದ್ರಾಬಾದ್, ರಾಜಸ್ಥಾನದವರು ಇವರ ಹೊಲಕ್ಕೆ ಬಂದು ಪಪ್ಪಾಯಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ.

6 / 7
ಇವರು ಬೆಳೆದಿರುವ ಈ 15ನೇ ನಂಬರ್ ಪಪ್ಪಾಯಿ ಉದ್ದವಾಗಿದ್ದು, ಒಂದು ಹಣ್ಣು ಎರಡು ಕೆಜಿಯಷ್ಟು ತೂಕ ಬರುತ್ತದೆ. ಜೊತೆಗೆ ತಿನ್ನಲು ಕೂಡ ರುಚಿಯಾಗಿರುತ್ತದೆ. ಹೀಗಾಗಿ ಇವರು ಬೆಳೆದ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಇದೆ.

7 / 7
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!