ಕಪ್ಪು ಬಣ್ಣದ ತುಂಡುಡುಗೆಲಿ ಮಿಂಚಿದ ನಟಿ ಪರಿಣಿತಿ ಚೋಪ್ರಾ; ಇಲ್ಲಿವೆ ಫೋಟೋಗಳು
ನಟಿ ಪರಿಣಿತಿ ಚೋಪ್ರಾ ಅವರು ಹುನರ್ಬಾಜ್ ದೇಶ್ ಕಿ ಶಾನ್ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಮೊದಲ ಭಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
Updated on: Feb 02, 2022 | 4:08 PM

ನಟಿ ಪರಿಣಿತಿ ಚೋಪ್ರಾ ಅವರು ಹುನರ್ಬಾಜ್ ದೇಶ್ ಕಿ ಶಾನ್ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಮೊದಲ ಭಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ನಟಿ ನಿರಂತರವಾಗಿ ನಟನೆ, ಚಿತ್ರೀಕರಣ ಮತ್ತು ಫ್ಯಾಷನ್ನಲ್ಲಿಯೂ ತೊಡಗಿಕೊಂಡಿದ್ದು, ಆಗಾಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹುನರ್ಬಾಜ್ ದೇಶ್ ಕಿ ಶಾನ್ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಇನ್ನೂ ಪ್ರಸಾರವಾಗದ ಇತ್ತೀಚಿನ ಸಂಚಿಕೆಗಾಗಿ ನಟಿ ಕಪ್ಪು ಉಡುಪನ್ನು ಧರಿಸಿದ್ದರು.

ನಟಿ ಪರಿಣಿತಿ ಚೋಪ್ರಾ ಕಪ್ಪು ಬಣ್ಣದ ಡ್ರೆಸ್ನ್ನು ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ನಾನು ಈಗ ಫೋಟೋಶೂಟ್‌ಗಳನ್ನು ಇಷ್ಟಪಡುತ್ತೇನೆಯೇ? ಎಂದು ಬರೆದುಕೊಂಡಿದ್ದಾರೆ.

ನಟಿ ಪರಿಣಿತಿ ಚೋಪ್ರಾ ಈ ಬ್ಲಾಕ್ ಡ್ರೆಸ್‌ನಲ್ಲಿ ಬೋಲ್ಡ್ ಮತ್ತು ಮಾಧಕವಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಪರಿಣಿತಿ ಚೋಪ್ರಾ ಈ ಕಪ್ಪು ಬಾಡಿಕಾನ್ ಡ್ರೆಸ್‌ನಲ್ಲಿ ಮೆಟಾಲಿಕ್ ಫ್ರಿಲ್ ವೇಸ್ಟ್ಲ್ಲಿ ಸುಂದರವಾಗಿ ಕಂಡಿದ್ದಾರೆ.

ನಟಿ ಪರಿಣಿತಿ ಚೋಪ್ರಾ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಅವರ ಅಭಿಮಾನಿಗಳಿಗಾಗಿ ಆವಾಗವಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈ ಹಿಂದಿನ ಸಂಚಿಕೆಗಾಗಿ, ಪರಿಣಿತಿ ಚೋಪ್ರಾ ಅದ್ಭುತವಾದ ಕೆಂಪು ಬಣ್ಣದ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್ನ್ನು ತೊಟ್ಟುಕೊಂಡಿದ್ದರು.

ಪರಿಣಿತಿ ಚೋಪ್ರಾ ಈ ಹಿಂದೆ ಹುನರ್ಬಾಜ್ ದೇಶ್ ಕಿ ಶಾನ್ ಕಾರ್ಯಕ್ರಮದಲ್ಲಿ ಹಾಟ್ ಪಿಂಕ್ ಪ್ಯಾಂಟ್‌ಸೂಟ್ ಧರಿಸಿದ್ದರು.

TV9 Kannada
Read More




