ನಟ ಅಜಿತ್ ಕುಮಾರ್ ಅವರಿಗೆ ಬೈಕ್ ರೈಡಿಂಗ್ ಅಂದರೆ ಸಖತ್ ಇಷ್ಟ. ಅವರು ಇತ್ತೀಚೆಗಷ್ಟೇ ಉತ್ತರ ಭಾರತದ ಭಾಗಗಳಲ್ಲಿ, ಹಿಮಾಲಯದ ಕಡೆಗಳಲ್ಲಿ ಬೈಕ್ ಓಡಿಸಿದ್ದರು. ಈಗ ಅವರು ಥೈಲೆಂಡ್ನಲ್ಲಿ ಲ್ಯಾಂಡ್ ಆಗಿದ್ದಾರೆ.
ಅಜಿತ್ ಕುಮಾರ್ ಅವರು ಥೈಲೆಂಡ್ನಲ್ಲಿ ಬೈಕ್ ಓಡಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಜಿತ್ ಕುಮಾರ್ಗೆ ಕಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರ ನಟನೆಯ ‘ವಲಿಮೈ’ ಸಿನಿಮಾ ಈ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿದೆ.
ಅಜಿತ್ ಕುಮಾರ್ ಅವರಿಗೆ ರೇಸ್ ಬಗ್ಗೆ ಅಪಾರ ಉತ್ಸಾಹ. ಅವರು ಫಾರ್ಮುಲ 2 ರೇಸರ್. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ರೇಸ್ಗಳಲ್ಲಿ ಅವರು ಸ್ಪರ್ಧಿಸಿದ್ದಾರೆ. 2003ರಲ್ಲಿ ಅವರು ಮೊದಲ ಬಾರಿಗೆ ರೇಸ್ ಅಂಗಳಕ್ಕೆ ಕಾಲಿಟ್ಟರು.
ಅಜಿತ್ ಕುಮಾರ್ ಅವರಿಗೆ ವಿಮಾನ ಯಾನದ ಬಗ್ಗೆ ತೀವ್ರ ಆಸಕ್ತಿ ಇದೆ. ವಿಮಾನ ಹಾರಿಸುವುದು ಅವರ ಹವ್ಯಾಸಗಳಲ್ಲೊಂದು! ಇದಕ್ಕಾಗಿ ಅವರು ತರಬೇತಿ ಪಡೆದುಕೊಂಡಿದ್ದಾರೆ. ಅವರ ಬಳಿ ಪೈಲಟ್ ಲೈಸನ್ಸ್ ಇದೆ.
ಸಿನಿಮಾ ರೀತಿಯೇ ಫೋಟೋಗ್ರಫಿ ಬಗ್ಗೆ ಅಜಿತ್ ಕುಮಾರ್ ಅವರಿಗೆ ಪ್ಯಾಷನ್ ಇದೆ. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಜೊತೆ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆ. ಶೂಟಿಂಗ್ ಬಿಡುವಿನಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ಅವರದ್ದು.
Published On - 9:39 pm, Thu, 13 October 22