Updated on: Oct 13, 2022 | 10:31 PM
ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಡಬಲ್ ಗೇಮ್ ಆಡುತ್ತಿದ್ದಾರೆ. ಅವರು ಸಾಕಷ್ಟು ಮೋಸದ ಆಟ ಆಡುತ್ತಾರೆ ಎಂಬುದು ಮನೆಯವರ ಆರೋಪ.
ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.
ಈ ಬಾರಿ ಪ್ರಶಾಂತ್ ಸಂಬರ್ಗಿ ಅವರು ಹಳೆಯ ರೀತಿಯ ಆಟವನ್ನೇ ಮುಂದುವರಿಸಿದ್ದಾರೆ. ಅವರನ್ನು ಕೆಲವರು ವಿಲನ್ ರೀತಿ ನೋಡಿದ್ದಾರೆ.
ಆದರೆ, ಪ್ರಶಾಂತ್ ಸಂಬರ್ಗಿ ಹೇಳೋದೆ ಬೇರೆ. ‘ನಾನು ಕಳೆದಬಾರಿ ನ್ಯಾಯಯುತವಾಗಿ ಆಡಿದ್ದೆ. ಅದಕ್ಕಾಗಿಯೇ ಫಿನಾಲೆವರೆಗೆ ಬಂದಿದ್ದೆ. ಈ ಬಾರಿಯೂ ಅದೇ ರೀತಿಯ ಆಟ ಮುಂದುವರಿಸಿದ್ದೇನೆ’ ಎಂದಿದ್ದಾರೆ ಪ್ರಶಾಂತ್.
ಈ ಮಾತನ್ನು ಕೇಳಿ ದಿವ್ಯಾ ಉರುಡುಗ ಮೊದಲಾದವರು ನಕ್ಕಿದ್ದಾರೆ.