Kannada News » Photo gallery » Ashwini and Puneeth Rajkumar Wedding Anniversary Marriage Photo Goes viral In social media
ಪುನೀತ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಮದುವೆ ಫೋಟೋ ವೈರಲ್
ಈ ವಿಶೇಷ ದಿನವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರು ನಮ್ಮ ಜತೆ ಇರಬೇಕಿತ್ತು ಎಂದು ಪರಿತಪಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಪುನೀತ್ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ. ಆದರೆ, ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.
1 / 6
ಇಡೀ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು.
2 / 6
ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಗಿತ್ತು. ಇಂದು (ಡಿಸೆಂಬರ್ 1) ಪುನೀತ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ.
3 / 6
ಪುನೀತ್ ರಾಜ್ಕುಮಾರ್ ಅವರು 1999 ಡಿಸೆಂಬರ್ ಒಂದರಂದು ಮದುವೆ ಆದರು. ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ಅವರನ್ನು ವರಿಸಿದರು.
4 / 6
ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಮದುವೆ ಆದರು. ಈ ದಂಪತಿಗೆ ಧೃತಿ ಹಾಗೂ ವಂದಿತಾ ಹೆಸರಿನ ಮಕ್ಕಳಿದ್ದಾರೆ.
5 / 6
ಈ ವಿಶೇಷ ದಿನವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರು ನಮ್ಮ ಜತೆ ಇರಬೇಕಿತ್ತು ಎಂದು ಪರಿತಪಿಸುತ್ತಿದ್ದಾರೆ.