AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕರಗ ವೈಭವ! ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದ್ರೌಪದಮ್ಮ; ಭಕ್ತಸಾಗರದಲ್ಲಿ ಮೊಳಗಿದ ಗೋವಿಂದ ನಾಮ

ಬೆಂಗಳೂರು ಕರಗ ಉತ್ಸವವು ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ಅರ್ಚಕ ಎ. ಜ್ಞಾನೇಂದ್ರ ಅವರು 16ನೇ ಬಾರಿಗೆ ದ್ರೌಪದಮ್ಮನ ಕರಗವನ್ನು ಹೊತ್ತೊಯ್ದರು. ಹಜ್ರತ್ ತವಕ್ಕಲ್ ಶಾ ಮಸ್ತಾನ್ ದರ್ಗಾದಲ್ಲಿ ಕೋಮು ಸೌಹಾರ್ದತೆ ಮೆರೆದ ಈ ಉತ್ಸವ, ಬೆಂಗಳೂರಿನ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಎತ್ತಿಹಿಡಿಯುತ್ತದೆ. ಭಕ್ತಸಾಗರವೇ ಹರಿದುಬಂದು ಶ್ರದ್ಧೆ ಮೆರೆಯಿತು.

ಕಿರಣ್​ ಸೂರ್ಯ
| Edited By: |

Updated on: Apr 02, 2026 | 7:50 AM

Share
ಬೆಂಗಳೂರಿನ ಧಾರ್ಮಿಕ ವೈಭವದ ಪ್ರತೀಕವಾದ 'ಬೆಂಗಳೂರು ಕರಗ' ಉತ್ಸವವು ತಡರಾತ್ರಿ ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ಶಕ್ತ್ಯೋತ್ಸವವನ್ನು ಕಣ್ಣುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು.

1 / 6
ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗವನ್ನು ಹೊತ್ತು ಸಾಗಿದರು. ಧಾರ್ಮಿಕ ವಿಧಿವಿಧಾನಗಳ ನಂತರ ಹಸಿ ಕರಗ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

2 / 6
ಕೈಯಲ್ಲಿ ಖಡ್ಗ ಹಿಡಿದು 'ಗೋವಿಂದ.. ಗೋವಿಂದ..' ಎಂದು ನಾಮಸ್ಮರಣೆ ಮಾಡುತ್ತಿದ್ದ ವೀರಕುಮಾರರ ಸಾಹಸ ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತು.  ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್ ಮತ್ತು ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದ್ರೌಪದಮ್ಮನ ದರ್ಶನ ಪಡೆದರು.

3 / 6
ಪ್ರತಿಬಾರಿಯಂತೆ ಈ ಬಾರಿಯೂ ಕರಗವು ಚಿಕ್ಕಪೇಟೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿತು. ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು.

4 / 6
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗವು ದೊಡ್ಡಪೇಟೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್. ಮಾರುಕಟ್ಟೆಯ ಉದ್ಭವ ಗಣಪತಿ, ಅರಳೇಪೇಟೆಯ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ, ಅಣ್ಣಮ್ಮ ದೇವಿ ದೇವಸ್ಥಾನ ಮತ್ತು ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು.

5 / 6
"ಬೆಂಗಳೂರು ಕರಗ ಕೇವಲ ಒಂದು ಉತ್ಸವವಲ್ಲ, ಇದು ನಮ್ಮ ಸಂಸ್ಕೃತಿಯ ಬೇರು. ಭಕ್ತರ ಸಂಭ್ರಮ ಮತ್ತು ವ್ಯವಸ್ಥಿತ ಆಚರಣೆ ನಮಗೆ ಹೆಮ್ಮೆ ತಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

6 / 6
Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು

‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ

ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ

ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ

ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು

CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ

ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು

ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ

‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?

ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ