AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss House: ಈ ಬಾರಿ ಹೇಗಿದೆ ಬಿಗ್​​ಬಾಸ್ ಮನೆ, ಇಲ್ಲಿವೆ ಚಿತ್ರಗಳು

Bigg Boss Kannada season 12 house: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆಗಿದ್ದು ಸುದೀಪ್ ಅವರು ಬಿಗ್​​ಬಾಸ್ ಮನೆಯನ್ನು ವೀಕ್ಷಕರಿಗೆ ಪರಿಚಯ ಮಾಡಿಸಿದ್ದಾರೆ. ಈ ಬಾರಿ ಬಹಳ ಅದ್ಧೂರಿಯಾಗಿ, ಜೊತೆಗೆ ಭಿನ್ನವಾಗಿ ಮನೆಯನ್ನು ವಿನ್ಯಾಸ ಮಾಡಿದ್ದಾರೆ. ಕರ್ನಾಟಕದ ಎಲ್ಲ ಭಾಗಗಳನ್ನು ಪ್ರತಿನಿಧಿಸು ರೀತಿಯಲ್ಲಿ ಬಿಗ್​​ಬಾಸ್ ಮನೆಯಲ್ಲಿ ವಿನ್ಯಾಸ ಮಾಡಿದ್ದಾರೆ ಆಯೋಜಕರು.

ಮಂಜುನಾಥ ಸಿ.
|

Updated on:Sep 29, 2025 | 1:10 AM

Share
ಬಿಗ್​​ಬಾಸ್ ಕನ್ನಡ 12 ಪ್ರಾರಂಭ ಆಗಿದ್ದು ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಸ್ವಾಗತಿಸುವ ಮುಂಚೆ ಪ್ರತಿ ಬಾರಿಯಂತೆ ವೀಕ್ಷಕರಿಗೆ ಬಿಗ್​​ಬಾಸ್ ಮನೆಯನ್ನು ತೋರಿಸಿದ್ದಾರೆ. ಈ ಬಾರಿ ಮನೆ ಅರಮನೆಯಂತಿದೆ.

1 / 9
ಕರ್ನಾಟಕವನ್ನು ಪ್ರತಿನಿಧಿಸುವ ಹಲವು ಚಿತ್ರಗಳು, ಮೂರ್ತಿಗಳನ್ನು ಬಿಗ್​​ಬಾಸ್ ಮನೆಯಲ್ಲಿ ಇರಿಸಲಾಗಿದೆ. ಮೈಸೂರು ಅರಮನೆ, ಹೊಯ್ಸಳ ಸಾಮ್ರಾಜ್ಯ ಸೇರಿದಂತೆ ಹಲವು ವಿಶೇಷಗಳು ಈ ಬಾರಿ ಬಿಗ್​​ಬಾಸ್ ಮನೆಯಲ್ಲಿದ್ದಾರೆ.

2 / 9
ಇಷ್ಟು ವರ್ಷ ಬಿಗ್​​ಬಾಸ್ ಶೋ ಅನ್ನು ಪ್ರೀತಿಸಿದ ಕರ್ನಾಟಕದ ಜನರಿಗೆ ಈ ಬಾರಿ ಬಿಗ್​​ಬಾಸ್ ಮನೆಯ ವಿನ್ಯಾಸವನ್ನು ಡೆಡಿಕೇಟ್ ಮಾಡಿದ್ದಾರಂತೆ ಬಿಗ್​​ಬಾಸ್.

3 / 9
ಮನೆಯೆಂದ ಮೇಲೆ ದೇವರ ಮನೆ ಬೇಡವೆ. ಪ್ರತಿ ಬಾರಿಯಂತೆ ಈ ಬಾರಿಯೂ ಸುದೀಪ್ ಅವರು ಬಿಗ್​​ಬಾಸ್ ಮನೆಯ ದೇವಿಗೆ ಕೈಮುಗಿದು ಸ್ಪರ್ಧಿಗಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.

4 / 9
ಇದು ಮನೆಯ ಪೌಡರ್ ರೂಂ, ಇಲ್ಲಿ ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳುತ್ತಾರೆ. ಕನ್ನಡಿ ಪಕ್ಕದಲ್ಲಿ ದರ್ಪಣ ಸುಂದರಿಯನ್ನು ನಿಲ್ಲಿಸಿದ್ದಾರೆ ಬಿಗ್​​ಬಾಸ್.

5 / 9
ಇದು ಕ್ಯಾಪ್ಟನ್ ರೂಂ. ಸರಿಯಾಗಿ ಗಮನಿಸಿದರೆ ಕ್ಯಾಪ್ಟನ್ ರೂಂನಲ್ಲಿ ಸಿಂಹ ಮತ್ತು ಕೆಲ ಪ್ರಾಣಿಗಳ ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಏನೋ ಹೇಳುತ್ತಿದ್ದಾರೆ ಬಿಗ್​​ಬಾಸ್.

6 / 9
ಬಿಗ್​​ಬಾಸ್ ಮನೆಯ ಕಿಚನ್ ಇದು, ಮನೆಯ ಬಲು ಪವರ್​​ಫುಲ್ ಸ್ಥಳ ಇದು. ಕಿಚನ್ ನಲ್ಲಿ ದರ್ಬಾರು ಮಾಡಿದವರು, ಮನೆಯನ್ನೇ ನಿಭಾಯಿಸುತ್ತಾರೆ. ಇಲ್ಲಿ ಅಡುಗೆ ಅಲ್ಲ, ಮನಸ್ಸು ಸೀದು ಹೋಗುತ್ತದೆ ಎನ್ನುತ್ತಾರೆ ಸುದೀಪ್.

7 / 9
ಇದು ಬಿಗ್​​ಬಾಸ್ ಮನೆಯ ಟಾಯ್ಲೆಟ್ ಮತ್ತು ಬಾತ್​​ರೂಂ ಸ್ಥಳ. ಇಲ್ಲಿ ಸಾಕಷ್ಟು ಹಸಿರು ಇಟ್ಟು ಅಂದ ಮಾಡಿದ್ದಾರೆ ಬಿಗ್​​ಬಾಸ್, ಗಿಡ ಇದೆ ಎಂದು ಇಲ್ಲೇ ಸು-ಸು ಮಾಡಿಬಿಡಬೇಡಿ ಎಂದು ಹುಡುಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಸುದೀಪ್.

8 / 9
ಇದು ಕನ್​ಫೆಷನ್ ರೂಂ, ಈ ಬಾರಿ ಭಿನ್ನವಾಗಿ ಹೆಡ್ ಫೋನ್ ಮಾದರಿಯಲ್ಲಿ ಸೀಟನ್ನು ಡಿಸೈನ್ ಮಾಡಿದ್ದಾರೆ ಬಿಗ್​​ಬಾಸ್. ಇಲ್ಲಿಯೇ ಬಿಗ್​​ಬಾಸ್ ಸ್ಪರ್ಧಿಗಳೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡುತ್ತಾರೆ.

9 / 9

Published On - 6:50 pm, Sun, 28 September 25

ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ

ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ

ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು

ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು

ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ

ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ

ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್

ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ

Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ