AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 986 ರನ್​ಗಳು… ಐಪಿಎಲ್​ನಲ್ಲಿ ಹೊಸ ಇತಿಹಾಸ

IPL 2026: ಐಪಿಎಲ್​ನ ಡಬಲ್ ಹೆಡ್ಡರ್ ಪಂದ್ಯಗಳ ದಿನದಂದು ಈವರೆಗೆ ನಾಲ್ಕು ತಂಡಗಳು ಸೇರಿ 900 ರನ್​ ಕಲೆಹಾಕಿದ ಇತಿಹಾಸ ಇರಲಿಲ್ಲ. ಈ ಹಿಂದೆ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ 899 ರನ್​ಗಳಿಸಿದ್ದೇ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Apr 26, 2026 | 7:59 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಪಂಜಾಬ್ ಕಿಂಗ್ಸ್ (PBKS)​, ಡೆಲ್ಲಿ ಕ್ಯಾಪಿಟಲ್ಸ್ (DC), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು. ಅದು ಸಹ ರನ್​ ರಾಶಿ ಪೇರಿಸುವ ಮೂಲಕ ಎಂಬುದು ವಿಶೇಷ.

1 / 6
ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಒಂದೇ ದಿನ ಬರೋಬ್ಬರಿ 986 ರನ್​ಗಳು ಮೂಡಿಬಂದಿವೆ. ಐಪಿಎಲ್​ನಲ್ಲಿ ಹೀಗೆ ಒಂದೇ ದಿನ 900 ಕ್ಕಿಂತ ಅಧಿಕ ರನ್​ಗಳು ಮೂಡಿಬಂದಿರುವುದು ಇದೇ ಮೊದಲು. ಈ ಹಿಂದೆ 899 ರನ್​ಗಳು ದಾಖಲಾಗಿದ್ದು ಶ್ರೇಷ್ಠ ಸಾಧನೆಯಾಗಿತ್ತು.

2 / 6
ಆದರೆ ಈ ಬಾರಿಯ ಐಪಿಎಲ್​ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 264 ರನ್​​ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ಪಂಜಾಬ್ ಕಿಂಗ್ಸ್ 18.5 ಓವರ್​ಗಳಲ್ಲಿ 265 ರನ್​ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅಂದರೆ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 529 ರನ್​ಗಳು.

3 / 6
ಈ ಪಂದ್ಯದ ಬಳಿಕ 36ನೇ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 228 ರನ್​ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡ 18.3 ಓವರ್​ಗಳಲ್ಲಿ 229 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ. ಅಂದರೆ ಈ ಮ್ಯಾಚ್​ನಲ್ಲಿ ಒಟ್ಟು 457 ರನ್​​ಗಳು ಮೂಡಿಬಂದಿದ್ದವು.ಈ ಮೂಲಕ ಐಪಿಎಲ್​ನ ಡಬಲ್ ಹೆಡ್ಡರ್ ಪಂದ್ಯಗಳು ಬರೋಬ್ಬರಿ 986 ರನ್​ಗಳಿಗೆ ಸಾಕ್ಷಿಯಾಗಿದೆ.

4 / 6
ಇದಕ್ಕೂ ಮುನ್ನ 2024 ರಲ್ಲಿ 899 ರನ್​​ಗಳು ಮೂಡಿಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು. ಅಂದು ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ (254) ಹಾಗೂ ಮುಂಬೈ ಇಂಡಿಯನ್ಸ್ (247) ನಡುವಣ ಪಂದ್ಯದಲ್ಲಿ 504 ರನ್​ ಮೂಡಿಬಂದರೆ, ಲಕ್ನೋ ಸೂಪರ್ ಜೈಂಟ್ಸ್ (196) ಹಾಗೂ ರಾಜಸ್ಥಾನ್ ರಾಯಲ್ಸ್ (199) ನಡುವಣ ಮ್ಯಾಚ್​ನಲ್ಲಿ 395 ರನ್​ಗಳು ದಾಖಲಾಗಿದ್ದವು. ಇದು ಐಪಿಎಲ್​ನ ಡಬಲ್ ಹೆಡ್ಡರ್ ಪಂದ್ಯದಲ್ಲಿ ಮೂಡಿಬಂದ ಗರಿಷ್ಠ ಒಟ್ಟು ಸ್ಕೋರ್ ಆಗಿತ್ತು.

5 / 6
ಇದೀಗ ಪಂಜಾಬ್ ಕಿಂಗ್ಸ್ (265), ಡೆಲ್ಲಿ ಕ್ಯಾಪಿಟಲ್ಸ್ (264), ಸನ್​ರೈಸರ್ಸ್ ಹೈದರಾಭಾದ್ (229) ಹಾಗೂ ರಾಜಸ್ಥಾನ್ ರಾಯಲ್ಸ್ (228) ತಂಡಗಳ ದಾಂಡಿಗರ ಆರ್ಭಟದೊಂದಿಗೆ ಐಪಿಎಲ್​ನ ಡಬಲ್ ಹೆಡ್ಡರ್ ಪಂದ್ಯದಂದು ಬರೋಬ್ಬರಿ 986 ರನ್​​ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್​​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

6 / 6
Follow Us
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್

ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ

ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?

ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ

‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’

ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?

ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ

ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ KRS​ನಿಂದ ಮಾತ್ರ ನೀರು