AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಆರ್ಭಟಕ್ಕೆ ಜಯಸೂರ್ಯ ದಾಖಲೆ ಧೂಳೀಪಟ

Abhishek Sharma Record: ಏಷ್ಯಾಕಪ್ ಟೂರ್ನಿಯ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡ 20 ಓವರ್‌ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ ಕೇವಲ 127 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 41 ರನ್ ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Sep 25, 2025 | 7:17 AM

Share
Asia Cup 2025: ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಯಂಗ್ ಗನ್ ಅಭಿಷೇಕ್ ಶರ್ಮಾ (Abhishek Sharma) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಲೆಜೆಂಡ್ ಸನತ್ ಜಯಸೂರ್ಯ ಅವರ ಭರ್ಜರಿ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ.

1 / 6
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಸೆ.24) ನಡೆದ ಏಷ್ಯಾಕಪ್ ನ 16ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

2 / 6
ಮೊದಲ ಮೂರು ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಅಭಿ, ಆ ಬಳಿಕ ಬಾಂಗ್ಲಾದೇಶ್ ಬೌಲರ್‌ಗಳ ಬೆಂಡೆತ್ತಿದರು. ಪರಿಣಾಮ ಅಭಿಷೇಕ್ ಶರ್ಮಾ ಬ್ಯಾಟ್​ನಿಂದ ಕೇವಲ 37 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 75 ರನ್​ಗಳು ಮೂಡಿಬಂತು. ಈ 5 ಭರ್ಜರಿ ಸಿಕ್ಸ್ ಗಳೊಂದಿಗೆ ಅಭಿಷೇಕ್ ಏಷ್ಯಾಕಪ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

3 / 6
ಅಂದರೆ ಏಷ್ಯಾಕಪ್ ಟೂರ್ನಿ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ  ಶ್ರೀಲಂಕಾದ ಮಾಜಿ ಆರಂಭಿಕ ದಾಂಡಿಗ ಸನತ್ ಜಯಸೂರ್ಯ ಅವರ ಹೆಸರಿನಲ್ಲಿತ್ತು.

4 / 6
2008 ರ ಏಷ್ಯಾಕಪ್ ಟೂರ್ನಿಯಲ್ಲಿ ಲಂಕಾ ಲೆಜೆಂಡ್ ಸನತ್ ಜಯಸೂರ್ಯ ಬರೋಬ್ಬರಿ 14 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 17 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಅಭಿಷೇಕ್ ಶರ್ಮಾ ಯಶಸ್ವಿಯಾಗಿದ್ದಾರೆ.

5 / 6
ಈ ಬಾರಿಯ ಟೂರ್ನಿಯಲ್ಲಿ ಈವರೆಗೆ 5 ಇನಿಂಗ್ಸ್ ಆಡಿರುವ ಅಭಿಷೇಕ್ ಶರ್ಮಾ ಒಟ್ಟು 17 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.

6 / 6
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ

ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ