AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs SRH Record Alert: ಅಪರೂಪದ ತ್ರಿಶತಕ ಪೂರೈಸಿದ ಅಭಿ‘ಸಿಕ್ಸರ್’ ಶರ್ಮಾ

Abhishek Sharma's IPL Comeback: ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಅಭಿಷೇಕ್ ಶರ್ಮಾ IPLನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 21 ಎಸೆತಗಳಲ್ಲಿ ಸ್ಫೋಟಕ 48 ರನ್ ಬಾರಿಸಿ ಮಿಂಚಿದರು. ಈ ಇನ್ನಿಂಗ್ಸ್‌ನೊಂದಿಗೆ ತಮ್ಮ ಟಿ20 ವೃತ್ತಿಜೀವನದಲ್ಲಿ 300 ಸಿಕ್ಸರ್‌ಗಳ ಮೈಲಿಗಲ್ಲು ದಾಟಿದರು. ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. SRH ಪರ 100 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ.

ಪೃಥ್ವಿಶಂಕರ
|

Updated on: Apr 02, 2026 | 8:59 PM

Share
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆರಂಭಿಕ ಅಭಿಷೇಕ್ ಶರ್ಮಾ ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ದ್ವಿಪಕ್ಷೀಯ ಸರಣಿಯಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸಿದ್ದ ಅಭಿಷೇಕ್ ನಿರ್ಣಾಯಕ ಪಂದ್ಯಾವಳಿಯಲ್ಲಿನ ವೈಫಲ್ಯಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು.

1 / 6
ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನ ಮೊದಲ ಪಂದ್ಯದಲ್ಲಿಯೂ ಅಭಿಷೇಕ್ ಪ್ರಭಾವ ಬೀರಲಿಲ್ಲ. ಆದಾಗ್ಯೂ, ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್​ ಕಂಡುಕೊಂಡಿರುವ ಅಭಿಷೇಕ್ ರನ್​​ಗಳ ಮಳೆ ಹರಿಸಿದರು. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ಅಭಿಷೇಕ್ 48 ರನ್​ಗಳ ಇನ್ನಿಂಗ್ಸ್ ಆಡಿದರು.

2 / 6
ಕೇವಲ 2 ರನ್​ಗಳಿಂದ ಅರ್ಧಶತಕ ವಂಚಿತರಾದ ಅಭಿಷೇಕ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 48 ರನ್ ಬಾರಿಸಿದರು. ಅದರಲ್ಲೂ ವರುಣ್ ಚಕ್ರವರ್ತಿ ಎಸೆದ ಓವರ್​ನಲ್ಲಿ 2 ಸಿಕ್ಸರ್ ಹಾಗೂ 3 ಭರ್ಜರಿ ಬೌಂಡರಿಗಳನ್ನು ಬಾರಿಸಿದರು. ಈ ಒಂದೇ ಓವರ್​ನಲ್ಲಿ ಅವರು 24 ರನ್ ಕಲೆಹಾಕಿದರು.

3 / 6
ಇನ್ನು ಈ ಪಂದ್ಯದಲ್ಲಿ 4 ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದ ಅಭಿಷೇಕ್ ಇದರೊಂದಿಗೆ ತಮ್ಮ ಟಿ20 ವೃತ್ತಿಜೀವನದಲ್ಲಿ 300 ಸಿಕ್ಸರ್‌ಗಳ ಮೈಲಿಗಲ್ಲನ್ನು ದಾಟಿದರು. ಟಿ20 ಸ್ವರೂಪದಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾದರು.

4 / 6
ಇಲ್ಲಿಯವರೆಗೆ, ಈ ಸಾಧನೆ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು. ರೋಹಿತ್ 330 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಭಿಷೇಕ್ ಪ್ರಸ್ತುತ 301 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

5 / 6
ಇದರ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 100 ಕ್ಕೂ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ಒಟ್ಟಾರೆ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6 / 6
Follow Us