AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬರ್ ಶತಕಕ್ಕೆ ವಿಶ್ವ ದಾಖಲೆಯೇ ಧೂಳೀಪಟ

Babar Azam Records: ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬ ಮಾತನ್ನು ಬಾಬರ್ ಆಝಂ ತಮ್ಮ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿಂದೆ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 12,000 ರನ್ ಪೂರೈಸಿದ ವಿಶ್ವ ದಾಖಲೆ ಬರೆದಿದ್ದ ಬಾಬರ್ ಇದೀಗ ನಾಯಕನಾಗಿ ಅತಿ ಹೆಚ್ಚು ಶತಕ ಸಿಡಿಸಿದ ವರ್ಲ್ಡ್​ ರೆಕಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Apr 29, 2026 | 10:24 AM

Share
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಶ್ವ ದಾಖಲೆಯೊಂದಿಗೆ ಬಾಬರ್ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿದಿದ್ದಾರೆ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 5
ಪಾಕಿಸ್ತಾನ್ ಸೂಪರ್ ಲೀಗ್​ನ ಕ್ವಾಲಿಫೈರ್​ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 59 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಫೋರ್​ಗಳೊಂದಿಗೆ 103 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ನಾಯಕನೆಂಬ ವಿಶ್ವ ದಾಖಲೆಯನ್ನು ಬಾಬರ್ ತಮ್ಮದಾಗಿಸಿಕೊಂಡರು.

2 / 5
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಹೆಸರಿನಲ್ಲಿತ್ತು. ಟಿ20 ಕ್ರಿಕೆಟ್​ನಲ್ಲಿ 208 ಇನಿಂಗ್ಸ್​ಗಳಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಫಾಫ್ ಡುಪ್ಲೆಸಿಸ್ 8 ಶತಕ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಶತಕ ಸಿಡಿಸಿದ ನಾಯಕ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

3 / 5
ಇದೀಗ ಈ ವಿಶ್ವ ದಾಖಲೆಯನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 147 ಇನಿಂಗ್ಸ್​ಗಳಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಬಾಬರ್ ಒಟ್ಟು 9 ಶತಕ ಸಿಡಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

4 / 5
ಇನ್ನು ಈ ಶತಕದೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ್ದ ಉಸ್ಮಾನ್ ಖಾನ್ (4 ಶತಕ) ಅವರ ದಾಖಲೆಯನ್ನು ಕೂಡ ಬಾಬರ್ ಆಝಂ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಪಿಎಸ್ಎಲ್​ನಲ್ಲಿ 4000 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!

ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು

ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’

KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?

KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್

ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?

ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ

ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ

ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್

ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ