AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Auction: RCB ಗೆ ಸ್ಟಾರ್ ಆಟಗಾರರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ…

IPL 2023 RCB: 2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು.

TV9 Web
| Edited By: |

Updated on: Dec 22, 2022 | 8:30 PM

Share
ಐಪಿಎಲ್ 16ರ ಆವೃತ್ತಿಯ ಹರಾಜಿಗಾಗಿ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಕೊಚ್ಚಿನ್​ನಲ್ಲಿ ನಡೆಯಲಿರುವ ಮಿನಿ ಹರಾಜಿನ ಮೂಲಕ 10 ತಂಡಗಳು ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಆದರೆ ಇತ್ತ ಆರ್​ಸಿಬಿ ಫ್ರಾಂಚೈಸಿಯು ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಸ್ಟಾರ್ ಆಟಗಾರರ ಖರೀದಿಗೆ ಅದುವೇ ತೊಡಕಾಗಬಹುದು.

1 / 7
ಅಂದರೆ ಈ ಬಾರಿ ಆರ್​ಸಿಬಿ ತಂಡವು 18 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 7 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಬೆಂಗಳೂರು ಫ್ರಾಂಚೈಸಿಗಿದೆ. ಇದರಲ್ಲಿ 5 ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ....

2 / 7
ಆದರೆ ಆರ್​ಸಿಬಿ ಬಳಿ ಉಳಿದಿರುವುದು ಕೇವಲ 8.75 ಕೋಟಿ ರೂ. ಮಾತ್ರ. ಅಂದರೆ 8 ಕೋಟಿ 7 ಲಕ್ಷದೊಳಗೆ ಆರ್​ಸಿಬಿ ತಂಡವು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಅಂದರೆ ಇಲ್ಲಿ 8 ಕೋಟಿಗಿಂತ ಹೆಚ್ಚಿನ ಮೊತ್ತ ನೀಡಿ ಆರ್​ಸಿಬಿಗೆ ಯಾವುದೇ ಸ್ಟಾರ್ ಆಟಗಾರನನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

3 / 7
ಏಕೆಂದರೆ ಎಸ್​ಆರ್​ಹೆಚ್​ ತಂಡದ ಬಳಿ 42.25 ಕೋಟಿ ರೂ. ಹರಾಜು ಮೊತ್ತ ಇದ್ದರೆ, ಪಂಜಾಬ್ ಕಿಂಗ್ಸ್​ ಬಳಿ 32.2 ಕೋಟಿ ಹರಾಜು ಮೊತ್ತವಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್​, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಬಳಿ 20 ಕೋಟಿಗಿಂತ ಅಧಿಕ ಮೊತ್ತವಿದೆ. ಅಂದರೆ ಇಲ್ಲಿ ಈ 5 ತಂಡಗಳು ಸ್ಟಾರ್ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ನಡೆಸಲಿದೆ.

4 / 7
ಇತ್ತ ಕೇವಲ 8.75 ಕೋಟಿ ಹೊಂದಿರುವ ಆರ್​ಸಿಬಿ ಸ್ಟಾರ್ ಆಟಗಾರರ ಖರೀದಿಗೆ ಮುಂದಾದರೂ ಎಸ್​ಆರ್​ಹೆಚ್​, ಪಂಜಾಬ್ ಕಿಂಗ್ಸ್​, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಪೈಪೋಟಿ ಎದುರಿಸಲಿದೆ. ಇದರಿಂದ ಪ್ರಸಿದ್ಧ ಆಟಗಾರರು ಆರ್​ಸಿಬಿಗೆ ಸಿಗುವುದು ಅನುಮಾನ.

5 / 7
ಅದರಲ್ಲೂ ಇಬ್ಬರು ವಿದೇಶಿ ಆಟಗಾರರ ಆಯ್ಕೆ ಹೊಂದಿರುವ ಆರ್​ಸಿಬಿ ಒಬ್ಬ ಆಟಗಾರನಿಗಾಗಿ ಹೆಚ್ಚಿನ ಮೊತ್ತ ವ್ಯಯಿಸಿದರೆ, ಬಿಡ್ಡಿಂಗ್ ಲೆಕ್ಕಚಾರಗಳು ತಲೆ ಕೆಳಗಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ಕಳೆದ ಸೀಸನ್​ನಲ್ಲಿನ ಮೆಗಾ ಹರಾಜು.

6 / 7
2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು. ಅದರಂತೆ ಅಂತಿಮವಾಗಿ ಆರ್​ಸಿಬಿ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ಆರ್​ಸಿಬಿ ಫ್ರಾಂಚೈಸಿಯು ಜಾಣ ನಡೆಯ ಮೂಲಕ ತಂಡ ಕಟ್ಟುವ ಸಾಧ್ಯತೆ ಹೆಚ್ಚಿದೆ.

7 / 7
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್