AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4,4,4,4,4: ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

IPL 2023 Kannada: ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 199 ರನ್​ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 142 ರನ್​ಗಳಿಸಲಷ್ಟೇ ಶಕ್ತರಾದರು.

TV9 Web
| Edited By: |

Updated on: Apr 08, 2023 | 11:30 PM

Share
IPL 2023:  ಐಪಿಎಲ್​ನ 11ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿತ್ತು.

1 / 7
ಅದರಂತೆ ಆರ್​ಆರ್ ಪರ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ವೇಳೆ ಸ್ಟ್ರೈಕ್​ ತೆಗೆದುಕೊಂಡ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿದರು.

2 / 7
ಖಲೀಲ್ ಅಹ್ಮದ್ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತಕ್ಕೆ ಫೋರ್ ಬಾರಿಸುವ ಮೂಲಕ ಶುಭಾರಂಭ ಮಾಡಿದ ಜೈಸ್ವಾಲ್, 2ನೇ ಎಸೆತವನ್ನು ಕೂಡ ಬೌಂಡರಿಗಟ್ಟಿದರು. ಇನ್ನು ಮೂರನೇ ಎಸೆತದಲ್ಲೂ ಫೋರ್ ಬಾರಿಸಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರು.

3 / 7
ಆದರೆ ನಾಲ್ಕನೇ ಎಸೆತದ ಮೂಲಕ ಯಶಸ್ವಿ ಜೈಸ್ವಾಲ್ ಅವರನ್ನು ವಂಚಿಸುವಲ್ಲಿ ಖಲೀಲ್ ಅಹ್ಮದ್ ಯಶಸ್ವಿಯಾದರು. ಆದರೆ 5ನೇ ಹಾಗೂ 6ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್​ ಬಾರಿಸಿ ಜೈಸ್ವಾಲ್ ಒಟ್ಟು 20 ರನ್​ ಕಲೆಹಾಕಿದರು.

4 / 7
ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಓವರ್ ಆಗಿದೆ. ಅಂದರೆ ಐಪಿಎಲ್ 2023ರಲ್ಲಿ ಇದುವರೆಗೆ ನಡೆದ 12 ಪಂದ್ಯಗಳಲ್ಲಿ ಯಾವುದೇ ಬ್ಯಾಟರ್ ಮೊದಲ ಓವರ್​ನಲ್ಲೇ 20 ರನ್​ ಕಲೆಹಾಕಿಲ್ಲ. ಇದಾಗ್ಯೂ ಇದು ಐಪಿಎಲ್​ನ ಐತಿಹಾಸಿಕ ದಾಖಲೆಯಂತು ಅಲ್ಲ.

5 / 7
ಐಪಿಎಲ್​ ಇನಿಂಗ್ಸ್​ನ ಮೊದಲ ಓವರ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ದಾಖಲೆ ಕ್ರಿಸ್ ಗೇಲ್-ಮಯಾಂಕ್​ ಅಗರ್ವಾಲ್​ ಹೆಸರಿನಲ್ಲಿದೆ. 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಗೇಲ್-ಅರ್ಗವಾಲ್ ಜೊತೆಗೂಡಿ ಅಬು ನಚೀಮ್ ಎಸೆದ ಮೊದಲ ಓವರ್​ನಲ್ಲಿ ಒಟ್ಟು 27 ರನ್​ ಕಲೆಹಾಕಿದ್ದರು.

6 / 7
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 199 ರನ್​ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 142 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಂಜು ಸ್ಯಾಮ್ಸನ್ ಪಡೆ 57 ರನ್​ಗಳ ಭರ್ಜರಿ ಜಯ ಸಾಧಿಸಿತು. ಹಾಗೆಯೇ ಈ ಪಂದ್ಯದಲ್ಲಿ  31 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ನೊಂದಿಗೆ 60 ರನ್​ ಬಾರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

7 / 7
Web contact
Web contact

TV9 Kannada

Read More
Follow Us
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!

ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​

ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು