AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಅರಬ್ಬರ ನಾಡಿನಲ್ಲಿ ಐಪಿಎಲ್ ಮೆಗಾ ಹರಾಜು

IPL 2025 Mega Auction: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಗರಿಷ್ಠ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ರಿಟೈನ್ ಮಾಡಿಕೊಂಡ ಆಟಗಾರರಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಂದರೆ ಒಂದು ಫ್ರಾಂಚೈಸಿಯು ಆರು ಆಟಗಾರರನ್ನು ರಿಟೈನ್ ಮಾಡಿದರೆ 79 ಕೋಟಿ ರೂ. ಖರ್ಚಾಗಲಿದೆ. ಈ ಮೊತ್ತವು ಒಟ್ಟು ಹರಾಜು ಮೊತ್ತದಿಂದ ಕಡಿತವಾಗಲಿದೆ. ಈ ಬಾರಿಯ ಮೆಗಾ ಆಕ್ಷನ್​ಗಾಗಿ 120 ಕೋಟಿ ರೂ. ಹರಾಜು ಮೊತ್ತ ಘೋಷಿಸಲಾಗಿದೆ.

ಝಾಹಿರ್ ಯೂಸುಫ್
|

Updated on: Oct 06, 2024 | 2:30 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಆಟಗಾರರ ಧಾರಣ ನಿಯಮವನ್ನು ಪ್ರಕಟಿಸಲಾಗಿದೆ. ಅಲ್ಲದೆ ಅಕ್ಟೋಬರ್ 31 ರೊಳಗೆ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕೆಂದು ಬಿಸಿಸಿಐ ತಿಳಿಸಿದೆ.

1 / 5
ಇನ್ನು ರಿಟೈನ್ ಆಟಗಾರರ ಪಟ್ಟಿ ಸಲ್ಲಿಕೆಯ ಬೆನ್ನಲ್ಲೇ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ನವೆಂಬರ್ ಅಂತ್ಯದೊಳಗೆ ಐಪಿಎಲ್​ ಮೆಗಾ ಹರಾಜು ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಮೆಗಾ ಹರಾಜು ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

2 / 5
ಐಪಿಎಲ್ 2023 ರ ಹರಾಜು ಪ್ರಕ್ರಿಯೆಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್​ನ ಮೆಗಾ ಹರಾಜಿನ ಆತಿಥ್ಯವಹಿಸಿಕೊಳ್ಳಲು ಸೌದಿ ಅರೇಬಿಯಾ ಆಸಕ್ತಿವಹಿಸಿದೆ. ಹೀಗಾಗಿ ಅಬ್ಬರನಾಡಿನಲ್ಲಿ ಈ ಬಾರಿ ಮೆಗಾ ಆಕ್ಷನ್ ನಡೆಯುವ ಸಾಧ್ಯತೆಯಿದೆ.

3 / 5
ಇತ್ತ ಮೆಗಾ ಹರಾಜಿನ ಪ್ರಕ್ರಿಯೆಗಾಗಿ ಸೂಕ್ತವಾದ ಸ್ಥಳ ಅಥವಾ ಹೋಟೆಲ್ ಅನ್ನು ಹುಡುಕುವುದು ಬಿಸಿಸಿಐಗೆ ಮುಂದಿರುವ ದೊಡ್ಡ ಸವಾಲು. ಏಕೆಂದರೆ ಫ್ರಾಂಚೈಸ್ ಮಾಲೀಕರಿಗೆ ಬೆಲೆಯು ಗಮನಾರ್ಹ ಅಂಶವಾಗಿರಬಾರದು. ಅದರಲ್ಲೂ ಸೌದಿ ಅರೇಬಿಯಾದಲ್ಲಿನ ವೆಚ್ಚಗಳು ದುಬೈಗಿಂತ ಹೆಚ್ಚು ಎಂದು ವರದಿಯಾಗಿದೆ.

4 / 5
ಇದಾಗ್ಯೂ ದುಬೈಯಿಂದ ಸೌದಿ ಅರೇಬಿಯಾದತ್ತ ಐಪಿಎಲ್​ ಅನ್ನು ಕೊಂಡೊಯ್ಯಲು ಬಿಸಿಸಿಐ ಆಸಕ್ತಿ ಹೊಂದಿದೆ. ಹೀಗಾಗಿ ಈ ಬಾರಿಯ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್ ಅಥವಾ ಜಿದ್ದಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ನವೆಂಬರ್ ತಿಂಗಳಾಂತ್ಯದಲ್ಲಿ ಅರಬ್ಬರ ನಾಡಿನಲ್ಲಿ 10 ಫ್ರಾಂಚೈಸಿಗಳ ನಡುವಣ ಹರಾಜು ಪೈಪೋಟಿಯನ್ನು ನಿರೀಕ್ಷಿಸಬಹುದು.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ