AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮೊದಲ 4 ಪಂದ್ಯಗಳಲ್ಲೇ RCB ತಂಡಕ್ಕೆ ಅಗ್ನಿಪರೀಕ್ಷೆ

IPL 2025 RCB Schedule: ಇಂಡಿಯನ್ ಪ್ರೀಮಿಯರ್ ಲೀಗ್​​ನ ಮೊದಲ ಸುತ್ತಿನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಬಲಿಷ್ಠ ಟೀಮ್​​ಗಳನ್ನು ಎದುರಿಸಲಿದೆ. ಅಲ್ಲದೆ ಮೊದಲ ಸುತ್ತಿನಲ್ಲಿ ಆರ್​ಸಿಬಿ ತವರಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಲಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಆರಂಭಿಕ ಪಂದ್ಯಗಳು ಅಗ್ನಿಪರೀಕ್ಷೆ ಎನ್ನಬಹುದು.

ಝಾಹಿರ್ ಯೂಸುಫ್
| Edited By: |

Updated on: Feb 17, 2025 | 2:04 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಡೇಟ್ ಫಿಕ್ಸ್​ ಆಗಿದೆ. ಈ ಬಾರಿಯ ಟೂರ್ನಿಯು ಮಾರ್ಚ್ 22 ರಿಂದ ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

1 / 7
ಇದಾದ ಬಳಿಕ ಕೂಡ ಆರ್​ಸಿಬಿ ಚಾಂಪಿಯನ್ ತಂಡಗಳನ್ನೇ ಎದುರಿಸಲಿದೆ. ಅಂದರೆ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಲ್ಕು ತಂಡಗಳ ವಿರುದ್ಧ ಆರ್​ಸಿಬಿ ಮೊದಲ 4 ಪಂದ್ಯಗಳನ್ನಾಡಲಿದೆ. ಈ ನಾಲ್ಕು ಟೀಮ್​ಗಳು ಕೂಡ ಬಲಿಷ್ಠ ಪಡೆ ಎಂಬುದು ವಿಶೇಷ.

2 / 7
ಮಾರ್ಚ್ 22 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡವು 2024ರ ಚಾಂಪಿಯನ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ.

3 / 7
ಮಾರ್ಚ್ 28 ರಂದು ಜರುಗಲಿರುವ ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

4 / 7
ಏಪ್ರಿಲ್ 2 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಎದುರಾಳಿ 2022ರ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ.

5 / 7
ಏಪ್ರಿಲ್ 7 ರಂದು ನಡೆಯಲಿರುವ ತನ್ನ ನಾಲ್ಕನೇ ಮ್ಯಾಚ್​ನಲ್ಲಿ ಆರ್​ಸಿಬಿ ತಂಡ ಚಾಂಪಿಯನ್ಸ್ ಖ್ಯಾತಿಯ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

6 / 7
ಇನ್ನು ಆರ್​ಸಿಬಿ ತಂಡವು ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 13 ರಂದು ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 18 ರಂದು ಪಂಜಾಬ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಆರ್​ಸಿಬಿ ತಂಡ ಬೆಂಗಳೂರಿನಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲಿದೆ. ಹೀಗಾಗಿಯೇ ಆರ್​ಸಿಬಿ ತಂಡದ ಪಾಲಿಗೆ ಮೊದಲ ಸುತ್ತು ಕಬ್ಬಿಣದ ಕಡಲೆ ಎಂದರೆ ತಪ್ಪಾಗಲಾರದು.

7 / 7
Follow Us
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ

ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು

‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ

ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ

‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?

Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ

ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ

ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ

ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ