RCB ಕೈಯಲ್ಲಿ CSK ಪ್ಲೇಆಫ್ ಭವಿಷ್ಯ: ಹೀಗಿದೆ ಲೆಕ್ಕಾಚಾರ
IPL 2026 CSK Playoffs Chances: ಐಪಿಎಲ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಿದ್ದಂತೆ, ಪ್ಲೇಆಫ್ ರೇಸ್ ತೀವ್ರ ಕುತೂಹಲ ಕೆರಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲು ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರುತುರಾಜ್ ಗಾಯಕ್ವಾಡ್ ಪಡೆಯ ಪ್ಲೇಆಫ್ ಭವಿಷ್ಯ ಈಗ ಕೇವಲ ಅವರ ಕೈಯಲ್ಲಿ ಮಾತ್ರ ಉಳಿದಿಲ್ಲ! ಹಾಗಾದರೆ, ಸಿಎಸ್‌ಕೆ ಮುಂದಿನ ಹಂತಕ್ಕೆ ಲಗ್ಗೆ ಇಡಲು ಉಳಿದಿರುವ ದಾರಿಗಳೇನು? ತಂಡದ ಮುಂದಿರುವ ಕಠಿಣ ಲೆಕ್ಕಾಚಾರಗಳು ಇಲ್ಲಿವೆ...
Updated on: May 16, 2026 | 7:41 AM

IPL 2026: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 7 ವಿಕೆಟ್‌ಗಳ ಆಘಾತಕಾರಿ ಸೋಲಿನ ನಂತರ, ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ಲೇಆಫ್ ಹಾದಿ ಈಗ ಕಠಿಣವಾಗಿದೆ. ಪ್ರಸ್ತುತ CSK ತಂಡ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲುಗಳೊಂದಿಗೆ ಒಟ್ಟು 12 ಅಂಕಗಳನ್ನು ಪಡೆದು, +0.027 ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. (PC: IPL)

ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇಆಫ್ ತಲುಪಲು ಈ ಎರಡು ಪಂದ್ಯಗಳು ನಿರ್ಣಾಯಕ. ಅಂದರೆ ಈ ಎರಡೂ ಮ್ಯಾಚ್ಗಳನ್ನು ಗೆದ್ದುಕೊಂಡರೆ ಸಿಎಸ್‌ಕೆ ತಂಡದ ಒಟ್ಟು ಪಾಯಿಂಟ್ 16 ಆಗಲಿದೆ. (PC: IPL)

ಇಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ತಂಡದ ಮುಂದಿನ ಎದುರಾಳಿಗಳು ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಗುಜರಾತ್ ಟೈಟಾನ್ಸ್ (GT). ಇವರನ್ನು ಸೋಲಿಸುವುದರಿಂದ ಆ ತಂಡಗಳ ಅಂಕಗಳಿಗೆ ಬ್ರೇಕ್ ಬೀಳಲಿದೆ. ಈ ಮೂಲಕ ಸಿಎಸ್‌ಕೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲಿ ಉಳಿಯಬಹುದು. (PC: IPL)

ಇದಾಗ್ಯೂ ಸಿಎಸ್‌ಕೆ ತಂಡದ ಮುಂದಿನ 2 ಗೆಲುವುಗಳು ಪ್ಲೇಆಫ್ ಆಡುವುದು ಖಚಿತವಾಗುವುದಿಲ್ಲ. ಏಕೆಂದರೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ ಎರಡೂ ಮ್ಯಾಚ್ಗಳಿವೆ. ಈ ಎರಡು ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ಕ್ರಮವಾಗಿ 18 ಮತ್ತು 17 ಅಂಕಗಳನ್ನು ಪಡೆಯಲಿದೆ. (PC: IPL)

ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವುದನ್ನು ಎದುರು ನೋಡಬೇಕು. ಏಕೆಂದರೆ ಎಸ್ಆರ್ಹೆಚ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನು ಆರ್ಸಿಬಿ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದರೆ ಸಿಎಸ್‌ಕೆ ತಂಡದ ಪ್ಲೇಆಫ್ ಹಾದಿ ಸುಲಭವಾಗಲಿದೆ. (PC: IPL)

ಅಂದರೆ ಆರ್ಸಿಬಿ ವಿರುದ್ಧ ಎಸ್ಆರ್ಹೆಚ್ ಸೋತರೆ, ಸಿಎಸ್‌ಕೆ ತಂಡವು ಎಸ್ಆರ್ಹೆಚ್ ವಿರುದ್ಧ ಗೆದ್ದು 16 ಅಂಕಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಹಾಗೆಯೇ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಗೆದ್ದರೆ, ಕೊನೆಯ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೂ ಕೇವಲ 15 ಅಂಕಗಳನ್ನು ಮಾತ್ರ ಪಡೆಯಲಿದೆ. ಈ ವೇಳೆ 16 ಅಂಕಗಳೊಂದಿಗೆ ಸಿಎಸ್‌ಕೆ ಟಾಪ್-4 ಗೆ ಎಂಟ್ರಿ ಕೊಡಬಹುದು. (PC: IPL)

ಇಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ಗಳ ವಿರುದ್ಧ ಆರ್ಸಿಬಿ ತಂಡ ಗೆಲುವು ಸಿಎಸ್‌ಕೆ ಪಾಲಿಗೆ ಅನಿವಾರ್ಯ. ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಗೆದ್ದರೆ ಸನ್‌ರೈಸರ್ಸ್ ಹೈದರಾಬಾದ್ ಪಾಯಿಂಟ್ಸ್ 14 ರಲ್ಲೇ ಉಳಿಯಲಿದೆ. ಅಲ್ಲದೆ ತನ್ನ ಮುಂದಿನ ಮ್ಯಾಚ್ನಲ್ಲಿ ಎಸ್ಆರ್ಹೆಚ್ ತಂಡವನ್ನು ಸೋಲಿಸಿ 14 ಅಂಕಗಳನ್ನು ಪಡೆದು, ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ಗೇರಬಹುದು.

ಹಾಗೆಯೇ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೆ, ಪಂಜಾಬ್ ಕಿಂಗ್ಸ್ ಕೊನೆಯ ಮ್ಯಾಚ್ನಲ್ಲಿ ಗೆದ್ದರೂ 15 ಅಂಕಗಳನ್ನು ಮಾತ್ರ ಪಡೆಯಲಿದೆ. ಹೀಗಾಗಿಯೇ ಒಂದಾರ್ಥದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಭವಿಷ್ಯ ಆರ್ಸಿಬಿ ತಂಡದ ಕೈಯಲ್ಲಿದೆ ಎಂದರೆ ತಪ್ಲಾಗಲಾರದು. (PC: IPL)

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
