AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್​ನಿಂದ ಹರ್ಷಿತ್ ರಾಣಾ ಔಟ್; ಕೆಕೆಆರ್‌ಗೆ ಹೆಚ್ಚಿದ ಸಂಕಷ್ಟ

Harshit Rana OUT of IPL 2026: ಐಪಿಎಲ್ 2026 ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಪ್ರಮುಖ ವೇಗಿ ಹರ್ಷಿತ್ ರಾಣಾ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ, ಗಾಯಗೊಂಡರೂ ಅವರಿಗೆ 4 ಕೋಟಿ ರೂ. ವೇತನವನ್ನು ಬಿಸಿಸಿಐ ನೀಡಲಿದೆ. ಬಿಸಿಸಿಐ ನಿಯಮದಂತೆ, ಕೇಂದ್ರೀಯ ಒಪ್ಪಂದದ ಆಟಗಾರರಿಗೆ ಇಂತಹ ಸೌಲಭ್ಯ ಸಿಗುತ್ತದೆ. ಕೆಕೆಆರ್ ಈಗ ರಾಣಾಗೆ ಬದಲಿ ಆಟಗಾರನನ್ನು ಹುಡುಕಬೇಕಿದೆ.

ಪೃಥ್ವಿಶಂಕರ
|

Updated on: Mar 13, 2026 | 10:46 PM

Share
2026 ರ ಐಪಿಎಲ್ ಆರಂಭಕ್ಕೂ ಮುನ್ನ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡಕ್ಕೆ ಪ್ರಮುಖ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು 19 ನೇ ಸೀಸನ್ ಐಪಿಎಲ್​ನಿಂದ ಹೊರಗಿಡಲಾಗಿದೆ. ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ರಾಣಾರನ್ನು ಐಪಿಎಲ್​ನಿಂದ ಹೊರಗಿಡುವ ತೀರ್ಮಾನಕ್ಕೆ ಬರಲಾಗಿದೆ.

1 / 5
ವಾಸ್ತವವಾಗಿ 2026 ರ ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ರಾಣಾಗೆ ಗಾಯವಾಗಿತ್ತು. ಈ ಗಾಯದಿಂದಾಗಿ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು. ಇದರ ನಂತರ ಹರ್ಷಿತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

2 / 5
ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದ ಹರ್ಷಿತ್ ರಾಣಾ, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಇದರಿಂದಾಗಿ ಅವರು ಐಪಿಎಲ್ 2026 ರಿಂದ ಹಿಂದೆ ಸರಿಯಬೇಕಾಯಿತು. ಆದರೆ ಐಪಿಎಲ್​ನಿಂದ ಹೊರಬಿದ್ದ ಬಳಿಕವೂ ಹರ್ಷಿತ್ ರಾಣಾಗೆ 4 ಕೋಟಿ ರೂ. ವೇತನ ಪಡೆಯಲಿದ್ದಾರೆ. ಆದಾಗ್ಯೂ ಈ ವೇತನವನ್ನು ಕೆಕೆಆರ್ ಫ್ರಾಂಚೈಸಿ ನೀಡುವುದಿಲ್ಲ. ಬದಲಿಗೆ ಬಿಸಿಸಿಐ ನೀಡಲಿದೆ.

3 / 5
ಬಿಸಿಸಿಐ ನಿಯಮಗಳ ಪ್ರಕಾರ, ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರ ಗಾಯಗೊಂಡು ಇಡೀ ಆವೃತ್ತಿಯಿಂದ ಹೊರಗುಳಿದ್ದರೂ ಆತನಿಗೆ ಪೂರ್ಣ ಸಂಬಳವನ್ನು ನೀಡಲಾಗುತ್ತದೆ. 2011 ರಿಂದ ಜಾರಿಗೆ ಬಂದ ಬಿಸಿಸಿಐ ನ ಈ ನೀತಿಯು ಈಗಲೂ ಜಾರಿಯಲ್ಲಿದೆ. ಹರ್ಷಿತ್ ರಾಣಾ ಅವರಿಗಿಂತ ಮೊದಲು, ರಿಷಭ್ ಪಂತ್ ಮತ್ತು ದೀಪಕ್ ಚಾಹರ್ ಈಗಾಗಲೇ ಈ ನೀತಿಯಿಂದ ಪ್ರಯೋಜನ ಪಡೆದಿದ್ದಾರೆ.

4 / 5
ಹರ್ಷಿತ್ ರಾಣಾ ಐಪಿಎಲ್​ನಿಂದ ಹೊರಬಿದ್ದ ಬೆನ್ನಲ್ಲೇ ಕೆಕೆಆರ್ ತಂಡಕ್ಕೆ ಜಿಂಬಾಬ್ವೆ ತಂಡದ ಸ್ಟಾರ್ ವೇಗಿ ಬ್ಲೆಸಿಂಗ್ ಮುಜರಬಾನಿಯ ಆಗಮನವಾಗಿದೆ. ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರ ಬದಲಿಯಾಗಿ ಬ್ಲೆಸಿಂಗ್ ಮುಜರಬಾನಿಯನ್ನು ತಂಡಕ್ಕೆ ಆಯ್ಕೆ ಮಾಡಿದೆ. ಈಗ, ಹರ್ಷಿತ್ ರಾಣಾ ಅವರ ಬದಲಿ ಆಟಗಾರನನ್ನು ಹುಡುಕುವ ಸವಾಲು ಕೆಕೆಆರ್ ಮುಂದಿದೆ. ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದು, ಇಲ್ಲಿಯವರೆಗೆ ಈ ತಂಡದ ಪರ 34 ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 / 5
Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ

ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌

ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ

13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್

ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್

ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?

ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ