IPL 2026: ಹೀಗಾದ್ರೆ ಮಾತ್ರ RCB vs CSK ಮತ್ತೆ ಮುಖಾಮುಖಿ
IPL 2026 RCB vs CSK: ಐಪಿಎಲ್ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 250 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.4 ಓವರ್ಗಳಲ್ಲಿ 207 ರನ್ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪಡೆ 43 ರನ್ಗಳ ಜಯ ಸಾಧಿಸಿದ್ದರು.
Updated on: Apr 08, 2026 | 7:03 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಬದ್ಧ ವೈರಿಗಳಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಇದಾಗ್ಯೂ ಉಭಯ ತಂಡಗಳು ಲೀಗ್ ಹಂತದಲ್ಲಿ ಮತ್ತೆ ಎದುರು ಬದರಾಗುವುದಿಲ್ಲ.

ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಒಂದೇ ಗ್ರೂಪ್ನಲ್ಲಿರುವುದು.ಈ ಬಾರಿಯ ಫಾರ್ಮ್ಯಾಟ್ ಪ್ರಕಾರ, ಒಂದು ತಂಡವು ತನ್ನದೇ ಗುಂಪಿನಲ್ಲಿರುವ ಉಳಿದ 4 ತಂಡಗಳ ವಿರುದ್ಧ ತಲಾ ಒಂದೇ ಒಂದು ಪಂದ್ಯವನ್ನು ಆಡಲಿದೆ. ಆದರೆ ಎದುರಾಳಿ ಗುಂಪಿನ (Group B) 5 ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು (ಹೋಮ್ & ಅವೇ) ಆಡಲಿದೆ. ಇತ್ತ RCB ಮತ್ತು CSK ತಂಡಗಳು ಗ್ರೂಪ್ A ನಲ್ಲಿರುವ ಕಾರಣ ಉಭಯ ತಂಡಗಳಿಗೆ ಒಂದು ಪಂದ್ಯ ಮಾತ್ರ ಇದೆ.

ಅದರಂತೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಆ ಒಂದು ಪಂದ್ಯವು ಮುಗಿದಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 43 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದಾಗ್ಯೂ ಉಭಯ ತಂಡಗಳು ದ್ವಿತೀಯ ಸುತ್ತಿನಲ್ಲಿ ಮುಖಾಮುಖಿಯಾಬಹುದು. ಇದಕ್ಕಾಗಿ ಈ ಕೆಳಗಿನಂತೆ ಫಲಿತಾಂಶ ಮೂಡಿಬರಬೇಕು...

ಅಂಕ ಪಟ್ಟಿ ಲೆಕ್ಕಾಚಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯಬೇಕು. ಈ ಮೂಲಕ ಪ್ಲೇ-ಆಫ್ಗೆ ಅರ್ಹತೆ ಪಡೆಯಬಹುದು. ಇನ್ನು ಪ್ಲೇಆಫ್ನಲ್ಲಿ ಮೂರು ಹಂತಗಳಲ್ಲಿ ಮುಖಾಮುಖಿಯಾಗಬಹುದು.

ಕ್ವಾಲಿಫೈಯರ್ ಪಂದ್ಯ: ಪ್ಲೇ-ಆಫ್ ಹಂತದಲ್ಲಿ ಉಭಯ ತಂಡಗಳ ಸ್ಥಾನಗಳಿಗೆ ಅನುಗುಣವಾಗಿ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿಯಾಗಬಹುದು. ಅಂದರೆ ಆರ್ಸಿಬಿ ಮತ್ತು ಸಿಎಸ್ಕೆ ಮೊದಲೆರಡು ಸ್ಥಾನಗಳನ್ನು ಪಡೆದರೆ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಎಲಿಮಿನೇಟರ್ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ, ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಎರಡನೇ ಕ್ವಾಲಿಫೈಯರ್ ಪಂದ್ಯ: ಒಂದು ವೇಳೆ ಆರ್ಸಿಬಿ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತು, ಅತ್ತ ಸಿಎಸ್ಕೆ ತಂಡವು ಎಲಿನೇಟರ್ ಪಂದ್ಯದಲ್ಲಿ ಗೆದ್ದರೆ ಉಭಯ ತಂಡಗಳು ಎರಡನೇ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ.

ಫೈನಲ್ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ-ಆಫ್ ಪಂದ್ಯಗಳನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದರೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಮತ್ತೊಂದು ಮುಖಾಮುಖಿಯನ್ನು ವೀಕ್ಷಿಸಬಹುದು.




