AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 1 ರನ್ನಿಂದ ಗೆದ್ದ ಗುಜರಾತ್ ನಾಯಕನಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ

Shubman Gill fine IPL 2026: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್‌ಗೆ ನಿಧಾನಗತಿಯ ಓವರ್​ಗಾಗಿ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಸೀಸನ್‌ನಲ್ಲಿ ಗುಜರಾತ್‌ನ ಮೊದಲ ನಿಯಮ ಉಲ್ಲಂಘನೆ ಇದಾಗಿದ್ದು, ಪಾಯಿಂಟ್ ಟೇಬಲ್‌ನಲ್ಲಿ ತಂಡ ಖಾತೆ ತೆರೆದರೂ, ಗಿಲ್‌ಗೆ ಆರ್ಥಿಕ ಹೊರೆಯಾಗಿದೆ. ಈ ಹಿಂದೆ ಶ್ರೇಯಸ್ ಅಯ್ಯರ್ ಕೂಡ ಇದೇ ಕಾರಣಕ್ಕೆ ದಂಡನೆಗೆ ಒಳಗಾಗಿದ್ದರು.

ಪೃಥ್ವಿಶಂಕರ
|

Updated on: Apr 09, 2026 | 6:24 PM

Share
ಈ ಬಾರಿಯ ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿದ್ದ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಗೆಲುವಿನ ಖಾತೆ ತೆರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯವನ್ನು 1 ರನ್​ಗಳಿಂದ ರೋಚಕವಾಗಿ ಗೆದ್ದುಕೊಂಡ ಗುಜರಾತ್ ತಂಡಕ್ಕೆ ಎರಡು ಅಂಕಗಳು ಸಿಕ್ಕಿವೆ. ಇದರಿಂದ ಗುಜರಾತ್ ತಂಡ ಪಾಯಿಂಟ್ ಟೇಬಲ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದೆ.

1 / 5
ಆದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಧಾನಗತಿಯ ಓವರ್‌ ನಿಯಮವನ್ನು ಗುಜರಾತ್ ಟೈಟಾನ್ಸ್ ತಂಡ ಉಲ್ಲಂಘಿಸಿದೆ. ಹೀಗಾಗಿ ತಂಡದ ನಾಯಕ ಶುಭ್‌ಮನ್ ಗಿಲ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿಸಿಐ ಆದೇಶ ಹೊರಡಿಸಿದೆ.

2 / 5
ಐಪಿಎಲ್ 2026 ರ 14 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಓವರ್ ದರಕ್ಕಾಗಿ ಗುಜರಾತ್ ನಾಯಕ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಇದು ಪ್ರಸಕ್ತ ಸೀಸನ್​ನಲ್ಲಿ ತಂಡವು ಐಪಿಎಲ್ ನೀತಿ ಸಂಹಿತೆ 2.22 ಅನ್ನು ಉಲ್ಲಂಘಿಸಿದ ಮೊದಲ ಪ್ರಕರಣವಾಗಿದ್ದು, ಇದರ ಪರಿಣಾಮವಾಗಿ ದಂಡ ವಿಧಿಸಲಾಗಿದೆ. ಗಿಲ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

3 / 5
ಈ ರೀತಿಯಾಗಿ ಬಿಸಿಸಿಐನಿಂದ ದಂಡನೆಗೆ ಒಳಗಾಗುತ್ತಿರುವ ಮೊದಲ ನಾಯಕ ಶುಭ್​ಮನ್ ಗಿಲ್ ಅಲ್ಲ. ಗಿಲ್​ಗೂ ಮೊದಲು ಶ್ರೇಯಸ್ ಅಯ್ಯರ್ ಎರಡು ಬಾರಿ ಈ ಅಪರಾಧ ಮಾಡಿದ್ದಾರೆ. ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಎರಡನೇ ಬಾರಿ ಅದನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅಯ್ಯರ್ ಮತ್ತೆ ಈ ನಿಯಮ ಮುರಿದರೆ ಅವರನ್ನು ಒಂದು ಪಂದ್ಯದಿಂದ ಹೊರಗಿಡಲಾಗುತ್ತದೆ.

4 / 5
ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕಗಳ ಸಹಾಯದಿಂದ 210 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಎಸೆತದಲ್ಲಿ 1 ರನ್​ಗಳ ವೀರೋಚಿತ ಸೋಲು ಅನುಭವಿಸಿತು.

5 / 5
Follow Us
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ

ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ

ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ

ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ

ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ

ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ

ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ

ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ