AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 42 ಪಂದ್ಯಗಳ ನಂತರ ಸನ್‌ರೈಸರ್ಸ್ ತಂಡಕ್ಕೆ ಅಂಬ್ರಿಶ್ ಆಗಮನ

IPL 2026: ಐಪಿಎಲ್ 2026 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಯುವ ಆಲ್‌ರೌಂಡರ್ ಆರ್‌ಎಸ್ ಅಂಬ್ರಿಶ್ ಸೇರ್ಪಡೆಯಾಗಿದ್ದಾರೆ. ಶಿವಂ ಮಾವಿ ಗಾಯಗೊಂಡ ಕಾರಣ ಅವರ ಬದಲಿಗೆ ಅಂಬ್ರಿಶ್‌ಗೆ ಅವಕಾಶ ದೊರೆತಿದೆ. ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಅಂಬ್ರಿಶ್ ಬೌಲಿಂಗ್‌ನಲ್ಲಿ ಮಿಂಚಿದ್ದರು. ಐಪಿಎಲ್‌ನಲ್ಲಿ ಅವರ ಚೊಚ್ಚಲ ಟಿ20 ಪಂದ್ಯ ಆಡುವ ನಿರೀಕ್ಷೆಯಿದ್ದು, ಕೂಚ್ ಬೆಹಾರ್ ಟ್ರೋಫಿ ವಿಜೇತ ನಾಯಕನಾಗಿ ಗಮನ ಸೆಳೆದಿದ್ದಾರೆ.

ಪೃಥ್ವಿಶಂಕರ
|

Updated on: May 01, 2026 | 7:33 PM

Share
ಐಪಿಎಲ್ 2026 ರಲ್ಲಿ ಸೋಲು ಗೆಲುವಿನ ಸಮಾನ ರುಚಿ ನೋಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಬಂದ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ಬೀಗುತ್ತಿದೆ. ಈ ನಡುವೆ ಈ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ಆ ಆಟಗಾರನ ಹೆಸರು ಆರ್‌ಎಸ್ ಅಂಬ್ರಿಶ್.

1 / 5
ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ವೇಗಿ ಶಿವಂ ಮಾವಿ ಬದಲಿಗೆ ಆರ್‌ಎಸ್ ಅಂಬ್ರಿಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂಬ್ರಿಶ್ ಒಬ್ಬ ಆಲ್‌ರೌಂಡರ್ ಆಗಿದ್ದು, ಬಲಗೈ ಮಧ್ಯಮ ವೇಗಿ ಮತ್ತು ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ. ಆರ್‌ಎಸ್ ಅಂಬ್ರಿಶ್ ಅಂಡರ್ -19 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು.

2 / 5
ಅಂಡರ್ -19 ವಿಶ್ವಕಪ್‌ನಲ್ಲಿ ಅವರು ತಮ್ಮ ಬೌಲಿಂಗ್‌ನಿಂದ ಎಲ್ಲರ ಹೃದಯ ಗೆದ್ದಿದ್ದ ಅಂಬ್ರಿಶ್, ಆಡಿದ 7 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ತಮಿಳುನಾಡಿನವರಾಗಿರುವ ಅಂಬ್ರಿಶ್ ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಕೇವಲ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 43 ರನ್ ಜೊತೆಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

3 / 5
ಕುತೂಹಲಕಾರಿಯಾಗಿ, ಅಂಬ್ರಿಶ್ ಇನ್ನೂ ಟಿ20 ಪಂದ್ಯವನ್ನು ಆಡಿಲ್ಲ. ಐಪಿಎಲ್‌ನಲ್ಲಿ ಅವಕಾಶ ಸಿಕ್ಕರೆ , ಅದು ಅವರ ಚೊಚ್ಚಲ ಟಿ20 ಪಂದ್ಯವಾಗಲಿದೆ. ಶಿವಂ ಮಾವಿ ತೊಡೆಸಂದು ಗಾಯದಿಂದ ಬಳಲುತ್ತಿದ್ದ ಕಾರಣ ಅಂಬ್ರಿಶ್, 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ.

4 / 5
ಅಂಬ್ರಿಶ್, ಕೂಚ್ ಬೆಹಾರ್ ಟ್ರೋಫಿಯಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅಂಬ್ರಿಶ್ ನಾಯಕತ್ವದಲ್ಲಿ, ತಮಿಳುನಾಡು 33 ವರ್ಷಗಳ ನಂತರ ಕೂಚ್ ಬೆಹಾರ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದೀಗ ಸನ್​ರೈಸರ್ಸ್​ ತಂಡವನ್ನು ಸೇರಿಕೊಂಡಿರುವ ಅಂಬ್ರಿಶ್​ಗೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುತ್ತದ ಎಂಬುದನ್ನು ಕಾದುನೋಡಬೇಕಿದೆ.

5 / 5
Follow Us
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್

ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್

RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ

ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ

ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ

ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ

ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು

‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ

ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ