AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆ ಅನುಮೋದನೆ; ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅಸ್ತು!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 15 ಸಾವಿರ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ ನಿಯಮ-2026ಕ್ಕೆ ಘಟನೋತ್ತರ ಅನುಮೋದನೆ ದೊರೆತಿದ್ದು, ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆ ಅನುಮೋದನೆ; ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅಸ್ತು!
15 ಸಾವಿರ ಶಿಕ್ಷಕರ ನೇಮಕಾತಿ
ಅಕ್ಷತಾ ವರ್ಕಾಡಿ
|

Updated on:Jul 21, 2026 | 3:23 PM

Share

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರವಿವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ಹಂಚಿಕೊಂಡರು.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ ನಿಯಮ-2026ರ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದ್ದು, ಅದರಂತೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಅವರು ಪ್ರಕಟಿಸಿದರು.

ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು:

  • ಬೆಂಗಳೂರಿನ ಲೋಕಭವನ ಆವರಣದಲ್ಲಿ ರಾಜ್ಯಪಾಲರ ಆಡಳಿತ ಕಚೇರಿ, ವಿಶೇಷ ಕಾರ್ಯದರ್ಶಿಗಳ ವಸತಿ ಗೃಹ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗಳಿಗೆ 27 ಕೋಟಿ ವೆಚ್ಚದ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ
  • ಅಲೆಮಾರಿ ಮತ್ತು ಅರೆ ಅಲೆಮಾರಿ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 10 ಲಕ್ಷ ರೂ. ಘಟಕ ವೆಚ್ಚದಲ್ಲಿ 380 ಚದರ ಅಡಿಗಳ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿಕೊಡಲಾಗುವುದು.
  • ರಾಯಚೂರಿನಲ್ಲಿರುವ ರಾಯಚೂರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಡಿ (IIIT) ಎಐ (AI) ಶ್ರೇಷ್ಠತಾ ಕೇಂದ್ರವನ್ನು 5 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಒಟ್ಟು 12 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
  • ಬೆಂಗಳೂರಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ (MBBS) ಮತ್ತು ಬಿಡಿಎಸ್ (BDS) ವಿದ್ಯಾರ್ಥಿಗಳಿಗೆ ಬಾಲಕರ ವಸತಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 83.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ.
  • 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ SH-156 ಹಾಗೂ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.
  • ಕಪಿಲಾ ನದಿಗೆ ನಂಜನಗೂಡು ನಗರ ವ್ಯಾಪ್ತಿಯ ಮಲಿನ ನೀರು ಸೇರದಂತೆ ಹಾಗೂ ಪ್ರವಾಹವನ್ನು ತಡೆಯಲು 70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿ ನೀರಾವರಿ ಜಲಮಂಡಳಿಯ 116 ಕೆರೆಗಳು ಹಾಗೂ ಗಾಯತ್ರಿ ಜಲಾಶಯದ ಕುಡಿಯುವ ನೀರು ತುಂಬಿಸುವ ಮತ್ತು ಅಂತರ್ಜಲ ಅಭಿವೃದ್ಧಿಪಡಿಸುವ 244 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರನ್ನು ಅಮಾನತಿನಲ್ಲಿರಿಸಿರುವ ರಾಜ್ಯಪಾಲರ ಆದೇಶವನ್ನು ಸಂಪುಟ ಸಭೆಯು ಅನುಮೋದಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:22 pm, Tue, 21 July 26

Follow Us
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು