- TV9 Kannada Photo gallery Cricket photos KS Bharat Retires From India, Eyes UAE Cricket: New International Journey Begins
32ನೇ ವಯಸ್ಸಿಗೆ ನಿವೃತ್ತಿ; ಯುಎಇ ಪರ ಕಣಕ್ಕಿಳಿಯಲಿರುವ ಭಾರತದ ಕ್ರಿಕೆಟಿಗ
KS Bharat's Shocking Move: ಕೆ.ಎಸ್. ಭರತ್ ಟೀಂ ಇಂಡಿಯಾದಿಂದ ನಿವೃತ್ತಿ ಪಡೆದು ಯುಎಇ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಅವಕಾಶ ವಂಚಿತರಾದ 32ರ ಹರೆಯದ ಭರತ್ ದುಬೈಗೆ ತೆರಳಿದ್ದಾರೆ. ಆದರೆ ಯುಎಇ ಪರ ಆಡಲು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಯ ನಿಯಮವಿದೆ. 2027ರ ನಂತರವಷ್ಟೇ ಭರತ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯ. ಇದು ಅವರ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆಗಿದೆ.
Updated on: Jun 20, 2026 | 4:55 PM

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಐಪಿಎಲ್‌ನಲ್ಲಿ ಆರ್ಸಿಬಿ ಪರ ಆಡಿದ್ದ ಭರತ್, ಕೇವಲ 32 ವರ್ಷ ವಯಸ್ಸಿನಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೀಂ ಇಂಡಿಯಾದಲ್ಲಿ ಅವಕಾಶಗಳು ಸಿಗದ ಹಿನ್ನಲೆಯಲ್ಲಿ ಭರತ್ ವಿದಾಯ ಹೇಳಿದ್ದರು.

ಆದರೀಗ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೊರಟಿರುವ ಭರತ್, ದೇಶವನ್ನು ತೊರೆದಿದ್ದು ಬೇರೆ ದೇಶದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಭರತ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು, ಯುಎಇ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಸ್ಥಳೀಯ ಪಂದ್ಯಾವಳಿಯಲ್ಲಿ ಮೊದಲಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಭರತ್ ಅವರನ್ನು ಸ್ಟಾಲಿಯನ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಎರಡು ದಿನಗಳ ವೈಟ್ ಬಾಲ್ ಟೂರ್ನಿಯಲ್ಲಿ 7 ಪಂದ್ಯಗಳು ನಡೆಯಲಿದ್ದು, 4 ತಂಡಗಳು ಸೆಣಸಾಡಲಿವೆ. ದುಬೈನಲ್ಲಿರುವ ಐಸಿಸಿ ಅಕಾಡೆಮಿ ಓವಲ್ 1ರಲ್ಲಿ ಈ ಪಂದ್ಯಾವಳಿ ಜೂನ್ 19 ರಿಂದ ಆರಂಭವಾಗಿದೆ.

ಆದಾಗ್ಯೂ ಭರತ್ಗೆ ಯುಎಇ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ನಿಯಮಗಳ ಪ್ರಕಾರ, ಪೂರ್ಣ ಸದಸ್ಯ ರಾಷ್ಟ್ರದಿಂದ ಅಸೋಸಿಯೇಟ್ ರಾಷ್ಟ್ರಕ್ಕೆ ಸ್ಥಳಾಂತರಗೊಳ್ಳಲು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿ ಇದೆ. ಭರತ್ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ 2024 ರಲ್ಲಿ ಆಡಿದ್ದರು. ಅಂದರೆ ಅವರು 2027 ರ ನಂತರ ಮಾತ್ರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ.

ಕೆ.ಎಸ್. ಭರತ್ ಭಾರತದ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 20.09 ಸರಾಸರಿಯಲ್ಲಿ 221 ರನ್ ಕಲೆಹಾಕಿದ್ದರು. ಈ 7 ಪಂದ್ಯಗಳಲ್ಲಿ ಭರತ್ಗೆ ಒಂದೇ ಒಂದು ಅರ್ಧಶತಕ ಅಥವಾ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 44 ರನ್ ಆಗಿದೆ. ವಿಕೆಟ್ ಕೀಪಿಂಗ್ನಲ್ಲಿ 18 ಕ್ಯಾಚ್‌ಗಳನ್ನು ತೆಗೆದುಕೊಂಡಿರುವ ಭರತ್ ಒಂದು ಸ್ಟಂಪಿಂಗ್ ಸಹ ಮಾಡಿದ್ದರು.




