ICC World Cup 2023: ಏಕದಿನ ವಿಶ್ವಕಪ್ನಿಂದ 8 ಆಟಗಾರರು ಔಟ್
ICC ODI World Cup 2023: ಈ ಆಟಗಾರರು ವಿಶ್ವಕಪ್ನಿಂದ ಹೊರಗುಳಿಯಲು ಮುಖ್ಯ ಕಾರಣ ಗಾಯದ ಸಮಸ್ಯೆ. ಅಂದರೆ ವರ್ಲ್ಡ್ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಈ ಆಟಗಾರರು ಆ ಬಳಿಕ ಫಿಟ್ನೆಸ್ ಕಾರಣದಿಂದಾಗಿ ಹೊರಬಿದ್ದಿದ್ದಾರೆ. ಹೀಗೆ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ 8 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
Updated on: Oct 02, 2023 | 9:23 PM

ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿರುವ ಈ ಬಾರಿಯ ವಿಶ್ವಕಪ್ನಿಂದ ಒಟ್ಟು 8 ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ.

ಈ ಆಟಗಾರರು ವಿಶ್ವಕಪ್ನಿಂದ ಹೊರಗುಳಿಯಲು ಮುಖ್ಯ ಕಾರಣ ಗಾಯದ ಸಮಸ್ಯೆ. ಅಂದರೆ ವರ್ಲ್ಡ್ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಈ ಆಟಗಾರರು ಆ ಬಳಿಕ ಫಿಟ್ನೆಸ್ ಕಾರಣದಿಂದಾಗಿ ಹೊರಬಿದ್ದಿದ್ದಾರೆ. ಹೀಗೆ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ 8 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1- ಅನ್ರಿಕ್ ನೋಕಿಯಾ: ಸೌತ್ ಆಫ್ರಿಕಾ ತಂಡದ ಬಲಗೈ ವೇಗಿ ಅನ್ರಿಕ್ ನೋಕಿಯಾ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಬೆನ್ನು ನೋವಿನ ಸಮಸ್ಯೆಯ ಕಾರಣ ಇದೀಗ ವರ್ಲ್ಡಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

2- ಆಷ್ಟನ್ ಅಗರ್: ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಷ್ಟನ್ ಅಗರ್ ಈ ಬಾರಿಯ ವಿಶ್ವಕಪ್ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಎಡಗೈ ಬೆರಳಿನ ಗಾಯದ ಕಾರಣ ಇದೀಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.

3- ವನಿಂದು ಹಸರಂಗ: ಶ್ರೀಲಂಕಾದ ತಂಡದ ಪ್ರಮುಖ ಆಲ್ರೌಂಡರ್ ವನಿಂದು ಹಸರಂಗ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

4- ಸಿಸಂದಾ ಮಗಲಾ: ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸೌತ್ ಆಫ್ರಿಕಾ ತಂಡದ ವೇಗಿ ಸಿಸಂದಾ ಮಗಲಾ ಅವರ ಮೊಣಕಾಲಿಗೆ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ.

5- ಇಬಾದತ್ ಹೊಸೈನ್: ಬಾಂಗ್ಲಾದೇಶ್ ತಂಡದ ಪ್ರಮುಖ ಬೌಲರ್ ಇಬಾದತ್ ಹೊಸೈನ್ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಇಬಾದತ್ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

6- ದುಷ್ಮಂತ ಚಮೀರಾ: ಶ್ರೀಲಂಕಾ ತಂಡದ ಬಲಗೈ ವೇಗಿ ದುಷ್ಮಂತ ಚಮೀರಾ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ನಿಂದ ಚಮೀರಾ ಕೂಡ ಹೊರಗುಳಿದಿದ್ದಾರೆ.

7- ನಸೀಮ್ ಶಾ: ಪಾಕಿಸ್ತಾನ್ ತಂಡದ ಯುವ ವೇಗಿ ನಸೀಮ್ ಶಾ ಭುಜದ ಗಾಯಕ್ಕೆ ತುತ್ತಾದ ಕಾರಣ ಏಕದಿನ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ.

8- ಅಕ್ಷರ್ ಪಟೇಲ್: ವಿಶ್ವಕಪ್ಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್ ಪಟೇಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಏಷ್ಯಾಕಪ್ ಪಂದ್ಯದ ವೇಳೆ ಅವರ ಎಡ ತೊಡೆ ಭಾಗಕ್ಕೆ ಗಾಯವಾಗಿತ್ತು. ಇದೀಗ ಅವರ ಬದಲಿಗೆ ಅಶ್ವಿನ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

TV9 Kannada
Read More




