AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ನೋ ಫ್ರಾಂಚೈಸಿಗೆ ಮೂರೇ ಪದಗಳಲ್ಲಿ ವಿದಾಯ ಹೇಳಿದ ರಿಷಭ್ ಪಂತ್..!

Rishabh Pant IPL: 2026ರ ಐಪಿಎಲ್ ನಂತರ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಈ ಟ್ರೇಡ್‌ನಲ್ಲಿ ಕುಲ್ದೀಪ್ ಯಾದವ್ ಲಕ್ನೋಗೆ ತೆರಳಿದ್ದಾರೆ. ಪಂತ್ ವೇತನ 27 ಕೋಟಿಯಿಂದ 15 ಕೋಟಿಗೆ ಇಳಿದಿದೆ. ನಾಯಕತ್ವ ರಾಜೀನಾಮೆಗೆ ಫ್ರಾಂಚೈಸಿಯೇ ಒತ್ತಡ ಹೇರಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ಪಂತ್ ಕೇವಲ ಮೂರು ಪದಗಳಲ್ಲಿ ಲಕ್ನೋ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Jun 24, 2026 | 4:25 PM

Share
2026 ರ ಐಪಿಎಲ್ ಮುಗಿದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ರಿಷಭ್ ಪಂತ್ ಇದೀಗ ತಂಡವನ್ನು ತೊರೆದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಟ್ರೆಡಿಂಗ್ ನಡೆದಿದ್ದು, ಪಂತ್​ರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿರುವ ಡೆಲ್ಲಿ ತಂಡ, ಕುಲ್ದೀಪ್ ಯಾದವ್ ಅವರನ್ನು ಲಕ್ನೋ ತಂಡಕ್ಕೆ ಕಳುಹಿಸಿಕೊಟ್ಟಿದೆ (PC-PTI).

1 / 5
ಲಕ್ನೋ ತಂಡದಲ್ಲಿ ದಾಖಲೆಯ 27 ಕೋಟಿ ರೂ. ವೇತನ ಪಡೆಯುತ್ತಿದ್ದ ಪಂತ್, ಇದೀಗ ಬರೋಬ್ಬರಿ 12 ಕೋಟಿ ರೂ. ಖಡಿತದೊಂದಿಗೆ ಅಂದರೆ ಕೇವಲ 15 ಕೋಟಿ ರೂ.ಗೆ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಇತ್ತ ಕುಲ್ದೀಪ್ ಯಾದವ್ ಪ್ರಸ್ತುತ ಪಡೆಯುತ್ತಿದ್ದ ವೇತನದೊಂದಿಗೆ ಅಂದರೆ 13.50 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು ಕೂಡಿಕೊಂಡಿದ್ದಾರೆ (PC-PTI).

2 / 5
ಪಂತ್ ಲಕ್ನೋ ತಂಡದ ನಾಯಕತ್ವವನ್ನು ತೊರೆದಾಗ ಇದು ಪಂತ್ ಅವರ ಸ್ವಯಂ ನಿರ್ಧಾರ ಎಂದು ಫ್ರಾಂಚೈಸಿ ಹೇಳಿತ್ತು. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಫ್ರಾಂಚೈಸಿಯೇ ಒತ್ತಡ ಹೇರಿ ರಿಷಭ್ ಪಂತ್ ಅವರಿಂದ ಬಲವಂತವಾಗಿ ನಾಯಕತ್ವಕ್ಕೆ ರಾಜೀನಾಮೆ ಕೊಡಿಸಲಾಗಿದೆ ಎನ್ನಲಾಗುತ್ತಿದೆ (PC-PTI).

3 / 5
ಇನ್ನು ಎರಡು ಆವೃತ್ತಿಗಳಲ್ಲಿ ಲಕ್ನೋ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ರಿಷಭ್ ಪಂತ್, ತಂಡದಿಂದ ಹೊರಬಿದ್ದ ಬಳಿಕ ಕೇವಲ ಮೂರೇ ಮೂರು ಪದಗಳಲ್ಲಿ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಪಂತ್ ಅವರನ್ನು ಬೀಳ್ಕೊಟ್ಟ ಬಗ್ಗೆ ಲಕ್ನೋ ಪೋಸ್ಟ್​​ವೊಂದನ್ನು ಹಂಚಿಕೊಂಡಿತ್ತು. ಆ ಪೋಸ್ಟ್​ ಅನ್ನು ರೀಪೋಸ್ಟ್ ಮಾಡಿರುವ ಪಂತ್, ‘ಥ್ಯಾಂಕ್ಯೂ ಟೀಮ್’ ಎಂದು ಬರೆದುಕೊಂಡಿದ್ದಾರೆ (PC-PTI).

4 / 5
ಐಪಿಎಲ್‌ನ ಕಳೆದ ಎರಡು ಆವೃತ್ತಿಗಳಲ್ಲಿ ರಿಷಭ್ ಪಂತ್ ಲಕ್ನೋ ತಂಡ ಪರ ಒಟ್ಟು 28 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 1 ಶತಕ ಮತ್ತು 1 ಅರ್ಧಶತಕ ಸೇರಿದಂತೆ ಒಟ್ಟು 581 ರನ್ ಕಲೆಹಾಕಿದ್ದಾರೆ. ಇನ್ನು ಡೆಲ್ಲಿ ಪರ ಈ ಹಿಂದೆ 2016 ರಿಂದ 2024 ರ ನಡುವೆ ಒಂಬತ್ತು ಆವೃತ್ತಿಗಳನ್ನಾಡಿದ್ದ ಪಂತ್ ಒಟ್ಟು 111 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 43 ಪಂದ್ಯಗಳಲ್ಲಿ ಡೆಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು (PC-PTI).

5 / 5
Follow Us