AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA20: ಕೇವಲ 81 ರನ್​ಗಳಿಗೆ ಆಲೌಟಾದ CSK ಒಡೆತನದ JSK ತಂಡ

Joburg Super Kings: ಕೆಳ ಕ್ರಮಾಂಕದಲ್ಲಿ ಅಲ್ಝಾರಿ ಜೋಸೆಫ್ (13) ಹಾಗೂ ವಿಲಿಯಮ್ಸ್ ಅಜೇಯ 17 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.

TV9 Web
| Updated By: ಝಾಹಿರ್ ಯೂಸುಫ್|

Updated on:Jan 14, 2023 | 9:27 PM

Share
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA ಟಿ20 ಲೀಗ್​ನ 4ನೇ ಪಂದ್ಯದಲ್ಲಿ ಜೋಬರ್ಗ್​ ಸೂಪರ್ ಕಿಂಗ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಪರ್ಲ್​​ ರಾಯಲ್ಸ್​ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ಕಿಂಗ್ಸ್​ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 5
ಅದರಂತೆ ಇನಿಂಗ್ಸ್ ಆರಂಭಿಸಿದ್ದ ಜೋಬರ್ಗ್​ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 3ನೇ ಓವರ್​ ವೇಳೆಗೆ ಆರಂಭಿಕರಾದ ರೀಜಾ ಹೆಂಡ್ರಿಕ್ಸ್ (4) ಹಾಗೂ ಜಾನ್ನೆಮನ್ ಮಲಾನ್ (2) ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಡುಪ್ಲೆಸಿಸ್ ಕೂಡ 2 ರನ್​ಗಳಿಸಿ ಔಟಾಗಿದ್ದರು.

2 / 5
ಇನ್ನು ರೊಮಾರಿಯೊ ಶೆಫರ್ಡ್​ 7 ರನ್​ಗಳಿಸಿದರೆ, ಜಾರ್ಜ್ ಗಾರ್ಟನ್ 3 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಅತ್ತ ಕೇವಲ 36 ರನ್​ಗಳಿಗೆ 7 ವಿಕೆಟ್​ ಉರುಳಿಸಿ ಪರ್ಲ್ ರಾಯಲ್ಸ್ ಬೌಲರ್​ಗಳು ಪಾರುಪತ್ಯ ಮೆರೆದರು.

3 / 5
ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಅಲ್ಝಾರಿ ಜೋಸೆಫ್ (13) ಹಾಗೂ ವಿಲಿಯಮ್ಸ್ ಅಜೇಯ 17 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು. ಆದರೆ ರಾಯಲ್ಸ್​ ಬೌಲರ್​ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 17.2 ಓವರ್​ಗಳಲ್ಲಿ ಕೇವಲ 81 ರನ್​ಗಳಿಸಿ ಆಲೌಟ್ ಆಯಿತು.

4 / 5
ಇನ್ನು ಈ ಸುಲಭ ಗುರಿಯನ್ನು ಬೆನ್ನತ್ತಿದ ಡೇವಿಡ್ ಮಿಲ್ಲರ್ ನಾಯಕತ್ವದ ಪರ್ಲ್ ರಾಯಲ್ಸ್ ತಂಡವು 3 ವಿಕೆಟ್ ನಷ್ಟಕ್ಕೆ 10.3 ಓವರ್​ಗಳಲ್ಲಿ ಗುರಿಮುಟ್ಟಿತು. ಈ ಮೂಲಕ ಪರ್ಲ್ ರಾಯಲ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಅಪಖ್ಯಾತಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೋಬರ್ಗ್​ ಸೂಪರ್ ಕಿಂಗ್ಸ್​ ಪಾಲಾಗಿದೆ.

5 / 5

Published On - 9:25 pm, Sat, 14 January 23

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ