AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀನಾಯ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಗೋಯೆಂಕಾ ಮಾತುಕತೆ..!

IPL 2026 LSG: ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್-19ರ ಮೊದಲಾರ್ಧದಲ್ಲಿ 7 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಈ ಗೆಲುವುಗಳ ಮೂಲಕ ಪ್ರಸ್ತುತ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅಂದರೆ ಎಲ್​ಎಸ್​ಜಿ ತಂಡವು ಪ್ಲೇಆಫ್​ಗೇರಲು ದ್ವಿತೀಯಾರ್ಧದಲ್ಲಿ ಪ್ರಚಂಡ ಪ್ರದರ್ಶನ ನೀಡಲೇಬೇಕು.

ಝಾಹಿರ್ ಯೂಸುಫ್
|

Updated on: Apr 23, 2026 | 7:51 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 159 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್​ಗಳಲ್ಲಿ 119 ರನ್​ಗಳಿಗೆ ಆಲೌಟ್ ಆಗಿ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

1 / 5
ಈ ಹೀನಾಯ ಸೋಲಿನ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ತಂಡದ ನಾಯಕ ರಿಷಭ್ ಪಂತ್ ಜೊತೆಗೆ ಸೌಹಾರ್ದಯುತ ಮಾತುಕತೆ ನಡೆಸುತ್ತಿರುವುದು ಕಂಡು ಬಂತು.

2 / 5
ಸಾಮಾನ್ಯವಾಗಿ ಸೋಲಿನ ಬೆನ್ನಲ್ಲೇ ಕ್ಲಾಸ್ ತೆಗೆದುಕೊಳ್ಳುವ ಸಂಜೀವ್ ಗೊಯೇಂಕಾ ಈ ಬಾರಿ ಕೂಲ್ ಆಗಿ ಕಾಣಿಸಿಕೊಂಡಿದ್ದು ವಿಶೇಷ. ಅಲ್ಲದೆ ನಗು ಮುಖದೊಂದಿಗೆ ರಿಷಭ್ ಪಂತ್ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿದರು. ಪಂದ್ಯದಲ್ಲಿ ಸೋತಿದ್ದರೂ, ನಾಯಕನ ಹೋರಾಟದ ಗುಣವನ್ನು ಮಾಲೀಕರು ಬೆಂಬಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

3 / 5
ಕಳೆದ ಪಂದ್ಯಗಳಲ್ಲಿ (ವಿಶೇಷವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ನಂತರ) ಗೋಯೆಂಕಾ ಅವರು ಪಂತ್ ಅವರೊಂದಿಗೆ ಗಂಭೀರವಾಗಿ ಚರ್ಚಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದು "ಮಾಲೀಕರು ನಾಯಕನನ್ನು ಬೈಯುತ್ತಿದ್ದಾರೆ" ಎಂಬ ವಿವಾದಕ್ಕೆ ಕಾರಣವಾಗಿತ್ತು. ಆದರೆ, ರಾಜಸ್ಥಾನ್ ವಿರುದ್ಧದ ಪಂದ್ಯದ ನಂತರದ ಈ 'ಸ್ಮೈಲಿಂಗ್ ಚಾಟ್' ಆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ.

4 / 5
ಪಂದ್ಯದ ಬಳಿಕ ಗೋಯೆಂಕಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂತ್ ಜೊತೆಗಿನ ಫೋಟೋ ಹಂಚಿಕೊಂಡಿದ್ದು, "ನನ್ನ ನಾಯಕ ಮತ್ತು ನನ್ನ ತಂಡದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ನಾವು ಮತ್ತಷ್ಟು ಬಲಿಷ್ಠವಾಗಿ ಪುಟಿದೇಳುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್​ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 

5 / 5
Follow Us