AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಸಿಸಿ ಹೊಸ ನಿಯಮ’ದ ಕಾರಣ ಹೊರಗುಳಿದ ರಜತ್ ಪಾಟಿದಾರ್!

IPL 2026 RCB vs PBKS: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 222 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 199 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ ತಂಡ 23 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on:May 18, 2026 | 9:47 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಹಾಗೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಾರಣವೇನು? ಎಂದು ನೋಡುವುದಾದರೆ... ಸಿಗುವ ಉತ್ತರ ಐಸಿಸಿ ನಿಯಮ. (PC: IPL)

1 / 6
ಹೌದು, ರಜತ್ ಪಾಟಿದಾರ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ಮುಖ್ಯ ಕಾರಣ ಐಸಿಸಿ ನಿಯಮ. ಈ ಪಂದ್ಯಕ್ಕೂ ಮುನ್ನ ಅಂದರೆ, ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದಲ್ಲಿ, ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಬೌನ್ಸರ್ ಬಾಲ್ ರಜತ್ ಪಾಟೀದಾರ್ ಅವರ ಹೆಲ್ಮೆಟ್‌ಗೆ ನೇರವಾಗಿ ಬಡಿದಿತ್ತು. (PC: IPL)

2 / 6
ಪಂದ್ಯದ ವೇಳೆ ಆರಂಭಿಕ ವೈದ್ಯಕೀಯ ತಪಾಸಣೆಯಲ್ಲಿ ಅವರು ತೇರ್ಗಡೆಯಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, ಪಂದ್ಯ ಮುಗಿದ ನಂತರ ಅವರಲ್ಲಿ ಮೆದುಳಿನ ಆಘಾತದ (Concussion) ಲಕ್ಷಣಗಳು ಕಾಣಿಸಿಕೊಂಡವು. ಹೀಗಾಗಿ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪಾಟಿದಾರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಪಂದ್ಯದಿಂದ ಹೊರಗಿಟ್ಟಿದ್ದಾರೆ. (PC: IPL)

3 / 6
ಏಕೆಂದರೆ, ಐಸಿಸಿಯ ವೈದ್ಯಕೀಯ ನಿಯಮಗಳ ಪ್ರಕಾರ, ಯಾವುದೇ ಆಟಗಾರನಿಗೆ ಮೆದುಳಿನ ಆಘಾತ (Concussion) ದೃಢಪಟ್ಟರೆ ಅಥವಾ ಅದರ ಲಕ್ಷಣಗಳು ಕಂಡುಬಂದರೆ ಅವರನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಸುವಂತಿಲ್ಲ. ಬದಲಾಗಿ ವಿಶ್ರಾಂತಿ ನೀಡುವುದು ಕಡ್ಡಾಯ. ಒಂದು ವೇಳೆ ಗಂಭೀರ ಲಕ್ಷಣಗಳು ಕಂಡು ಬಂದರೆ ಕಡ್ಡಾಯವಾಗಿ ಕನಿಷ್ಠ 7 ದಿನಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಬೇಕು.  (PC: IPL)

4 / 6
ಆದರೆ ರಜತ್ ಪಾಟಿದಾರ್ ಅವರ ಗಾಯ ಗಂಭೀರವಲ್ಲ. ಇದಾಗ್ಯೂ ಐಸಿಸಿ ನಿಯಮವನ್ನು ಪಾಲಿಸುವ ಸಲುವಾಗಿ ರಜತ್ ಪಾಟಿದಾರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಾಟಿದಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ. (PC: IPL)

5 / 6
ಹೀಗಾಗಿ ಮೇ 22 ರಂದು ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೂಲಕ ರಜತ್ ಪಾಟಿದಾರ್ ಕಂಬ್ಯಾಕ್ ಮಾಡಲಿದ್ದಾರೆ. ಈ ಪಂದ್ಯದೊಂದಿಗೆ ಆರ್​ಸಿಬಿ ತಂಡದ ಲೀಗ್ ಹಂತದ ಮ್ಯಾಚ್​ಗಳು ಮುಗಿಯಲಿದ್ದು, ಇದಾದ ಬಳಿಕ ಚಾಲೆಂಜರ್ಸ್​ ಪಡೆ ಪ್ಲೇಆಫ್​ನಲ್ಲಿ ಕಣಕ್ಕಿಳಿಯಲಿದೆ. (PC: IPL)

6 / 6

Published On - 9:43 am, Mon, 18 May 26

Follow Us
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?

ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ

ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು

ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ

ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ

ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​

ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ