AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡದ ತವರು ಮೈದಾನ ಬದಲಾಗಲು ಇದುವೇ ಕಾರಣ!

IPL 2026 RCB: ಈ ಬಾರಿಯ ಐಪಿಎಲ್​ಗೆ ಆರ್​ಸಿಬಿ ತಂಡವು 2 ತವರು ಮೈದಾನವನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಏಳು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಿದರೆ, 2 ಮ್ಯಾಚ್​ಗಳನ್ನು ಛತ್ತೀಸ್​ಗಢದ ರಾಯ್​ಪುರ್​ನಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ.

ಝಾಹಿರ್ ಯೂಸುಫ್
|

Updated on: May 10, 2026 | 8:51 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆ ಸಿದ್ಧವಾಗಿರುವುದು ದೂರದ ರಾಯ್​ಪುರ್​​ನಲ್ಲಿ. ಅಂದರೆ ಆರ್​ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬದಲು ಛತ್ತೀಸ್‌ಗಢದ ರಾಯ್​ಪುರ್​ನಲ್ಲಿರುವ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಆಡಲು ಸಜ್ಜಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕೆಳಗಿನಂತಿದೆ... (PC: IPL)

1 / 5
ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ ಸಂಭ್ರಮದ ವೇಳೆ ನಡೆದ ಕಾಲ್ತುಳಿತದ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನಿಶ್ಚಿತತೆ ಇತ್ತು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಛತ್ತೀಸ್‌ಗಢ ಸರ್ಕಾರದೊಂದಿಗೆ ರಾಯ್‌ಪುರದಲ್ಲಿ ಪಂದ್ಯಗಳನ್ನು ಆಡಲು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. (PC: IPL)

2 / 5
ಆದರೆ ಇದಾದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿತು. ಅತ್ತ ಅದಾಗಲೇ ಛತ್ತೀಸ್‌ಗಢ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕಾರಣ ಆರ್​ಸಿಬಿ ಮ್ಯಾನೇಜ್ಮೆಂಟ್ ರಾಯ್​ಪುರ್​​ನಲ್ಲಿ 2 ಪಂದ್ಯಗಳನ್ನಾಡಲು ನಿರ್ಧರಿಸಿದೆ. ಅದರಂತೆ ಆರ್​ಸಿಬಿ ತನ್ನ ಎರಡು ತವರು ಪಂದ್ಯಗಳನ್ನು ಶಹೀದ್ ವೀರ್ ನಾರಾಯಣ್ ಸಿಂಗ್​ ಸ್ಟೇಡಿಯಂನಲ್ಲಿ ಆಡಲಿದೆ.  (PC: IPL)

3 / 5
ಆರ್​ಸಿಬಿ ತಂಡವು ತನ್ನ 7 ತವರು ಪಂದ್ಯಗಳಲ್ಲಿ ಈಗಾಗಲೇ ಬೆಂಗಳೂರಿನಲ್ಲಿ 5 ಮ್ಯಾಚ್​ಗಳನ್ನಾಡಿದೆ.  ಇನ್ನುಳಿದಿರುವ ಎರಡು ತವರು ಪಂದ್ಯಗಳನ್ನು ರಾಯ್​ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಗಳು ಮೇ 10 ಮತ್ತು ಮೇ 13 ರಂದು ನಡೆಯಲಿದೆ. (PC: IPL)

4 / 5
ಮೇ 10 ರಂದು ರಾಯಲ್​ಪುರ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮೇ 13 ರಂದು ಇದೇ ಮೈದಾನದಲ್ಲಿ ಆರ್​ಸಿಬಿ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂವನ್ನು ಎದುರಿಸಲಿದೆ. ಈ ಪಂದ್ಯದೊಂದಿಗೆ ಆರ್​ಸಿಬಿ ತಂಡದ ತವರು ಮ್ಯಾಚ್​ಗಳು ಮುಗಿಯಲಿದೆ. (PC: IPL)

5 / 5
Follow Us