‘ದೃಶ್ಯಂ 2’ನಿಂದ ದೊಡ್ಡ ಗೆಲುವು ಕಂಡ ಅಜಯ್ ದೇವಗನ್; ಇಲ್ಲಿವೆ ಅವರ ಟಾಪ್ 5 ಚಿತ್ರಗಳು
‘ಸಿಂಗಂ ರಿಟರ್ನ್’ ಸಿನಿಮಾ ಕೂಡ ಗೆದ್ದಿತ್ತು. ಸೋನಾಕ್ಷಿ ಜತೆ ನಟಿಸಿದ ಅಜಯ್ ದೇವಗನ್ ಅವರು 140 ಕೋಟಿ ರೂಪಾಯಿ ಬಾಚಿದ್ದರು. ಈ ಚಿತ್ರ ಐದನೇ ಸ್ಥಾನದಲ್ಲಿದೆ.
Updated on: Nov 29, 2022 | 6:30 AM

ಅಜಯ್ ದೇವಗನ್ ಅವರು ಬಾಲಿವುಡ್ನ ಬೇಡಿಕೆಯ ನಟರಲ್ಲಿ ಒಬ್ಬರು. ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ‘ದೃಶ್ಯಂ 2’ ಚಿತ್ರದಿಂದ ಅವರು ಮತ್ತೆ ಗೆಲುವು ಕಂಡಿದ್ದಾರೆ.

ಓಂ ರಾವತ್ ನಿರ್ದೇಶನದ ‘ತಾನಾಜಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 279 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಜಯ್ ನಟನೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ.

‘ಗೋಲ್ ಮಾಲ್ ಅಗೇನ್’ ಸಿನಿಮಾ 205 ಕೋಟಿ ರೂಪಾಯಿ ಬಾಚಿಕೊಂಡಿದೆ. ಪಕ್ಕಾ ಕಾಮಿಡಿ ಶೈಲಿಯ ಈ ಸಿನಿಮಾ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ.

‘ಟೋಟಲ್ ಧಮಾಲ್’ ಸಿನಿಮಾ 154 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾದಿಂದ ಅಜಯ್ ದೇವಗನ್ ಗೆದ್ದು ಬೀಗಿದ್ದರು. ಇದು ಅಜಯ್ ದೇವಗನ್ರ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾ.