ಕ್ರಿಕೆಟ್​ ದೇವರಿಗೆ ಕೊರೊನಾ ಸೋಂಕು.. ಸಚಿನ್​ಗೂ ಮುನ್ನ ಈ ಕ್ರಿಕೆಟಿಗ ಕೊರೊನಾದಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯ್ತು?

ಭಾರತದ ಮಾಜಿ ಕ್ರಿಕೆಟಿಗ ಮತ್ತು ಯುಪಿ ಸರ್ಕಾರದ ಮಂತ್ರಿಯಾಗಿದ್ದ ಚೇತನ್ ಚೌಹಾನ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು.

  • TV9 Web Team
  • Published On - 15:56 PM, 27 Mar 2021
1/6
ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಶನಿವಾರ ಟ್ವೀಟ್ ಮಾಡಿದ್ದು, ಕೊರೊನಾ ಸೋಂಕು ತಗುಲಿರುವ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ತಮ್ಮನ್ನು ತಾವು ಕ್ವಾರಂಟೈನ್​ ಮಾಡಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮುಂಚೆಯೇ ಈ ಸಾಂಕ್ರಾಮಿಕ ರೋಗದಿಂದ ಅನೇಕ ಆಟಗಾರರು ನರಳಿದ್ದಾರೆ.
2/6
ಭಾರತದ ಮಾಜಿ ಕ್ರಿಕೆಟಿಗ ಮತ್ತು ಯುಪಿ ಸರ್ಕಾರದ ಮಂತ್ರಿಯಾಗಿದ್ದ ಚೇತನ್ ಚೌಹಾನ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚೇತನ್ ಚೌಹಾನ್ ಸೋಂಕಿನಿಂದ ಸಾವನ್ನಪ್ಪಿದರು.
3/6
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ದುಬೈಗೆ ಆಗಮಿಸಿದ ವೇಳೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ 28 ವರ್ಷದ ದೀಪಕ್ ಚಹರ್ ಮತ್ತು ಇನ್ನೊಬ್ಬ ಕ್ರಿಕೆಟಿಗ ಧನಾತ್ಮಕವಾಗಿ ಕಂಡುಬಂದಿದ್ದರು. ಚಹರ್ 14 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿದ್ದರು ಮತ್ತು ವರದಿ ಋಣಾತ್ಮಕವಾದಾಗ ಅವರು ತಂಡಕ್ಕೆ ಮರಳಿದರು.
4/6
ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಫೋಗಾಟ್‌ಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡುವ ಮುನ್ನ ಅವರ ಕೊರೊನಾ ವರದಿಯು ಸಕಾರಾತ್ಮಕವಾಗಿತ್ತು.
5/6
ಶಾಹಿದ್ ಅಫ್ರಿದಿ ಅವರಿಗೆ ಕಳೆದ ವರ್ಷ ಜೂನ್‌ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಪಾಕಿಸ್ತಾನದ ತಂಡದ ಮಾಜಿ ನಾಯಕ ಕೊರೊನಾ ಸಂಕಷ್ಟದ ಕಾಲದಲ್ಲಿ ಅನೇಕ ಜನರಿಗೆ ಸಹಾಯ ಮಾಡಲು ಆರಂಭಿಸಿದ್ದರು. ಈ ವೇಳೆಯಲ್ಲಿ ಅಫ್ರಿದಿ ಅವರಿಗೂ ಸೋಂಕು ತಗುಲಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರು ಗುಣಮುಖರಾದರು.
6/6
ಈ ವರ್ಷದ ಆರಂಭದಲ್ಲಿ, ಪಾಕಿಸ್ತಾನದ ಮಾಜಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸನಾ ಮಿರ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಯಾವುದೇ ತೊಂದರೆ ಇಲ್ಲದೆ ಅವರು ಸಹ ಸೋಂಕಿನಿಂದ ಬೇಗನೆ ಗುಣಮುಖರಾದರು.