- Kannada News Photo gallery Gummadi Narsaiah Biopic Muhurtha Take Place Shivarajkumar And Geetha Present
ಶಿವರಾಜ್ಕುಮಾರ್ ಮೊದಲ ತೆಲುಗು ಸಿನಿಮಾಗೆ ಮುಹೂರ್ತ; ಟಾಲಿವುಡ್ನಲ್ಲಿ ಮಿಂಚಲು ಶಿವಣ್ಣ ರೆಡಿ
ಶಿವರಾಜ್ಕುಮಾರ್ ಅವರು ಇಷ್ಟು ದಿನ ಕನ್ನಡದಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರು ಕನ್ನಡದಲ್ಲಿ ಮಾತ್ರ ನಟಿಸುತ್ತಿದ್ದರು. ಆದರೆ, ಇತ್ತೀಚೆಗೆ ಪರಭಾಷೆಯ ಆಫರ್ಗಳು ಅವರನ್ನು ಅರಸಿ ಬರುತ್ತಿವೆ. ಅದನ್ನು ಯಾಕೆ ಮಾಡಬಾರದು ಎಂಬ ಕಾರಣಕ್ಕೆ ಶಿವಣ್ಣ ಪರಭಾಷೆ ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಹೊಸ ಚಿತ್ರದ ಮುಹೂರ್ತ ನಡೆದಿದೆ.
Updated on:Dec 06, 2025 | 12:57 PM

ಶಿವರಾಜ್ಕುಮಾರ್ ಅವರು ಈಗ ತೆಲುಗಿನಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಲು ರೆಡಿ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು (ಡಿಸೆಂಬರ್ 6) ನಡೆದಿದೆ.

ಗುಮ್ಮಡಿ ನರಸಯ್ಯ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರುವುದು ಅಭಿಮಾನಿಗಳಿಗೆ ಖಷಿ ನೀಡಿದೆ. ನರಸಯ್ಯ ಹುಟ್ಟೂರಾದ ಆಂಧ್ರದ ಪಲ್ವಂಚಾದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಶಿವಣ್ಣ ದಂಪತಿಯನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ಅಲ್ಲಿ ಜಮಾಯಿಸಿತ್ತು ಎಂಬುದು ವಿಶೇಷ. ಇದು ಮುಹೂರ್ತದ ಫೋಟೋ.

ಶಿವರಾಜ್ಕುಮಾರ್ ಅವರ ಸಿನಿಮಾಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. ಈ ಸಿನಿಮಾದ ಶೂಟ್ ಶೀಘ್ರವೇ ಆರಂಭ ಆಗಲಿದೆ. ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಮೊದಲ ತೆಲುಗು ಸಿನಿಮಾ ಇದಾಗಿದೆ.

ಶಿವರಾಜ್ಕುಮಾರ್ ಅವರ ಸಿನಿಮಾಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. ಈ ಸಿನಿಮಾದ ಶೂಟ್ ಶೀಘ್ರವೇ ಆರಂಭ ಆಗಲಿದೆ. ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಮೊದಲ ತೆಲುಗು ಸಿನಿಮಾ ಇದಾಗಿದೆ.

ಗುಮ್ಮಡಿ ನರಸಯ್ಯ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿ ಮನ ಸೆಳೆದಿತ್ತು.
Published On - 12:57 pm, Sat, 6 December 25




