- Kannada News Photo gallery Hridayam movie actress Kalyani Priyadarshan completes 5 years in Film Industry
Kalyani Priyadarshan: ಚಿತ್ರರಂಗದಲ್ಲಿ 5 ವರ್ಷ ಪೂರೈಸಿದ ‘ಹೃದಯಂ’ ಸಿನಿಮಾ ನಟಿ ಕಲ್ಯಾಣಿ ಪ್ರಿಯದರ್ಶನ್
Kalyani Priyadarshan Photos: ಬಹುಭಾಷೆಯಲ್ಲಿ ನಟಿ ಕಲ್ಯಾಣಿ ಪ್ರಿಯದರ್ಶನ್ ಫೇಮಸ್ ಆಗಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ.
Updated on:Dec 23, 2022 | 8:44 PM

ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಪೂರೈಸಿದ್ದಾರೆ. ಆ ಖುಷಿಯಲ್ಲಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

2017ರಲ್ಲಿ ತೆಲುಗಿನ ‘ಹೆಲೋ’ ಚಿತ್ರದ ಮೂಲಕ ಕಲ್ಯಾಣಿ ಪ್ರಿಯದರ್ಶನ್ ಅವರು ಬಣ್ಣದ ಲೋಕದಲ್ಲಿ ಜರ್ನಿ ಆರಂಭಿಸಿದರು. ಈ 5 ವರ್ಷಗಳಲ್ಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

ಬಹುಭಾಷೆಯಲ್ಲಿ ಕಲ್ಯಾಣಿ ಪ್ರಿಯದರ್ಶನ್ ಫೇಮಸ್ ಆಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

‘ಮಾನಾಡು’, ‘ಮರಕ್ಕರ್’, ‘ಹೃದಯಂ’, ‘ತಲ್ಲುಮಾಲಾ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಅವರು ಬಾಚಿಕೊಂಡಿದ್ದಾರೆ.

‘ಸೈಮಾ’, ‘ಫಿಲ್ಮ್ಫೇರ್’ ಮುಂತಾದ ಪ್ರಶಸ್ತಿಗಳನ್ನು ಕಲ್ಯಾಣಿ ಪ್ರಿಯದರ್ಶನ್ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 37 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚಿತ್ತಿದೆ.
Published On - 4:09 pm, Fri, 23 December 22




