ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿವೆ ಬಂಪರ್ ಸಿನಿಮಾಗಳು: ಪಟ್ಟಿ ಇಲ್ಲಿದೆ
Upcoming movies: ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಅದೇ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡುತ್ತಿದ್ದರು. ಆದರೆ ಐಪಿಎಲ್ನಿಂದಲೇ ಏನೋ ಈಗ ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಸಿನಿಮಾಗಳು ಬಿಡುಗಡೆಯೇ ಆಗುವುದಿಲ್ಲ. ಆದರೆ ಡಿಸೆಂಬರ್, ಜನವರಿಯಲ್ಲಿ ಸಾಲು-ಸಾಲಾಗಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಈ ಬಾರಿ ಡಿಸೆಂಬರ್ ತಿಂಗಳಲ್ಲಂತೂ ಚಿತ್ರಮಂದಿರಗಳಲ್ಲಿ ಹಬ್ಬವೇ ನಡೆಯಲಿದೆ.
Updated on: Dec 06, 2025 | 8:31 PM

ಕನ್ನಡದಲ್ಲಿ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಮೊದಲಿಗೆ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಲಿರುವ ‘45’ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಸಹ ಇದೇ ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಡಿಸೆಂಬರ್ 7ಕ್ಕೆ ಬಿಡುಗಡೆ ಆಗಲಿದೆ.

ದರ್ಶನ್ ಜೈಲಿನಲ್ಲಿದ್ದರೂ ಸಹ ಅವರ ನಟನೆಯ ‘ಡೆವಿಲ್’ ಸಿನಿಮಾ ಇದೇ ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಡಿಸೆಂಬರ್ 11 ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ.

‘ಡ್ಯೂಡ್‘, ‘ಲವ್ ಟುಡೆ’, ‘ಡ್ರ್ಯಾಗನ್’ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಸೂಪರ್ ಹಿಟ್ ನೀಡಿರುವ ಪ್ರದೀಪ್ ರಂಗನಾಥನ್ ನಟನೆಯ ‘ಲವ್ ಇನ್ಶುರೆನ್ಸ್ ಕಂಪೆನಿ’ ಸಿನಿಮಾ ಸಹ ಇದೇ ತಿಂಗಳು ಡಿಸೆಂಬರ್ 18ಕ್ಕೆ ತೆರೆಗೆ ಬರುತ್ತಿವೆ. ಇದರ ಜೊತೆಗೆ ಇನ್ನೂ ಕೆಲ ಸಿನಿಮಾಗಳು ಈ ತಿಂಗಳು ಬಿಡುಗಡೆ ಆಗಲಿದೆ.

ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾ ನಿನ್ನೆಯೇ (ಡಿಸೆಂಬರ್ 05) ಆದರೆ ಬಿಡುಗಡೆ ರದ್ದಾಗಿದ್ದು, ಇದೇ ತಿಂಗಳ ಅಂತ್ಯದಲ್ಲಿ ಅಂದರೆ ಕ್ರಿಸ್ಮಸ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ವಿಶ್ವದ ಅತ್ಯಂತ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿರುವ ‘ಅವತಾರ್’ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಇದೇ ಡಿಸೆಂಬರ್ 19ರಂದು ಬಿಡುಗಡೆ ಆಗಲಿದೆ.

ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ಹಾಗೂ ಇತರರು ನಟಿಸಿರುವ ‘ತೂ ಮೇರಿ ಮೇ ತೆರಾ, ಮೇ ತೇರಿ, ತೂ ಮೇರ’ ಸಿನಿಮಾ ಸಹ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.




