- Kannada News Photo gallery Kushboo Sundar Daughter Avantika Sundar Shares Bold Photos Fans commented vulgarly
Avantika Sundar: ಖುಷ್ಬೂ ಸುಂದರ್ ಮಗಳ ಬಗ್ಗೆ ಅಶ್ಲೀಲ ಕಮೆಂಟ್; ಬಟ್ಟೆ ಬಗ್ಗೆ ಕೆಟ್ಟದಾಗಿ ಮಾತನಾಡಿದ ನೆಟ್ಟಿಗರು
ಖುಷ್ಬೂ ಸುಂದರ್ ಅವರ ಮಗಳ ಹೆಸರು ಅವಂತಿಕಾ ಸುಂದರ್. ಅವರು ಸಿನಿಮಾ ರಂಗದಲ್ಲಿ ಸದ್ಯಕ್ಕಂತೂ ಗುರುತಿಸಿಕೊಂಡಿಲ್ಲ.
Updated on: May 02, 2023 | 10:45 AM

ನಟಿ ಖುಷ್ಬೂ ಸುಂದರ್ ಅವರು ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಈಗ ಖುಷ್ಬೂ ಸುಂದರ್ ಅವರ ಮಗಳು ಚರ್ಚೆಯಲ್ಲಿದ್ದಾರೆ. ಅವರು ಹಾಕಿದ ಫೋಟೋ ವೈರಲ್ ಆಗಿದೆ.

ಖುಷ್ಬೂ ಸುಂದರ್ ಅವರ ಮಗಳ ಹೆಸರು ಅವಂತಿಕಾ ಸುಂದರ್. ಅವರು ಸಿನಿಮಾ ರಂಗದಲ್ಲಿ ಸದ್ಯಕ್ಕಂತೂ ಗುರುತಿಸಿಕೊಂಡಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಅವಂತಿಕಾ ಸ್ಕರ್ಟ್ನಲ್ಲಿ ಫೋಟೋ ಹಾಕಿದ್ದಾರೆ. ಮೈ ಮೇಲೆ ಹಾಕಿರುವ ಹಚ್ಚೆಗಳು ಹೈಲೈಟ್ ಆಗಿವೆ. ಇದಕ್ಕೆ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆ.

‘ಒಳ ಉಡುಪು ಹಾಕದೇ ಬಟ್ಟೆ ಹಾಕಿದ್ದೀರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ನೀವು ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಅವಂತಿಕಾ ಅವರು ಕೂದಲಿಗೆ ಬಣ್ಣ ಹಾಕಿದ್ದಾರೆ. ಈ ಬಗ್ಗೆಯೂ ಅಪಸ್ವರ ವ್ಯಕ್ತವಾಗಿದೆ. ‘ಮಗಳನ್ನು ಖುಷ್ಬೂ ಸರಿಯಾಗಿ ಬೆಳೆಸಿಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಖುಷ್ಬೂ ಸುಂದರ್ ಜೊತೆಗಿನ ಫೋಟೋಗಳನ್ನು ಅವಂತಿಕಾ ಹಂಚಿಕೊಂಡಿದ್ದು ಕಡಿಮೆ. ಅಮ್ಮನ ಜೊತೆ ಅಲ್ಲೊಂದು ಇಲ್ಲೊಂದು ಫೋಟೋ ಮಾತ್ರ ಇದೆ.




