ಬಗೆಬಗೆಯ ಕಾಸ್ಟ್ಯೂಮ್​ನಲ್ಲಿ ಮಿಂಚಿದ ಕರೀನಾ ಕಪೂರ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು

ನಟಿ ಕರೀನಾ ಕಪೂರ್​ ಖಾನ್​ ಅವರು ಮಕ್ಕಳ ಆರೈಕೆಯ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಅವರ ಕೆಲವು ರಂಗುರಂಗಿನ ಫೋಟೋಗಳು ಇಲ್ಲಿವೆ..

Mar 04, 2022 | 11:47 AM
TV9kannada Web Team

| Edited By: Madan Kumar

Mar 04, 2022 | 11:47 AM

ಖ್ಯಾತ ನಟಿ ಕರೀನಾ ಕಪೂರ್​ ಖಾನ್​ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 2 ದಶಕ ಕಳೆದಿದೆ. ಈಗಲೂ ಅವರು ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

1 / 6
ಹಿಂದಿ ಚಿತ್ರರಂಗದಲ್ಲಿ ಕರೀನಾ ಕಪೂರ್​ ಖಾನ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ಸಂಸಾರದ ಕಡೆಗೆ ಜಾಸ್ತಿ ಗಮನ ಹರಿಸಿದ್ದಾರೆ.

2 / 6
ಸೈಫ್​ ಅಲಿ ಖಾನ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಕರೀನಾ ಕಪೂರ್​ ಅವರು ನಟನೆಯಿಂದ ದೂರ ಉಳಿದುಕೊಂಡಿಲ್ಲ. ತಮಗೆ ಇಷ್ಟ ಆಗುವ ಸಿನಿಮಾ ಮತ್ತು ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಆ ಮೂಲಕ ಚಿತ್ರರಂಗದಲ್ಲಿ ಸಕ್ರಿಯ​ ಆಗಿದ್ದಾರೆ.

3 / 6
ಆಮಿರ್​ ಖಾನ್​ ಜೊತೆ ಕರೀನಾ ಕಪೂರ್​ ಖಾನ್​ ಅಭಿನಯಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆಗಸ್ಟ್​ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

4 / 6
ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಆಮಿರ್​ ಖಾನ್​ಗೆ ಜೋಡಿ ಆಗಿರುವ ಕರೀನಾ ಕಪೂರ್​ ಅವರು ಗರ್ಭಿಣಿ ಗೆಟಪ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

5 / 6
ಸೋಶಿಯಲ್​ ಮೀಡಿಯಾದಲ್ಲಿ ಕರೀನಾ ಕಪೂರ್​ ಅವರು ಆ್ಯಕ್ಟೀವ್​ ಆಗಿರುತ್ತಾರೆ. ಆಗಾಗ ವಿಶೇಷವಾದ ಫೋಟೋಶೂಟ್​ ಮಾಡಿಸಿ ಬಗೆಬಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿ ಇರುತ್ತಾರೆ. ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 87 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

6 / 6

Follow us on

Most Read Stories

Click on your DTH Provider to Add TV9 Kannada