Updated on: Oct 13, 2022 | 6:30 PM
ಬಾಲಿವುಡ್ನ ಫೇಮಸ್ ಕೇಶವಿನ್ಯಾಸಕ ಆಲಿಮ್ ಖಾನ್ ಬಳಿ ಅನೇಕ ಸೆಲೆಬ್ರಿಟಿಗಳು ತೆರಳುತ್ತಾರೆ. ಅವರ ಸೂಲನ್ಗೆ ತೆರಳಿ ನಾನಾ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ.
ಆಲಿಮ್ ಖಾನ್ ಸಲೂನ್ಗೆ ಮಹೇಶ್ ಬಾಬು ಅವರು ತೆರಳಿದ್ದಾರೆ. ಈ ಫೋಟೋವನ್ನು ಆಲಿಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹೇಶ್ ಬಾಬು ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೇರ್ಸ್ಟೈಲ್ ಬದಲಾಗಿದೆ. ಮಹೇಶ್ ಬಾಬು ಅವರು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಕೈ ಜೋಡಿಸಿದ್ದಾರೆ. ಆ ಚಿತ್ರದ ಲುಕ್ ಇದು ಎನ್ನಲಾಗಿದೆ.
ಇತ್ತೀಚೆಗೆ ಮಹೇಶ್ ಬಾಬು ಅವರು ತಾಯಿಯನ್ನು ಕಳೆದುಕೊಂಡರು. ಈ ಕಾರಣಕ್ಕೆ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿತ್ತು.
ಈಗ ಮಹೇಶ್ ಬಾಬು ಅವರು ಎಲ್ಲವನ್ನೂ ಮರೆತು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮಹೇಶ್ ಜತೆ ಅವರ ಮಗಳು ಸಿತಾರಾ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗುತ್ತಿದ್ದಾರೆ.