- TV9 Kannada Photo gallery MC Mary Kom pulls out of trials after injury, hopes of going in CWG 2022 end
CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಮೇರಿ ಕೋಮ್ ಕನಸು ಭಗ್ನ..!
CWG 2022: ಮುಂದಿನ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನತ್ತ ಗಮನಹರಿಸಲು ಅತ್ಯಂತ ಯಶಸ್ವಿ ಭಾರತೀಯ ಬಾಕ್ಸರ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದರು.
Updated on:Jun 10, 2022 | 7:41 PM



ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ 48 ಕೆಜಿ ಸೆಮಿಫೈನಲ್‌ನ ಮೊದಲ ಸುತ್ತಿನಲ್ಲಿ ಗಾಯಗೊಂಡಿದ್ದರಿಂದ್ದ ಹರಿಯಾಣದ ನೀತು ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದರು.

ಹಿಂದಿನ ಕಾಮನ್‌ವೆಲ್ತ್ ಗೇಮ್ಸ್ (2018) ಚಿನ್ನದ ಪದಕ ವಿಜೇತೆ ಮೇರಿ ಕೋಮ್ ಪಂದ್ಯದ ಮೊದಲ ಸುತ್ತಿನಲ್ಲೇ ಕಣಕ್ಕೆ ಇಳಿದಿದ್ದರು. 39ರ ಹರೆಯದ ಮೇರಿ ಕೋಮ್ ಆಟದ ನಡುವೆ ಸಮತೋಲನವನ್ನು ಕಳೆದುಕೊಂಡಿದ್ದರಿಂದ ಅವರ ಎಡಗಾಲಿಗೆ ಇಂಜುರಿಯಾಯಿತು. ನಂತರ ಮೇರಿ ಕೋಮ್ ರಿಂಗ್ ತೊರೆಯಬೇಕಾಯಿತು, ಹೀಗಾಗಿ ರೆಫರಿ ನೀತು ಅವರನ್ನು ವಿಜೇತೆ ಎಂದು ಘೋಷಿಸಿದರು.

ಮುಂದಿನ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನತ್ತ ಗಮನಹರಿಸಲು ಅತ್ಯಂತ ಯಶಸ್ವಿ ಭಾರತೀಯ ಬಾಕ್ಸರ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದರು.
Published On - 7:31 pm, Fri, 10 June 22

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



